2019 ಆಶಿಕಾ ರಂಗನಾಥ್ ಪಾಲಿಗೆ ಬಿಡುವಿಲ್ಲದ ವರ್ಷ. ಶರಣ್ ಅಭಿನಯರ ರ್ಯಾಂಬೋ-2 ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರಿಗೆ ಚಿತ್ರದ ಅದ್ಭುತ ಯಶಸ್ಸು ಹತ್ತು ಹಲವು ಅವಕಾಸವನ್ನು ಒದಗಿಸಿಕೊಟ್ಟಿದೆ.
ಅವರು ಪ್ರಸ್ತುತ ಸುನಿ ನಿರ್ದೇಶನದ "ಅವರಾತ ಪುರುಷ" ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರೆ, ಇಶಾನ್ ಜತೆಯಾಗಿ ಪವನ್ ಒಡೆಯರ್ ಅವರ "ರೈಮೋ" ಚಿತ್ರದಲ್ಲಿ ಸಹ ಇವರ ಸ್ಥಾನ ಪಕ್ಕಾ ಆಗಿದೆ.
ಇಷ್ಟೇ ಅಲ್ಲದೆ ಆಶಿಕಾ ಪ್ರಜ್ವಲ್ ದೇವರಾಜ್ ಅಭಿನಯದ ಪಿಸಿ ಶೇಖರ್ ಅವರ ಮುಂಬರುವ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿಉದ್ದಾರೆ ಇನ್ನೂ ಹೆಸರಿಡಲಾಗಿರುವ ಈ ಚಿತ್ರದಲ್ಲಿ ನಾಯಕನನ್ನು ಪೂರ್ಣ ಪ್ರಮಾಣದ ಗ್ಯಾಂಗ್ ಸ್ಟರ್ ಆಗಿ ತೋರಿಸಲಾಗುತ್ತಿದೆ.ಇದರಲ್ಲಿ ನಟಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ.ನಿರ್ದೇಶಕರ ಪ್ರಕಾರ, ಇದು ನಾಯಕಿಗೆ ಸವಾಲಿನ ಪಾತ್ರವಾಗಿದೆ
ಪ್ರಮುಖ ಪಾತ್ರವರ್ಗತಂತ್ರಜ್ಞರು, ಉಳಿದ ನಟರು ಮತ್ತು ಚಿತ್ರದ ಶೀರ್ಷಿಕೆಯನ್ನು ಅಂತಿಮಗೊಳಿಸುವುದರ ಕಡೆಗೆ ಈಗ ನಿರ್ದೇಶಕರು ಗಮನ ಇಟ್ಟಿದ್ದಾರೆ. "ನಾವು ಜುಲೈನಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸುತ್ತಿದ್ದೇವೆ" ಎಂದು ಶೇಖರ್ ಪತ್ರಿಕೆಗೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos