"ಹಳೆ ಡವ್ ನೆನಪಲಿ" ಎಂಬ ಆಡುಭಾಷೆ ಶೈಲಿಯ ಶೀರ್ಷಿಕೆಯೊಡನೆ ಟಿ. ಮಾರುತಿ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ. ಎಲ್ಲರ ಜೀವನದಲ್ಲಿ ಒಮ್ಮೆ ಪ್ರೀತಿಯಾಗಿಯೇ ಇರಲಿದೆ. ಪ್ರೀತಿಯ ವಿಚಾರದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಬಾರಿ ಸಿಕ್ಕಿಬಿದ್ದಿರುತ್ತಾನೆ ಎಂದು ಅರ್ಥೈಸುವ ಈ ಶಿರ್ಷಿಕೆಯ ಚಿತ್ರ ಆಗಸ್ಟ ನಲ್ಲಿ ಚಿತ್ರೀಕರಣಕ್ಕೆ ಮುನ್ನುಡಿ ಬರೆಯಲಿದೆ."ಪ್ರೀತಿ ಸಾರ್ವತ್ರಿಕವಾಗಿದೆ ಎಂದು ನಾನು ಭಾವಿಸಿದೆ ಮತ್ತು ಇದು ಆಕರ್ಷಕ ನುಡಿಗಟ್ಟಾಗಿದೆ.ಹಾಗಾಗಿ ಕಥೆಯೂ ಸಹ ಇಂತಹುದೇ ಶೀರ್ಷಿಕೆಯನ್ನು ಬಯಸುತ್ತದೆ" ಟಿ ಮಾರುತಿ ಹೇಳುತ್ತಾರೆ,
ಸಂಭಾಷಣಾಕಾರರಾಗಿದ್ದ ಮಾರುತಿ "ವಿಶ್ವಾಮಿತ್ರ" ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾಗಿದ್ದರು. ಆ ಚಿತ್ರವಿನ್ನೂ ತೆರೆ ಕಾಣಬೇಕಾಗಿದ್ದು ಇದೀಗ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ."ಹಳೆ ಡವ್ ನೆನಪಲ್ಲಿ" ಚಿತ್ರದಲ್ಲಿ ನಕುಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರೇಮಕಥೆಯನ್ನು ಜಾತಿ ಆಧಾರಿತ ನಂಬಿಕೆಗಳ ಹಿನ್ನೆಲೆಯಲ್ಲಿ ತೋರಿಸಲಾಗಿದೆ ಎಂದ ನಿರ್ದೇಶಕ "ಜಗತ್ತಿನಲ್ಲಿ ಧರ್ಮ ಮೊದಲಿತ್ತೋ ಅಥವಾ ಮಾನವೀಯ ಮೌಲ್ಯವೋ ಎಂದು ಚಿತ್ರವು ಶೋಧಿಸುತ್ತದೆ. ನಿರಾಶೆಯ ಕಾರ್ಮೋಡವನ್ನು ಸರಿಸಿ ಹೊಸ ಬೆಳಕಿಗೆ ಮುಖವ್ಒಡ್ಡುವುದು ಹೇಗೆಂದು ಚಿತ್ರ ಹೇಳಲಿದೆ ಎನ್ನುವ ನಿರ್ದೇಶಕ ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎಂದೂ ತಿಳಿಸಿದರು.
"ನಾನು ಇನ್ನೂ ನಾಯಕಿ ಮತ್ತು ಉಳಿದ ಪಾತ್ರಧಾರಿಗಳನ್ನು ಅಂತಿಮಗೊಳಿಸಿಲ್ಲ ಗಿರಿಧರ್ ನಿರ್ಮಿಸಿದ ಈ ಚಿತ್ರನಿರಂಜನ್ ಬಾಬು ಛಾಯಾಗ್ರಹಣ ವಿನೀತ್ ರಾಜ್ ಮೆನನ್ ಗೀತ ಸಂಯೋಜನೆಯನ್ನೊಳಗೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos