ಬೆಳ್ಳಿತೆರೆಯಲ್ಲಿ ಈ ವಾರ ಮದುವೆ ಎಂಬ ಸಿನಿಮಾ ತೆರೆಗೆ ಬರುತ್ತಿದೆ. ಹಿಂದು ಕೃಷ್ಣ ನಿರ್ದೇಶನದ ಚಿತ್ರದಲ್ಲಿ 1950ರ ದಶಕದ ಮದುವೆ ಸಂಸ್ಕೃತಿಯನ್ನು ತೋರಿಸಲಾಗುತ್ತಿದೆ.
ನಾಯಕಿ ಆರೋಹಿ ಗೌಡಗೆ ಕ್ಯಾಮರಾ ಎದುರಿಸುವುದು, ನಟನೆ ಕಲಿಯುವುದು ಮುಖ್ಯವಾಗಿತ್ತು. ಹೀಗಾಗಿ ತಾನು ಯಾವ ಚಿತ್ರದಿಂದ ನಟನೆಗೆ ಪಾದಾರ್ಪಣೆ ಮಾಡಬೇಕು, ಯಾವುದನ್ನು ಒಪ್ಪಿಕೊಳ್ಳಬೇಕು ಎಂಬ ಬಗ್ಗೆ ಯೋಚಿಸಲಿಲ್ಲವಂತೆ. ಚಿತ್ರದ ಕಥೆ ಚೆನ್ನಾಗಿರಬೇಕು ಎಂಬುದು ಮಾತ್ರ ನನಗೆ ಮುಖ್ಯವಾಗಿತ್ತು. ನಾನು ಚಿತ್ರರಂಗಕ್ಕೆ ಬರುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ಆದರೆ ಈ ಪಾತ್ರ ಮೂಲಕ ನನ್ನ ತಂದೆಗೆ ನಾನು ಏನೆಂದು ಸಾಬೀತುಪಡಿಸಬೇಕು ಎನ್ನುತ್ತಾರೆ 23 ವರ್ಷದ ಆರೋಹಿ.
ಎರಡು ವರ್ಷಗಳ ಹಿಂದೆ ಮದುವೆ ಚಿತ್ರದ ಶೂಟಿಂಗ್ ನಡೆದಿತ್ತಂತೆ. ಹಿಂದೂ ಸಂಸ್ಕೃತಿಯಲ್ಲಿ ಮದುವೆ ಸಂಪ್ರದಾಯ ಒಂದು ಕುತೂಹಲಕಾರಿ ವಿಷಯ. 1950ರ ದಶಕದಲ್ಲಿ ಹಳ್ಳಿಯಲ್ಲಿ ಮದುವೆಗಳಲ್ಲಿ ಇದ್ದ ಸಂಪ್ರದಾಯಗಳಲ್ಲಿ ಅರ್ಧದಷ್ಟು ಕೂಡ ಈಗಿಲ್ಲ ಎನ್ನುತ್ತಾರೆ ಆರೋಹಿ.