ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್ ಶಿವಣ್ಣ-ಉಪ್ಪಿ ಗಲ್ಲಾ ಪೆಟ್ಟಿಗೆಯಲ್ಲಿ ಫೈಟ್?

Raghavendra Adiga
ಬೆಂಗಳೂರು: ಇಬ್ಬರು ಪ್ರಮುಖ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ನಲ್ಲಿ ಘರ್ಷಣೆಗಳಾಗುವುದು ಸಾಮಾನ್ಯ. ಆಗಸ್ಟ್ ವೇಳೆಗೆ ದರ್ಶನ್, ನಿಖಿಲ್ ಅಭಿನಯದ ಅದ್ದೂರಿ ಚಿತ್ರ "ಕುರುಕ್ಷೇತ್ರ" ಹಾಗೂ ಸುದೀಪ್ ನಾಯಕನಟನಾಗಿರುವ "ಪೈಲ್ವಾನ್" ಒಂದೇ ದಿನ ಬಿಡುಗಡೆಯಾಗಲಿದೆ ಎಂದು ವರದಿಯಾದ ಬೆನ್ನಲ್ಲೇ ಈಗ ಮತ್ತೆ ಅದೇ ರೀತಿಯ ಸುದ್ದಿಯೊಂದು ಬಂದಿದೆ. ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸೆಂದೇ ಖ್ಯಾತವಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರುಗಳ ಚಿತ್ರ ಒಂದೇ ದಿನ ತೆರೆ ಕಾಣುವ ಸಂಬವವಿದೆ.
ಜೂನ್ ಮಾಹೆಯಲ್ಲಿ ಶಿವಣ್ನನ "ರುಸ್ತುಂ" ಹಾಗು ಉಪ್ಪಿಯ "ಐ ಅಲ್ವ್ ಯು" ಒಂದೇ ದಿನ ತೆರೆಗೆ ಬರಲಿದೆ ಎಂದು ಮೂಲಗಳು ಹೇಳಿದೆ.ಜೂನ್ 14ರಂದು ಈ ಎರಡೂ ಚಿತ್ರಗಳು ಬಿಡುಗಡೆಯಾಗುವುದಾಗಿ ಹೇಳಲಾಗಿದೆ.ಆರ್. ಚಂದ್ರು ನಿರ್ದೇಶನದ ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ನಿರ್ಮಾಣದ "ಐ ಲವ್ ಯು"ಜೂನ್ 14ಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ್ ಐತ್ತೀಚಿನ ಹೇಳಿಕೆಯಲ್ಲಿ ತಿಳಿಸಿದೆ.ಏತನ್ಮಧ್ಯೆ ಜಯಣ್ಣ ಕಂಬೈನ್ಸ್ ನಿರ್ಮಾಣದ ಶಿವಣ್ಣ ನಾಯಕನಾಗಿರುವ "ರುಸ್ತುಂ" ಸಹ ಜೂನ್ ಮಧ್ಯಭಾಗದಲ್ಲೇ ತೆರೆಗೆ ಬರಲಿದೆ.ಈ ಸಂಬಂಧ ಇನ್ನೂ ಅಧಿಕೃತ ಘೋಷಣೆ ಬರಬೇಕಿದ್ದರೂ ಸಹ ಎರಡೂ ದೊಡ್ಡ ಬಜೆಟ್ ನ ಚಿತ್ರಗಳು ಒಟ್ಟಾಗಿ ಬಿಡುಗಡೆಯಾದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸಂಘರ್ಷ ತಲೆದೋರುವುದು ನಿಶ್ಚಿತ.
ಪ್ರಸಿದ್ದ ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದ "ರುಸ್ತುಂ" ಚಿತ್ರವನ್ನು ಭಾರತದಾದ್ಯಂತ 500 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ.ಚಿತ್ರದಲಿ ಪೋಲೀಸ್ ಪಾತ್ರಧಾರಿಯಾಗಿರುವ ಶಿವರಾಜ್ ಕುಮಾರ್ ನಾಯಕರಾಗಿದ್ದು ಇದೊಂದು ಪಕ್ಕಾ ಆಕ್ಷನ್ ಮೂವಿ ಎಂಬುದರಲ್ಲಿ ಸಂದೇಹವಿಲ್ಲ.ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಸಹ ಇರಲಿದ್ದು ಸೆಂಚುರಿ ಸ್ಟಾರ್ ಶಿವಣ್ಣ ಬೇರೆಂದು ಲುಕ್ ನಲ್ಲಿ ಪ್ರೇಕ್ಷಕರ ಮೋಡಿಗೆ ಸಿದ್ದವಿದ್ದಾರೆ.ಇನ್ನು ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಹ ಈ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ. ಅನೂಪ್ ಶೀಳನ್ ಸಂಗೀತವಿರುವ ಈ ಚಿತ್ರದ ಮೊದಲ ಹಾಡು ":ಯೂ ಆರ್ ಮೈ ಪೋಲೀಸ್ ಬೇಬಿ" ಇತ್ತೀಚೆಗೆ ಬಿಡುಗಡೆಯಾಗಿದ್ದು ಭಾರೀ ಜನಮೆಚ್ಚುಗೆ ಗಳಿಸಿದೆ. ಮಹೇಂದ್ರ ಸಿಂಹ ಚಾಯಾಗ್ರಹಣದ ಈ ಚಿತ್ರದಲ್ಲಿ  ಶ್ರದ್ಧಾ ಶ್ರೀನಾಥ್, ಮಯೂರಿ ಮತ್ತು ರಚಿತಾ ರಾಮ್  ನಾಯಕಿಯರಾಗಿದ್ದಾರೆ.
ಇನ್ನು ಆರ್. ಚಂದ್ರು ಸಹ ತಮ್ಮ "ಐ ಲವ್ ಯೂ" ಚಿತ್ರವನ್ನು ಕರ್ನಾಟಕದಲ್ಲಿ 400, ಆಂಧ್ರ ಪ್ರದೇಶದಲ್ಲಿ 600 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ.ಉಪೇಂದ್ರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರವಿದಾಗಿದ್ದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿದೆ.ಚಿತ್ರವು ಶೀರ್ಷಿಕೆಯಲ್ಲಿರುವ ವಿಶೇಷತೆಗಳಿಂಡಲೇ ಗಮನ ಸೆಳೆದಿದ್ದು ಈ ಚಲನಚಿತ್ರವನ್ನು ಭಾರತದ ಪ್ರತಿಯೊಂದು ಮೂಲೆ ಮೂಲೆಯಲ್ಲಿ ತೆರೆಗೆ ತರಬೇಕೆನ್ನುವುದು ನಿರ್ದೇಶಕರ ಆಸೆಯಾಗಿದೆ.
ಈ ಚಿತ್ರದಲ್ಲಿ ಸಹ ಸೋನು ಗೌಡ ಜತೆಗೆ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಉಪ್ಪಿ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಾಲೇಜು ಪ್ರೇಮ ಕಥೆಯನ್ನು ಆಧರಿಸಿ, ಚಿತ್ರವು ಪ್ರೇಮ ಕಥಾನಕವಾಗಿದೆ. ಸಂಗೀತ ನಿರ್ದೇಶಕ ಕಿರಣ್ ತೊಟಂಬೈಲ್ ಅವರ ಹಾಡುಗಳು ಈಗಾಗಲ್ ಹಿಟ್ ಆಗಿದೆ.
SCROLL FOR NEXT