ಸಿನಿಮಾ ಸುದ್ದಿ

'ಆದಿಲಕ್ಷ್ಮಿ ಪುರಾಣ' ಒಂದು ಆಹ್ಲಾದಕರ ಬದಲಾವಣೆ: ರಾಧಿಕಾ ಪಂಡಿತ್

Nagaraja AB
ತಾಯ್ತನದ ಖುಷಿ ಅನುಭವಿಸುತ್ತಿರುವ ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್, ಈ ವಾರ  ಬಿಡುಗಡೆಯಾಗುತ್ತಿರುವ  'ಆದಿ ಲಕ್ಷ್ಮಿ ಪುರಾಣ'ದ ಚಿತ್ರವನ್ನು ಎದುರು ನೋಡುತ್ತಿದ್ದಾರೆ.
ರಾಧಿಕಾ ಪಂಡಿತ್ ವಿವಾಹ ನಂತರ ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆದರೆ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬೆರೆಸದೆ ಇತರ ಸಿನಿಮಾಗಳಂತೆ ಆ ಸಿನಿಮಾದಲ್ಲಿ ಅಭಿನಯಿಸಿರುವುದಾಗಿ ಹೇಳುತ್ತಾರೆ. ಕಥೆ ಇಷ್ಟವಾಯಿತು, ವಿಶೇಷವಾಗಿ ತಮ್ಮ ಪಾತ್ರ ಮೆಚ್ಚುಗೆಯಾಯಿತು ಎಂದು ಅವರು ಹೇಳಿದ್ದಾರೆ.
ವಿವಾಹಕ್ಕೂ ಮುಂಚಿತವಾಗಿ ಕಥೆಯನ್ನು ಒಪ್ಪಿಕೊಳ್ಳುತ್ತಿದ್ದೆ ಅಥವಾ ನಿರಾಕರಿಸುತ್ತಿದ್ದೆ. ಆದರೆ, ಈ ಬಾರಿ ವಿವಾಹದ ನಂತರ ಕಥೆ ಬಂದಿದ್ದಾಗಿ ಅವರು ವಿವರಿಸಿದ್ದಾರೆ.
ಮಹಿಳಾ ನಿರ್ದೇಶಕರೊಂದಿಗೆ ಕೆಲಸ ಮಾಡಲು ಕುತೂಹಲವಿತ್ತು. ಡಿಒಪಿ ಪ್ರೀತಾ ಜಯರಾಮ್ ಸೇರಿದಂತೆ ಸಹಾಯಕ ನಿರ್ದೇಶಕರು ಎಲ್ಲರೂ ಮಹಿಳೆಯರೇ ಆಗಿದ್ದು ಇದೊಂದು ಆಹ್ಲಾದಕರ ಬದಲಾವಣೆಯಾಗಿದೆ ಎಂದಿದ್ದಾರೆ. ಮಹಿಳೆಯರೇ ಸಲಹೆ ಸೂಚನೆ ನೀಡೋದು, ಕ್ಯಾಮರಾ ವರ್ಕ್ , ಪ್ರಸಾದನ ಸೇರಿದಂತೆ ಎಲ್ಲಾ ರೀತಿಯಲ್ಲಿ ಮಹಿಳೆಯರೇ ಪ್ರಮುಖ ಪಾತ್ರ ವಹಿಸಿದದ್ದು ಖುಷಿಯಾಯಿತು ಎನ್ನುತ್ತಾರೆ. 
ಇದೊಂದು ಸರಳ ಕಥೆ. ಸಿನಿಮಾದಲ್ಲಿ ಸಾಮಾನ್ಯ ಹಾಗೂ ಮನೋರಂಜನಾತ್ಮಕ ಪಾತ್ರಗಳಿವೆ. ಆದರೆ,  ಪಾತ್ರದಲ್ಲಿ  ಸೂಕ್ಷ್ಮನೋಟವಿದೆ. ಬಾಲ್ಯದಿಂದಲೂ ಕೀಳರಿಮೆ ಹೊಂದಿದ್ದ ಲಕ್ಷ್ಮಿ ಬೆಳೆಯುತ್ತಾ ಹೊಂದಂತೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಅಂಶವಾಗಿದೆ. ತನ್ನ ಪಾತ್ರವನ್ನು ಸಂತಸದಿಂದ ಮಾಡಿರುವುದಾಗಿ ರಾಧಿಕಾ ಪಂಡಿತ್ ಹೇಳುತ್ತಾರೆ.
ತನ್ನ ಬಾಲ್ಯದಲ್ಲಿ ಅಂತಹ ಸಂಕೀರ್ಣತೆಯನ್ನು ಹೊಂದಿರಲಿಲ್ಲ, ಮಾನವರಂತೆ ಬೆಳೆಸಿದ್ದಕ್ಕಾಗಿ ತಮ್ಮ ಪೋಷಕರಿಗೆ ಧನ್ಯವಾದ ಹೇಳುವ ರಾಧಿಕಾ, ತಾವೂ ಖುಷಿಯಿಂದ ಬೆಳೆದಿದ್ದಾಗಿ ಹೇಳುತ್ತಾರೆ.
SCROLL FOR NEXT