ಅಧೀರ ಲುಕ್ ನಲ್ಲಿ ಸಂಜಯ್ ದತ್
ನಟ ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ಅಧೀರ ಪಾತ್ರವನ್ನು ರಿವೀಲ್ ಮಾಡಿದೆ. ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ರಾಕಿ ಭಾಯ್ ಸ್ವಾಗತಿಸಿದ್ದಾರೆ.
60 ವಯಸ್ಸಲ್ಲೂ ಖಳನಾಯಕ್ ಚಾರ್ಮಿಂಗ್ ಬಿಟ್ಟಿಲ್ಲ, ನಿಮ್ಮ ಪರಂಪರೆ ಹೀಗೆ ಮುಂದುವರಿಯಲಿ, ಹ್ಯಾಪಿ ಬರ್ತ್ ಡೇ. ವೆಲ್ ಕಮ್ ಸರ್ ಎಂದು ನಟ ಯಶ್ ಟ್ವೀಟ್ ಮಾಡಿದ್ದಾರೆ.
ಸಂಜಯ್ ದತ್ ಕೆಲಸ ಮಾಡುತ್ತಿರುವು ಖುಷಿಯ ಸಂಗತಿ, ಆರಂಭದಿಂದಲೂ ಕೆಜಿಎಫ್ ತಂಡದ ಮೊದಲ ಆದ್ಯತೆ ಸಂಜಯ್ ದತ್ ಆವರೇ ಆಗಿದ್ದರು. ಆದರೆ ಕನ್ನಡದಲ್ಲಿ ರೀಲಿಸ್ ಆಗುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಜಿಎಫ್ ಮೊದಲ ಭಾಗ ತಯಾರಾಗಿತ್ತು., ನಿರ್ದೇಶಕ ಪ್ರಶಾಂತ್ ನೀಲ್ ಅಧೀರ್ ಪಾತ್ರದ ಬಗ್ಗೆ ಕಥೆ ಹೇಳಿದಾಗ, ಸಂಜಯ್ ದತ್ ಅವರಂಥವರು ಈ ಪಾತ್ರಕ್ಕೆ ಹೊಂದುತ್ತಾರೆ ಎಂದು ಹೇಳಿದ್ದರು. ಹೀಗಾಗಿ ಚಿತ್ರದ ಆರಂಭದಿಂದಲೂ ದತ್ ಅವರ ನಮ್ಮ ಮನಸ್ಸಿಲನಲ್ಲಿದ್ದರು ಎಂದು ಯಶ್ ಹೇಳಿದ್ದಾರೆ.
ಕೆಜಿಎಫ್ ಬಹುದೊಡ್ಡ ಪ್ರಾಜೆಕ್ಟ್, ಇದರ ಜೊತೆಗೆ ಇಂಥಹ ಹೆಚ್ಚುವರಿ ವಿಶೇಷತೆಗಳು ನಮಗೆ ಹೆಮ್ಮೆ ತರುತ್ತದೆ, ಕಥೆ ಉತ್ತಮವಾಗಿದ್ದರೇ ಬೇರೆಲ್ಲಾ ಕೆಲಸಗಳು ತಾನಾಗಿಯೇ ಬಂದು ತನ್ನ ಸ್ಥಾನದಲ್ಲಿ ಕುಳಿತುಕೊಳ್ಳುತ್ತದೆ, ಸಂಜಯ್ ದತ್ ಒಬ್ಬ ಅದ್ಭುತ ನಟ, ದೇಹದಾರ್ಡ್ಯತೆ, ಇಮೇಜ್, ಪರಂಪರೆ ಎಲ್ಲವೂ ಇದಕ್ಕೆ ಹೊಂದುತ್ತದೆ, ಕೆಜಿಎಫ್-2ಗೆ ಮತ್ತೊಂದು ಮೌಲ್ಯಯುತವಾಗಿದೆ ಎಂದು ಯಶ್ ವಿವರಿಸಿದ್ದಾರೆ.
ನಾನು ದತ್ ಸಿನಿಮಾ ನೋಡಿಕೊಂಡು ಬೆಳೆದವನು, ಸಿನಿಮಾದಲ್ಲಿ ದತ್ ಅವರದ್ದು ವಿಶೇಷ ರೀತಿಯ ಡೈಲಾಗ್ ಡೆಲಿವರಿ ಮತ್ತು ನಟನೆ ಇರುತ್ತದೆ. ನಾನು ಹೆಚ್ಚಾಗಿ ಸಂಜು ಬಾಬಾ ಅವರನ್ನು ನೆಗೆಟಿವ್ ರೋಲ್ ಗಳಲ್ಲಿ ನೋಡಿದ್ದೇನೆ,. ಈಗಿನ ಟ್ರೆಂಡ್ ಕೂಡ ಅವರಿಗೆ ಒಗ್ಗುತ್ತದೆ ಎಂದು ವಿವರಿಸಿದ್ದಾರೆ.
ಅವರ ಜೀವನ ಶೈಲಿ, ಅದನ್ನೂ ಪ್ರೆಸೆಂಟ್ ಮಾಡುವ ರೀತಿ ಎಲ್ಲವನ್ನೂ ನೋಡಿ, ಪ್ರಸಕ್ತ ಸಮಯಕ್ಕಿಂತ ಅವರು ಮುಂದೆ ಇದ್ದಾರೆ ಎಂದು ನನಗೆ ಅನ್ನಿಸುತ್ತಿತ್ತು ಎಂದು ಹೇಳಿದ್ದಾರೆ, ಮುನ್ನಾಬಾಯ್ ಎಂಬಿಬಿಎಸ್ ಹಾಗೂ ಪಿಕೆಯಲ್ಲಿನ ಅವರ ಪಾತ್ರಗಳನ್ನು ನೋಡಿ ನಾನು ಎಂಜಾಯ್ ಮಾಡಿದ್ದೇನೆ, ಅವರ ಹಲವು ಸಿನಮಾಗಳು ನನ್ನ ಮೇಲೆ ಪ್ರಭಾವ ಬೀರಿವೆ, ಪಾತ್ರಗಳಿಗೆ ತುಂಬುವ ಮೌಲ್ಯ ನನಗೆ ತುಂಬಾ ಹಿಡಿಸುತ್ತದೆ, ಹಾಗೆಯೇ ಅಧೀರ ಪಾತ್ರವೂ ಕೂಡ ಉತ್ತಮವಾಗಿ ಮೂಡಿ ಬರಲಿದ್ದು ಪ್ರೇಕ್ಷಕರು ಎಂಜಾಯ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos