ಪೌರಾಣಿಕ ಧಾರಾವಾಹಿಗಳಾದ ಮಹಾಕಾಳಿಯಲ್ಲಿ ರತಿಯಾಗಿ, ಶನಿ ಧಾರಾವಾಹಿಯಲ್ಲಿ ಶನಿ ಪತ್ನಿ ಧಾಮಿನಿಯಾಗಿ ನಟಿಸಿದ್ದ ಬೃಂದಾ ಆಚಾರ್ಯ ಬೆಳ್ಳಿ ತೆರೆಗೆ ಪ್ರೇಮಂ ಪೂಜ್ಯಮ ಎಂಬ ಸಿನಿಮಾ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.
'ನೆನಪಿರಲಿ' ಚಿತ್ರದ ಮೂಲಕ ಖ್ಯಾತರಾಗಿರುವ ನಟ ಪ್ರೇಮ್, ನೆನಪಿರಲಿ ಪ್ರೇಮ್ ಎಂದೇ ಹೆಸರಾಗುವಷ್ಟರ ಮಟ್ಟಿಗೆ ಈ ಚಿತ್ರದ ಮೂಲಕ ಗುರುತಿಸಿಕೊಂಡವರು. ಇದು ಪ್ರೇಮ್ ಅವರ 25ನೇ ಸಿನಿಮಾ ಆಗಿದೆ, ರಾಘವೇಂದ್ರ ಎನ್ನುವ ಹೊಸಬರು ನಿರ್ದೇಶನ ಮಾಡಲಿದ್ದಾರೆ.
ಮೇ 2 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಶೀಘ್ರದಲ್ಲೇ ಬೃಂದಾ ಸೆಟ್ ಜಾಯಿನ್ ಆಗಲಿದ್ದಾರೆ. ಅಂತಿಮವಾಗಿ ನಾನು ಪೌರಾಣಿಕ ಪಾತ್ರಗಳಿಂದ ಹೊರಬಂದಿದ್ದೇನೆ. ನನ್ನ ಸಿನಿಮಾ ಪಯಣ ಈ ಸಿನಿಮಾದಿಂದ ಆರಂಭವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಿದೆ ಎಂದು ಹೇಳಿದ್ದಾರೆ,
ಮಂಗಳೂರು ಮೂಲದವರಾದ ಬೃಂದಾ ಈ ಹಿಂದೆ ಮುಂಬಯಿಯಲ್ಲಿದ್ದರು. ಸದ್ಯ ಬೆಂಗಳೂರಿಗೆ ಶಿಫ್ಚ್ ಆಗಿದ್ದಾರೆ. ಮಹಾಕಾಳಿ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದೆ, ಆ ಪಾತ್ರ ಗುರುತಿಸಿ ಶನಿ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು, ಶನಿ ಧಾರವಾಹಿಯಲ್ಲಿ ನಟಿಸಿದ ನಂತರ ನನ್ನ ಅದೃಷ್ಟವೇ ಬದಲಾಗಿದೆ ಎಂದು ಹೇಳಿದ್ದಾರೆ.
ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾಗೆ 'ಪ್ರೇಮಂ ಪೂಜ್ಯಂ' ಎಂಬ ಟೈಟಲ್ ಫಿಕ್ಸ್ ಆಗಿದೆ. ಟೈಟಲ್ ಜೊತೆಗೆ ಚಿತ್ರದ 'ಫಸ್ಟ್ ಲುಕ್' ಕೂಡ ರಿಲೀಸ್ ಮಾಡಲಾಗಿದೆ. ಈ ಚಿತ್ರವನ್ನು. ಚಿತ್ರಕ್ಕೆ ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ಇಬ್ಬರು ಬಂಡವಾಳ ಹೂಡುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos