ಚಿಕ್ಕಣ್ಣ ಮತ್ತು ಮಂಜು ಮಾಂಡವ್ಯ 
ಸಿನಿಮಾ ಸುದ್ದಿ

ಹೀರೋ ಆಗಿ ಪ್ರಮೋಷನ್ ಪಡೆದ ಕಮಿಡಿಯನ್ ಚಿಕ್ಕಣ್ಣ!

ಶರಣ್ ಮತ್ತು ಕೋಮಲ್ ನಂತರ ಮತ್ತೊಬ್ಬ ಹಾಸ್ಯನಟ ಚಿಕ್ಕಣ್ಣ ಹೀರೋ ಆಗಿ ಬದಲಾಗುತ್ತಿದ್ದಾರೆ. ಉಪಮಾತಿ ಬ್ಯಾನರ್ ನಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ. ...

ಶರಣ್ ಮತ್ತು ಕೋಮಲ್ ನಂತರ ಮತ್ತೊಬ್ಬ ಹಾಸ್ಯನಟ ಚಿಕ್ಕಣ್ಣ ಹೀರೋ ಆಗಿ ಬದಲಾಗುತ್ತಿದ್ದಾರೆ. ಉಪಮಾತಿ ಬ್ಯಾನರ್ ನಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ. 
ರಾಬರ್ಟ್, ಮದಗಜ ನಿರ್ದೇಶಕ  ಮಂಜು ಮಾಂಡವ್ಯ ಚಿಕ್ಕಣ್ಣ ನಟನೆಯ ಇನ್ನೂ ಹೆಸರಿಡದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಭರತ ಬಾಹುಬಲಿ ಎಂಬ ಸಿನಿಮಾದಲ್ಲಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಜೊತೆಯಾಗಿ ನಟಿಸುತ್ತಿದ್ದಾರೆ,.ಇದೇ ಸಿನಿಮಾದಲ್ಲಿ ನಿರ್ದೇಶಕರಾಗಿದ್ದ ಮಂಜು ಮಾಂಡವ್ಯ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ.
9 ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಚಿಕ್ಕಣ್ಣ ಯಶ್ ನಟನೆಯ ರಾಜಾ ಹುಲಿ ಮತ್ತು ಶರಣ್ ನಟನೆಯ ಅಧ್ಯಕ್ಷ ಸಿನಿಮಾಗಳ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು, ಸದ್ಯ ಹೀರೋ ಆಗಿ ಚಾಲೆಂಜ್ ಸ್ವೀಕರಿಸಿದ್ದಾರೆ,
ಚಿಕ್ಕಣ್ಣ ಅವರ ಅವರು ತೆರೆಯ ಮೇಲೆ ಬಂದರೆ ನಗುವಿಗೆ ಕೊರೆತಯಿರುವುದಿಲ್ಲ, ಅವರು ಹೀರೋ ಆಗಿ ನಟಿಸುತ್ತಿರುವ  ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಹೀರೋ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎಂದು ನಿರ್ದೇಶಕ ತಿಳಿಸಿದ್ದಾರೆ, ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರಲಿದೆ, ಇದರ ಜೊತೆಗೆ ಭರತ ಬಾಹುಬಲಿ ಸಿನಿಮಾ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾದಲ್ಲಿ ಹಾಸ್ಯನಟರಾಗಿದ್ದವರು ನಾಯಕ ನಟರಾಗಿ ಬದಲಾಗಿ ಯಶಸ್ವಿಯಾಗಿರುವುದಕ್ಕೆ ಶರಣ್ ಸಾಕ್ಷಿಯಾಗಿದ್ದಾರೆ, ಶರಣ್ ರ್ಯಾಂಬೋ ನಾಯಕನಾಗಿ ಪಯಣ ಆರಂಭಿಸಿದರು, ಜೊತೆಗೆ ಕೋಮಲ್ ಕೂಡ ನಾಯಕನಾಗಿ ಯಶಸ್ವಿಯಾದವರು, ಚಿಕ್ಕಣ್ಣ ಕೂಡ ಹೀರೋ ಆಗಿ ಕಾಲಿಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT