ಕೆಜಿಎಫ್ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಕೆಜಿಎಫ್' ಯಶಸ್ಸು ಕನ್ನಡ ಚಲನಚಿತ್ರೋದ್ಯಮದ ನೈತಿಕತೆಯನ್ನು ಹೆಚ್ಚಿಸಿದೆ- ಯಶ್

ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣ ಬಾಚಿದ ಕೆಜಿಎಫ್ ಚಾಪ್ಟರ್ 1 ಯಶಸ್ಸು ಕನ್ನಡ ಚಲನಚಿತ್ರೋದ್ಯಮದ ನೈತಿಕತೆಯನ್ನು ಹೆಚ್ಚಿಸಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣ ಬಾಚಿದ ಕೆಜಿಎಫ್ ಚಾಪ್ಟರ್ 1 ಯಶಸ್ಸು ಕನ್ನಡ ಚಲನಚಿತ್ರೋದ್ಯಮದ ನೈತಿಕತೆಯನ್ನು ಹೆಚ್ಚಿಸಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್ ಮಾಡಿದ್ದು, ಕನ್ನಡ  ಚಿತ್ರಗಳಿಗೆ ಮಾರುಕಟ್ಟೆಯನ್ನು  ವಿಸ್ತರಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ವಿಶ್ವದಾದ್ಯಂತ 200 ಕೋಟಿ ಗೂ ಹೆಚ್ಚು ಲಾಭ  ಮಾಡುವ ಮೂಲಕ ವಿಶಿಷ್ಠ ದಾಖಲೆ  ಬರೆದಿದೆ. ಕನ್ನಡ ಚಿತ್ರವೊಂದು ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿತ್ತಲ್ಲದೇ,ಎಲ್ಲಾ ಭಾಷೆಯಲ್ಲೂ ಉತ್ತಮ ರೀತಿಯಲ್ಲಿ ಪ್ರದರ್ಶನ ಕಂಡಿತ್ತು.

ಕೆಜಿಎಫ್ ಯಶಸ್ಸು ಕನ್ನಡಕ್ಕೆ ಚಿತ್ರೋದ್ಯಮಕ್ಕೆ ಪ್ರಮುಖವಾಗಿದೆ. ವಿಶೇಷವಾಗಿ ನಮ್ಮ ತಂತ್ರಜ್ಞಾನರು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿದೆ. ಈ ಚಿತ್ರದ ಯಶಸ್ಸು ಕನ್ನಡ ಚಿತ್ರೋದ್ಯಮದ ನೈತಿಕತೆಯನ್ನು ಹೆಚ್ಚಿಸಿದ್ದು, ಪ್ರಶಾಂತ್ ನೀಲ್ ಅವರ ಪ್ರತಿಭೆಗೆ ನ್ಯಾಯ ಸಿಕ್ಕಿದೆ ಎಂದು ಯಶ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೆಜಿಎಫ್ ಯಶಸ್ಸು ಜನರು ಕನ್ನಡ  ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ಕನ್ನಡ ಚಿತ್ರೋದ್ಯಮದ ಬಗ್ಗೆ ಇದ್ದ ಕಲ್ಪನೆ ಬದಲಾಗಿದೆ.ನಮ್ಮ ಅನೇಕ ತಂತ್ರಜ್ಞಾನರಿಗೆ ವೇದಿಕೆ ಸಿಕ್ಕಂತಾಗಿದೆ.ಅನೇಕ ಪ್ರತಿಭಾವಂತರು ಕನ್ನಡ ಇಂಡಸ್ಟ್ರಿಗೆ ಸಿಕ್ಕಿದಂತಾಗಿದೆ. ಕೆಜಿಎಫ್ ಬಗ್ಗೆ  ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಫಲಿತಾಂಶ  ಬಂದಿದೆ ಎಂದು   ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಮೂರು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಕೆಜಿಎಫ್ ನಾಳೆ ಸೋನಿ ಮ್ಯಾಕ್ಸ್ ಟಿವಿಯಲ್ಲಿ  ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿದ್ದು, ಇದನ್ನು ನೋಡಲು ಕಾತುರದಿಂದ ಇರುವುದಾಗಿ ಯಶ್ ಹೇಳಿಕೊಂಡಿದ್ದಾರೆ.ಥಿಯೇಟರ್ ನಲ್ಲಿ ಈಗಾಗಲೇ ಅನೇಕ ಬಾರಿ ವೀಕ್ಷಿಸಿರುವ ಚಿತ್ರಪ್ರೇಮಿಗಳು ನಾಳೆ ಮನೆಯಲ್ಲಿ ತಮ್ಮ ಕುಟುಂಬದ ಜೊತೆ ಕುಳಿತು ಟಿವಿ ಮೂಲಕವೇ ಚಿತ್ರ ವೀಕ್ಷಿಸಿ ಎಂದು ಯಶ್ ತಿಳಿಸಿದ್ದಾರೆ.

ಬರುವ ತಿಂಗಳಿನಿಂದ ಕೆಜಿಎಫ್  ಚಾಪ್ಟರ್ -2 ಚಿತ್ರೀಕರಣ ಆರಂಭವಾಗಲಿದ್ದು, ಇದು ಮೊದಲ ಚಾಪ್ಟರ್ ಗಿಂತ ಉತ್ತಮವಾಗಿ ಇರಲಿದೆ ಎಂದು ರಾಕಿಂಗ್ ಸ್ಟಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT