ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಕುತೂಹಲ ಮೂಡಿಸಿದ ಹೊಸಬರ 'ವೀಕೆಂಡ್' ಚಿತ್ರ, ಆಡಿಯೋ ಬಿಡುಗಡೆ!

ಶೃಂಗೇರಿ ಸುರೇಶ್ ನಿರ್ದೇಶನದ ವೀಕೇಂಡ್ ಚಿತ್ರದ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದೆ.

ಶೃಂಗೇರಿ ಸುರೇಶ್ ನಿರ್ದೇಶನದ ವೀಕೇಂಡ್ ಚಿತ್ರದ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದೆ.
ಹಿರಿಯ ನಟ ಅನಂತ್ ನಾಗ್ ವಿಭಿನ್ನ ಹಾಗೂ ಯಂಗ್ ಅಂಡ್ ಎನರ್ಜಿಟಿಕ್ ಪಾತ್ರ ನಿರ್ವಹಿಸಿದ್ದಾರೆ. ಅನಂತ್ ನಾಗ್ ಜೊತೆ ಮಿಲಿಂದ್, ಸಂಜನಾ ಬುರ್ಲಿ ಮುಂತಾದ ಯುವ ನಟ, ನಟಿಯರು ಕೂಡ ಚಿತ್ರದಲ್ಲಿದೆ.
ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೋ ವೀಕೆಂಡ್ ತಂಡ ಇದೀಗ ಸಖತ್ ಸೌಂಡಿನೊಂದಿಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ. ಇನ್ನು ಚಿತ್ರತಂಡ ಸಖತ್ ಜೋಷ್ ನಲ್ಲಿದೆ. ಇನ್ನು ವಿಶೇಷ ಅಂದರೆ, ಬೆಂಗಳೂರಿನಲ್ಲೇ ಬಹುಕಾಲದಿಂದ ಇರೋ ಶ್ರೀಲಂಕಾ ಮೂಲದ ಯುವ ಸಂಗೀತ ನಿರ್ದೇಶಕ ಮನೋಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಟೆಕ್ಕಿಗಳ ಜೀವನಾಧಾರಿತ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ಅನಂತನಾಗ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸ ಮುಖಗಳಿವೆ.  ಅನಂತನಾಗ್ ಮೊಮ್ಮಗನ ಪಾತ್ರದಲ್ಲಿ ನಾಯಕ ನಟನಾಗಿ ಮಿಲಿಂದ್ ಸೊಗಸಾಗಿ ನಟಿಸಿದ್ದಾರೆ.  ಐಷಾರಾಮಿ ಬದುಕು ನಡೆಸುವ ಟೆಕ್ಕಿಗಳು ಹಾಗೂ ರೆಸಿಷನ್ ಅವಧಿಯಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿಗಳನ್ನು ಹತ್ತಿರದಿಂದ ನೋಡಿ, ಸಮಗ್ರ ಅಧ್ಯಯನ ನಡೆಸಿ ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ” ಎಂದು ಶೃಂಗೇರಿ ಸುರೇಶ್ ತಿಳಿಸಿದರು.
  
ಇಂಜಿನಿಯರಿಂಗ್ ಮುಗಿಸಿರುವ ಮಿಲಿಂದ್ ಹಾಗೂ ಇನ್ನೂ ಅಧ್ಯಯನದಲ್ಲಿ ತೊಡಗಿರುವ ನಾಯಕ ನಟಿ ಸಂಜನಾ ಬುಗ್ಲಿ ಅಭಿನಯ ಕ್ಷೇತ್ರದಲ್ಲೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರು.
  
ಮಯೂರ ಮೋಹನ್ ಪಿಕ್ಚರ್ಸ್ ಅಡಿಯಲ್ಲಿ ಸಿದ್ಧವಾಗಿರುವ ‘ವೀಕ್END’ ನಿರ್ಮಾಣದ ಹೊಣೆ ಹೊತ್ತಿರುವ ಡಿ. ಮಂಜುನಾಥ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಿರ್ದೇಶನ ಶೃಂಗೇರಿ ಸುರೇಶ್, ಸಹಾಯಕ ನಿರ್ದೇಶಕ ಮಂಜುನಾಥ್, ಸಂಗೀತ ನಿರ್ದೇಶನ ಮನೋಜ್, ಸಂಕಲನ ರುದ್ರೇಶ್. 
  
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಐಲಾ ಐಲಾ ಪಾರ್ಟಿ ಸಾಂಗ್ ಗೆ ಅನನ್ಯ ಭಟ್ ದನಿಯಾಗಿದ್ದಾರೆ. ಕಿರಿಕ್ ಪಾರ್ಟಿ ಖ್ಯಾತಿಯ ಧನಂಜಯ್ ರಚನೆಯ ‘ನೋಡಿ ಸ್ವಾಮಿ,.’ ಕವಿರಾಜ್ ರಚನೆಯ ‘ಮೊದಲಾ ಸಲ’  ರಾಜೇಶ್ ಕೃಷ್ಣನ್, ಸಂಚಿತ್ ಹೆಗಡೆ, ಅಭಿನಂದನ್, ಗಾಯನವಿದೆ.  ಅನಂತನಾಗ್, ಮಿಲಿಂದ್, ಸಂಜನಾ ಬುಗ್ಲಿ, ಮಿಮಿಕ್ರಿ ರಾಜ್ ಗೋಪಾಲ್ ಮೊದಲಾದವರ ತಾರಾಬಳಗವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT