ನಮ್ರತಾ ಶಿರೋಡ್ಕರ್-ಮಹೇಶ್ ಬಾಬು
ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅವರ ಪತ್ನಿಗೆ ಮೇಕಪ್ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದವನಿಗೆ ಮಾಜಿ ಮಿಸ್ ಇಂಡಿಯಾ, ನಟಿ ನಮ್ರತಾ ಶಿರೋಡ್ಕರ್ ತಿರುಗೇಟು ನೀಡಿದ್ದಾರೆ.
ತಮ್ಮ ಮೇಕಪ್ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಅವಹೇಳನ ಮಾಡುತ್ತಾ ನೆಟಿಗರೊಬ್ಬರು ಟ್ವೀಟ್ ಮಾಡಿದ್ದು ಇದಕ್ಕೆ ನಮ್ರತಾ ''ಗೌರವ್ ನಿನ್ನಂತಹ ವ್ಯಕ್ತಿಗಳೂ ಮೇಕಪ್ ಹಾಕಿಕೊಂಡ ಮಹಿಳೆಯರನ್ನೇ ಇಷ್ಟಪಡುತ್ತಿರುತ್ತೀರಾ, ಇನ್ನು ಮುಂದೆ ನಿನ್ನ ಆಲೋಚನೆಗೆ ತಕ್ಕಂತಹವರನ್ನು ಫಾಲೋ ಮಾಡು. ಇಲ್ಲಿಂದ ನೀನು ನಿರ್ಗಮಿಸಬಹುದು. ಇದು ನನ್ನ ವಿನಮ್ರ ಮನವಿ ಎಂದು ತಿರುಗೇಟು ನೀಡಿದ್ದಾರೆ.
ಮಹರ್ಷಿ ಚಿತ್ರದ ಯಶಸ್ವಿಯಾದ ಸಂದರ್ಭದಲ್ಲಿ ಮಹೇಶ್ ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಕುಟುಂಬಿಕರು ಪಾರ್ಟಿ ಮಾಡಿಕೊಂಡಿದ್ದಾರೆ. ಮಹರ್ಷಿ ಸೂಪರ್ ಡೂಪರ್ ಸಕ್ಸಸ್. ಇಷ್ಟು ದೊಡ್ಡ ಹಿಟ್ ಕೊಟ್ಟ ವಂಶಿಪೈಡಿಪಲ್ಲಿಗೆ ಧನ್ಯವಾದಗಳು ಎಂದು ಎಲ್ಲರೊಂದಿಗೆ ಫೋಟೋವನ್ನು ನಮ್ರತಾ ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ಗೌರವ್ ಎಂಬಾತ ನಮ್ರತಾ ನೀನ್ಯಾಕೆ ಸ್ವಲ್ಪವೂ ಮೇಕಪ್ ಮಾಡಿಕೊಂಡಿಲ್ಲ. ನೀವು ಖಿನ್ನತೆಯಲ್ಲಿದ್ದೀರಾ? ಅಥವಾ ಯಾವುದಾದರೂ ಫೋಬಿಯಾದಿಂದ ಬಳಲುತ್ತಿದ್ದೀರಾ? ಎಂದು ಬರೆದುಕೊಂಡಿದ್ದ.