ಪ್ರೀತಮ್ ಗುಬ್ಬಿ ನಿರ್ದೇಶನದ 99 ಚಿತ್ರದಲ್ಲಿ ಬಾಲಕಿ ಭಾವನಾ ಪಾತ್ರದಲ್ಲಿ ನಟಿಸಿದ್ದ ಸಮೀಕ್ಷಾ ಈಗ ಫ್ಯಾನ್ ಚಿತ್ರದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫ್ಯಾನ್ ಚಿತ್ರಕ್ಕೆ ಬಲವಳ್ಳಿ ದರ್ಶಿತ್ ಭಟ್ ನಿರ್ದೇಶನ ಇದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.
ಆರ್ಯನ್ ಹಾಗೂ ಅದ್ವಿತಿ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಎರಡನೇ ಪ್ರಮುಖ ಪಾತ್ರದಲ್ಲಿ ಸಮೀಕ್ಷಾ ನಟನೆ ಮಾಡಲಿದ್ದಾರೆ.