ಐ ಲವ್ ಯೂ ಸಿನಿಮಾ ಪೋಸ್ಚರ್ 
ಸಿನಿಮಾ ಸುದ್ದಿ

ಹಾಡಿನ ಬಗ್ಗೆ ಪತ್ನಿ ಪ್ರಿಯಾಂಕಾ ಗರಂ ಆಗಿದ್ದರೂ, ಐ ಲವ್ ಯೂ ಸಿನಿಮಾ ಬಗ್ಗೆ ಉಪೇಂದ್ರ ಹೇಳಿದ್ದೇನು?

ಕಳೆದದ್ದು ನೆನಪು, ಭವಿಷ್ಯ ಕನಸು,ಕೇವಲ ಈ ಕ್ಷಣ ಮಾತ್ರ ಪ್ರೀತಿ ಎಂದು ನಟ ನಿರ್ದೇಶಕ ಉಪೇಂದ್ರ ತಮ್ಮ ಮುಂದಿನ ಸಿನಿಮಾ ಐ ಲವ್ ಯೂ ಬಗ್ಗೆ ಹೇಳಿದ ಮಾತಿದು...

ಕಳೆದದ್ದು ನೆನಪು, ಭವಿಷ್ಯ ಕನಸು, ಕೇವಲ ಈ ಕ್ಷಣ ಮಾತ್ರ 'ಪ್ರೀತಿ' ಎಂದು ನಟ ನಿರ್ದೇಶಕ ಉಪೇಂದ್ರ ತಮ್ಮ  ಮುಂದಿನ ಸಿನಿಮಾ ಐ ಲವ್ ಯೂ ಬಗ್ಗೆ ಹೇಳಿದ ಮಾತಿದು.
ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾ ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಚಿತಾ ರಾಮ್ ಮತ್ತು ಸೋನು ಗೌಡ ನಾಯಕಿಯರಾಗಿ ನಟಿಸಿದ್ದಾರೆ.
ಈ ಕ್ಷಣ ಪ್ರೀತಿ, ಅದನ್ನು ಕೇವಲ ಅನುಭವಿಸಬೇಕು, ವಿವರಿಸಲಾಗದು, ಆದರೆ ಇಂದಿನ ದಿನಗಳಲ್ಲಿ ವರ್ತಮಾನವನ್ನು ಎಂಜಾಯ್ ಮಾಡುತ್ತಿಲ್ಲ, ಅಗರ ಬದಲಿಗೆ ಭೂತಕಾಲಕ್ಕೆ ಹೋಗುತ್ತಾರೆ ಇಲ್ಲವೇ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಇರುತ್ತಾರೆ, ತಾವು ಪ್ರೇಮಿಗಳಂತೆ ತೇರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.
ಆಧುನೀಕ ಪೀಳಿಗೆ ಪ್ರೀತಿಯನ್ನು ಹೇಗೆ ನೋಡುತ್ತಿದೆ, ಕೇವಲ ದೈಹಿಕ ಆಕರ್ಷಣೆಯೇ ಪ್ರೀತಿ ಎಂಬಂತೆ ನೋಡುತ್ತಾರೆ ಎಂಬ ಬಗ್ಗೆ ಐ ಲವ್ ಯೂ ಸಿನಿಮಾ ಕಥೆಯಿದೆ, ಪ್ರೀತಿ ಎಂಬುದು ಕೇವಲ ಮಹಿಳೆ ಮತ್ತು ಪುರುಷನ ನಡುವಿನದ್ದು ಮಾತ್ರವಲ್ಲ, ಪ್ರೀತಿ ಶಾಶ್ವತ, ಅದ್ಭುತ ಅನುಭವ ಎಂದು ಹೇಳಿದ್ದಾರೆ,
ತಮ್ಮ ಹಿಂದಿನ ಸಿನಿಮಾಗಳಲ್ಲಿ ತಮ್ಮ ವರ್ತಮಾನವನ್ನು ಹೇಗೆ ಅನುಭವಿಸಬೇಕು  ಎಂಬ ಬಗ್ಗೆ ಸರಳವಾಗಿ ಈ ಸಿನಿಮಾದಲ್ಲಿ ತಿಳಿಸಲಾಗಿದೆ, ಇದು ಚಂದ್ರು ಅವರ ವರ್ಸನ್, ಇಂದಿನ ದಿನಗಳಲ್ಲಿ ಪ್ರಪಂಚಾದ್ಯಂತ ಪ್ರೀತಿಯನ್ನು ಹೇಗೆ ನೋಡಲಾಗುತ್ತದೆ  ಆದರೆ ಪ್ರೀತಿ ಹೇಗಿರಬೇಕು ಎಂಬದು ಕಥಾ ಹಂದರವಾಗಿದೆ.
ಪ್ರೀತಿಯ ಭಾವನೆಗಳು ನಿರ್ದೇಶಕರ ಕನಸಾಗಿದೆ ಎಂದು ಹೇಳಿರುವ ಉಪೇಂದ್ರ ಕಥೆ ನನ್ನನ್ನು ಇಂಪ್ರೆಸ್ ಮಾಡಿತು, ಪ್ರೇಕ್ಷಕರಿಗೂ ಕೂಡ ಇಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಐ ಲವ್ ಯೂ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವಿದೆ ಇದೊಂದು ಉತ್ತಮ ಪ್ಯಾಕೇಜ್ ಎಂದು ಹೇಳಿರುವ ಉಪೇಂದ್ರ ಸದ್ಯ ಪ್ರಜಾಕೀಯದಲ್ಲಿ ಬ್ಯುಸಿಯಾಗಿದ್ದಾರೆ.  ಇದು ರಾಜಕೀಯ ಪಕ್ಷವಲ್ಲ ಪ್ರಜೆಗಳ ಪಕ್ಷ,  ಪ್ರತಿಯೊಬ್ಬರು ರಾಜನಂತೆ ಭಾವಿಸಬೇಕು, ರಾಜನಂತೆ ಬದುಕಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT