ಬೆಂಗಳೂರು: ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಯನ್ನು ನಿಂದಿಸಿದ್ದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ರಶ್ಮಿಕಾ ಅಭಿಮಾನಿಯೊಬ್ಬ ತಮ್ಮ ಫ್ಯಾನ್ ಪೇಜ್ ನಲ್ಲಿ ರಶ್ಮಿಕಾ ಮಂದಣ್ಣ ಯೂಟ್ಯೂಬ್ ನ ರಾಣಿ. ಅವರು ನಟಿಸಿದ್ದ ಕನ್ನಡ ಚಿತ್ರದ ಎರಡು ಹಾಡು 5 ಕೋಟಿ ವೀಕ್ಷಣೆ ಪಡೆದಿದೆ. ಕನ್ನಡದ ನಟಿಯರಲ್ಲಿ ರಶ್ಮಿಕಾ ಅವರ 2 ಹಾಡು 5 ಕೋಟಿ ವ್ಯೂ ಕಂಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ತೆಲುಗಿನ 2 ಹಾಡುಗಳು 10 ಕೋಟಿ ವೀಕ್ಷಣೆ ಕಂಡಿದೆ. ರಶ್ಮಿಕಾ ಈಗ ಯೂಟ್ಯೂಬ್ ರಾಣಿ ಆಗಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಗೆ ವ್ಯಕ್ತಿಯೊಬ್ಬ ಹಲೋ ಬಾಸ್ ರಶ್ಮಿಕಾ ಯೂಟ್ಯೂಬ್ ರಾಣಿ ಎನ್ನುವುದು ದೊಡ್ಡ ಜೋಕ್. ಅವರು ಕೇವಲ ನಿಮ್ಮ ಫ್ಯಾನ್ ಪೇಜ್ ಗಳಿಗೆ ರಾಣಿ ಹೊರತು ಹೊರ ಜಗತ್ತಿಗೆ ಅಲ್ಲ. ಇಲ್ಲಿ ಯಾರೂ ಅವರನ್ನು ಕೇರ್ ಮಾಡುಲ್ಲ. ಈ ಪೋಸ್ಟ್ ಯೂಟ್ಯೂಬ್ ಅವರು ನೋಡಿದರೆ ಹುಚ್ಚರಂತೆ ನಗುತ್ತಾರೆ ಎಂದು ಕಮೆಂಟ್ ಮಾಡಿದ್ದನು.
ವ್ಯಕ್ತಿಯ ಕಮೆಂಟ್ ಗೆ ರಶ್ಮಿಕಾ, ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ. ಕಮೆಂಟ್ ಮಾಡುವ ಹಕ್ಕು ನಿಮಗೆ ಇದೆ. ನನ್ನ ಬಗ್ಗೆ ಕಮೆಂಟ್ ಮಾಡಿ ನಾನು ನಿಮ್ಮ ಕಮೆಂಟ್ ಸ್ವೀಕರಿಸುತ್ತೇನೆ. ಹಾಗಂತ ನೀವು ನನ್ನ ಅಭಿಮಾನಿಗಳ ಬಗ್ಗೆ ಈ ರೀತಿ ಮಾತನಾಡುವುದಕ್ಕೆ ನಿಮಗೆ ಯಾವುದೇ ಹಕ್ಕಿಲ್ಲ. ಈ ಸಂದೇಶ್ ಕೇವಲ ಈ ವ್ಯಕ್ತಿಗೆ ಅಲ್ಲ. ಇದು ನನ್ನ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics