ಪರೀಕ್ಷಾ ಜ್ವರ ಯಾರನ್ನೂ ಬಿಟ್ಟಿಲ್ಲ... ಇದೀಗ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿದ್ದು, ಇಷ್ಟು ದಿನ ಕ್ಯಾಮೆರಾ ಎದುರಿಸುತ್ತಿದ್ದ ಕೆಲವು ನಟ, ನಟಿಯರು ಈಗ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಭರಾಟೆ ಚಿತ್ರದ ನಾಯಕಿ ಶ್ರೀಲೀಲಾ ಅವರು ಸಹ ಪರೀಕ್ಷಾ ಜ್ವರದಿಂದ ಬಳಲುತ್ತಿರುವ ತಾರೆಯರ ಪೈಕಿ ಒಬ್ಬರಾಗಿದ್ದು, ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರಿಂದಾಗಿ ಭರಾಟೆ ಚಿತ್ರೀಕರಣ ಸುಮಾರು 60 ದಿನ ಮುಂದೂಡಿಕೆಯಾಗಿದೆ.
ಶ್ರೀಲೀಲಾ ಅವರು 11 ದಿನ ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗಿದೆ ಮತ್ತು ಪ್ರತಿ ದೃಶ್ಯದಲ್ಲೂ ಅವರು ಇರಬೇಕಾಗಿರುವುದರಿಂದ ನಾಯಕಿ ಇಲ್ಲದೆ ಚಿತ್ರೀಕರಣ ಅಸಾಧ್ಯ. ಆದರೆ ಅವರಿಗೆ ಪರೀಕ್ಷೆ ಇರುವುದರಿಂದ ನಾವು ಅನಿವಾರ್ಯವಾಗಿ ಕಾಯಬೇಕಾಗಿದೆ ಎಂದು ಚಿತ್ರದ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಶ್ರೀಲೀಲಾ ಅವರು ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಈಗ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದಾರೆ.
ಶ್ರೀಮುರುಳಿ ನಾಯಕರಾಗಿ ನಟಿಸುತ್ತಿರುವ ಭರಾಟೆ ಸಿನಿಮಾ ಶೂಟಿಂಗ್ ಹಂತದಲ್ಲೇ ಭಾರೀ ಸದ್ದು ಮಾಡುತ್ತಿದೆ. ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಚಿತ್ರವು ಚಿತ್ರೀಕರಣದ ಹಂತದಲ್ಲಿದ್ದು ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics