ಸಿನಿಮಾ ಸುದ್ದಿ

ವಿಠಲ್ ಭಟ್ ಸಸ್ಪೆನ್ಸ್ ಥ್ರಿಲ್ಲರ್ 'ಹ್ಯಾಂಗೋವರ್' ಬಿಡುಗಡೆಗೆ ಸಜ್ಜು

Raghavendra Adiga
ವೀಠಲ್ ಭಟ್ ಅವರ ಮುಂದಿನ ಚಿತ್ರಕ್ಕೆ ಶೀರ್ಷಿಕೆ ಸಿಕ್ಕಿದೆ. ಹಾಲಿವುಡ್ ಶೈಲಿಯಲ್ಲಿ ತಮ್ಮ ಚಿತ್ರಕ್ಕೆ ನಿರ್ದೇಶಕರು "ಹ್ಯಾಂಗೋವರ್" ಎಂದು ಹೆಸರಿಟ್ಟಿದ್ದಾರೆ. ಆದರೆ ಈ ಚಿತ್ರ ಯಾವುದೇ ಹಾಲಿವುಡ್ ಚಿತ್ರದಿಂದ ಪ್ರೇರಣೆ ಪಡೆದಿಲ್ಲ. ಇದು ಮದ್ಯಪಾನದ ಪರಿಣಾಮ ಹಾಗೂ ಆ ನಂತರದ ಹ್ಯಾಂಗೋವರ್ ಅನ್ನು ತೋರಿಸಲಿದೆ ಎಂದು ಅವರು ಹೇಳಿದ್ದಾರೆ.
ಚಿತ್ರದಲ್ಲಿ ಮೂರು ಯುವಕ ಹಾಗೂ ಮೂವರು ಯುವತಿಯರು ಪ್ರಧಾನ ಪಾತ್ರದಲ್ಲಿದ್ದು ಅವರೊಂದು ಕಾಕ್ ಟೈಲ್ ಪಾರ್ಟಿಯಲ್ಲಿ ಪಾಲ್ಗೊಳ್ಳುವುದರ ಸುತ್ತ ಕಥೆ ಇದ್ದು ಇದರಲ್ಲಿ ಓರ್ವ ಯುವತಿ ಆಕಸ್ಮಿಕವಾಗಿ ಮೃತಪಟ್ಟಾಗ ಕಥೆಗೆ ಟ್ವಿಸ್ಟ್ ದೊರಕುತ್ತದೆ. ಇದು ಕಥೆಯ ಒಂದು ಸಾರಾಂಶ ಮಾತ್ರ. ತನಿಖಾಧಿಕಾರಿ ಈ ಪ್ರಕರಣವನ್ನು ಹೇಗೆಲ್ಲಾ ಬೇಧಿಸಲಿದ್ದಾನೆ ಎಂಬುದು ಕಥೆಯ ಇನ್ನೊಂದು ಭಾಗವಾಗಿರಲಿದೆ ಎಂದು ನಿರ್ದೇಶಕ ಹೇಳಿದ್ದಾರೆ.
"ಈ ಚಿತ್ರದಲ್ಲಿ ಮಕ್ಕಳು ತಮಗೆ ದೊರಕಿದ ಸ್ವಾತಂತ್ರವನ್ನು ದುರ್ಬಳಕೆ ಮಾಡಿಕೊಂಡಲ್ಲಿ ಏನಾಗಲಿದೆ ಎಂಬುದರ ಕುರಿತ ಸಂದೇಶವು ಇದೆ"
ಭರತ್ ರಾಜ್, ಚಿರಾಗ್ ಮಹಲ್ಲಿ ಭಿಕ್ಷು, ಶಹನ್ ಮೋನಮ್ಮ, ನಂದಿನಿ ನಟರಾಜ್ ಸೇರಿ ಹಲವಾರು ಹೊಸಮುಖಗಳು ಈ ಚಿತ್ರದಲ್ಲಿದೆ. ಅದಲ್ಲದೆ ತೆಲುಗಿನ ಕಲಾವಿದ ಶಫಿ ಸಹ ಇದರಲ್ಲಿ ಪಾತ್ರ ನಿರ್ವಹಿಸಿದ್ದಾರೆ. 
ನೀನಾಸಂ ಅಶ್ವಥ್, ಸ್ಪಂದನಾ ಕೈಲಾಶ್, ನಿರುಪಮ್ ಶೆಟ್ಟಿ ಸಹ "ಹ್ಯಾಂಗೋವರ್" ನಲ್ಲಿದ್ದು ನೀತೂ ಶೆಟ್ಟಿ ಚಿತ್ರದಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ಪ್ರೀತಿ ಕಿತಾಬು" ಬಳಿಕ ವಿಠಲ್ ಶೆಟ್ಟಿಯ ಎರಡನೇ ಚಿತ್ರ ಇದಾಗಿದ್ದು "ಹ್ಯಾಂಗೋವರ್" ಈ ವಾರ ತೆರೆ ಕಾಣುತ್ತಿದೆ.
SCROLL FOR NEXT