ಸಿನಿಮಾ ಸುದ್ದಿ

ಕೊನೆಗೂ ಪುತ್ರಿಯ ಮುಖ ತೋರಿಸಿದ ಯಶ್-ರಾಧಿಕಾ ಪಂಡಿತ್ ದಂಪತಿ

Sumana Upadhyaya

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ.
ಅಕ್ಷಯ ತೃತೀಯ ದಿನವಾದ ಇಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ.
ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.

ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು ಜನಿಸಿತ್ತು. ಆದರೆ ಮಗುವಿನ ಫೋಟೋವನ್ನು ಇಲ್ಲಿಯವರೆಗೆ ಬಹಿರಂಗಪಡಿಸಿರಲಿಲ್ಲ. ಅವರ ಮುದ್ದಾದ ಮಗುವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ಯಶ್ ಮಗಳ ಫೋಟೋವನ್ನು ಶೇರ್ ಮಾಡಿಕೊಂಡು,  ‘ ನೀವು ಹೇಳಿದ್ದೇ ಸರಿ.... ಇವಳು ಬರೋವರ್ಗೂ ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ. ನನ್ನ ಜಗತ್ತನ್ನು ಆಳುವ ಪುಟಾಣಿ ಇವಳು. ಇವಳಿಗಿನ್ನು ಹೆಸರಿಟ್ಟಿಲ್ಲ. ಸದ್ಯಕ್ಕೆ ಬೇಬಿ ವೈಆರ್ ಎಂದು ಕರೆಯಿರಿ. ನಿಮ್ಮ ಪ್ರೀತಿ, ಆಶೀರ್ವಾದ ಮಗಳ ಮೇಲಿರಲಿ’ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT