ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್
ಬೆಂಗಳೂರು: "ನನಗೆ ಕನ್ನಡ ಸಿನಿಮಾಗಳ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ ಕೆಜಿಎಫ್ ಹಾಗೂ ಆ ಚಿತ್ರದ ನಾಯಕ ಯಶ್ ಬಗ್ಗೆ ಗೊತ್ತಿದೆ." ಒರು ಆಡಾರ್ ಲವ್ ಮೂಲಕ ಕಣ್ಸನ್ನೆ ಹುಡುಗಿ ಎಂದೇ ಖ್ಯಾತರಾದ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿದ ಮಾತಿದು. ಒಮರ್ ಲುಲು ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ಆಡಿಯೋ ಲಾಂಚ್ ಗಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು.
ಇದು ಅವರ ಅಭಿನಯದಲ್ಲಿ ಮೂಡಿಬರುತ್ತಿರುವ ಪ್ರಥಮ ಅಧಿಕೃತ ಕನ್ನಡ ಡಬ್ ಚಿತ್ರ "ಕಿರಿಕ್ ಲವ್ ಸ್ಟೋರಿ" ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವಾಗಿದ್ದು ಕನ್ನಡ ಆವೃತ್ತಿಯ ಚಿತ್ರದಲ್ಲಿ ಡಾ.ನಾಗೇಂದ್ರ ಪ್ರಸಾದ್ ಮತ್ತು ವಿ. ಮನೋಹರ್ ಹಾಡುಗಳ ಸಾಹಿತ್ಯ ರಚನೆ ಮಾಡಿದ್ದರೆ ಶ್ವೇತಾ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ.
"ಎಲ್ಲಾ ಭಾಷೆಗಳಲ್ಲಿ ನಟಿಸುವುದು ನನ್ನ ಕನಸು. ಆದರೆನಾನು ಉತ್ತಮ ಕಥೆ, ಗಟ್ಟಿ ಪಾತ್ರವನ್ನು ನಿರೀಕ್ಷಿಸುತ್ತೇನೆ. ಪ್ರೇಕ್ಷಕರು ನನ್ನ ಪಾತ್ರಗಳ ಮೂಲಕ ನನ್ನನ್ನು ನೆನೆಯುವಂತಾಗಬೇಕು." ಅವರು ಹೇಳಿದ್ದಾರೆ. "ನಬಗೆ ಕನ್ನಡದಲ್ಲಿ ಇದುವರೆಗೆ ಯಾವ ಆಫರ್ ಗಳು ಬಂದಿಲ್ಲ ಎಂದೂ ಪ್ರಿಯಾ ಹೇಳಿದ್ದಾರೆ.
ಇನ್ನು ಒರು ಆಡಾರ್ ಲವ್ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಹಾಗೆಯೇ ನಾಲ್ಕು ಭಾಷೆಗಲ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವ ಬಗ್ಗೆ ಕುತೂಹಲಗೊಂಡಿದ್ದೇನೆ ಎಂದಿರುವ ಪ್ರಿಯಾ ಪ್ರಕಾಶ್ "ಈ ಚಿತ್ರದಲ್ಲಿ ಹೈಸ್ಕೂಲ್ ದಿನಗಳ ಸ್ನೇಹ, ಪ್ರೀತಿಯನ್ನು ನವಿರಾಗಿ ತೋರಿಸಲಾಗಿದೆ.ಕಥೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ನಾನು ಭರವಸೆಯಿಂದ ಹೇಳುತ್ತೇನೆ. ಇಲ್ಲಿ ಪ್ರೇಕ್ಷಕರು ಶಾ ತಮ್ಮ ಶಾಲಾ ದಿನಗಳನ್ನು ನೆನೆಯುತ್ತಾರೆ."
ಪ್ರಸ್ತುತ ಬಿಕಾಂ ವ್ಯಾಸಂಗ ಮಾಡುತ್ತಿರ್ಯ್ವ ಪ್ರಿಯಾ ಬಾಲ್ಯದಿಂದಲೂ ನಟಿಯಾಗಬೇಕೆಂದು ಕನಸು ಕಾಣುತ್ತಿದ್ದರು.ಆಡಿಷನ್ ಮೂಲಕವೇ ಚಿತ್ರದಲ್ಲಿ ಅಭಿನಯಿಸುವ ಅವಕಾಶವನ್ನು ನಟಿ ಪಡೆದುಕೊಂಡರೆನ್ನುವುದುಅನ್ನು ಅವರು ವಿವರಿಸಿದ್ದಾರೆ."ಮೊದಲು ನಾನು ಈ ಚಿತ್ರದಲ್ಲಿ ಅತಿಥಿ ಪಾತ್ರಕ್ಕಾಗಿ ಆಯ್ಕೆಯಾಗಿದ್ದೆ. ಆದರೆ ನಿರ್ದೇಶಕರು ನನ್ನ ಅಭಿನಯ ಕೌಶಲ್ಯಗಳನ್ನು ಗುರುತಿಸಿದ ಬಳಿಕವಷ್ಟೇ ನಾಯಕಿಯಾಗಲು ಅವಕಾಶ ಒದಗಿಸಿದ್ದರು.
"ನಾನು ನಟಿಯಾಗಬೇಕೆನ್ನುವ ಕಾರಣ ಯಾವ ತರಬೇತಿಯನ್ನೂ ಪಡೆದವಳಲ್ಲ. ನಾನು ನಟಿಸಬೇಕೆಂದು ನಿರ್ಧರಿಸಿದ ದಿನ ಕನ್ನಡಿ ಮುಂದೆ ನಿಂತು ಅಭ್ಯಾಸದಲ್ಲಿ ತೊಡಗಿದ್ದೆ. "
ಶ್ರೀದೇವಿ ಬಂಗ್ಲೋ ಮೂಲಕ ಪ್ರಿಯಾ ಪ್ರಕಾಶ್ ಬಾಲಿವುಡ್ ನಲ್ಲಿ ಸಹ ಹೆಜ್ಜೆಯೂರಲು ಮುಂದಾಗಿದ್ದಾರೆ.ನಾನು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ, ಮತ್ತು ಈ ಕ್ಷಣದಲ್ಲಿ, ನಾನು ಕಥೆಯನ್ನು ಬಹಿರಂಗಪಡಿಸಲಾರೆ. ಅಲ್ಲದೆ ನಾನು ಚಿತ್ರದ ಟೀಸರ್ ಹುಟ್ಟು ಹಾಕಿದ ವಿವಾದದ ಕುರಿತೂ ಮಾತನಾಡಲ್ಲ. ಆದರೆ ಚಿತ್ರ ನಿಜವಾಗಿ ಕುತೂಹಲ ಮೂಡಿಸಿದೆ."ಅವರು ಹೇಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos