ಬೆಲ್ ಬಾಟಮ್ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯ! 
ಸಿನಿಮಾ ಸುದ್ದಿ

ಬೆಲ್ ಬಾಟಮ್ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯ!

ಕನ್ನಡದ ಯಶಸ್ವಿ ಚಿತ್ರ ರಿಷಬ್ ಶೆಟ್ಟಿಯವರ "ಬೆಲ್ ಬಾಟಮ್" ಚಿತ್ರವೀಗ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದ್ದು 'ಹೌಸ್‌ಫುಲ್ 4' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ಮಿಸಲಿದ್ದಾರೆ.

ಕನ್ನಡದ ಯಶಸ್ವಿ ಚಿತ್ರ ರಿಷಬ್ ಶೆಟ್ಟಿಯವರ "ಬೆಲ್ ಬಾಟಮ್" ಚಿತ್ರವೀಗ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದ್ದು 'ಹೌಸ್‌ಫುಲ್ 4' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ಮಿಸಲಿದ್ದಾರೆ.

ಬೆಲ್ ಬಾಟಮ್ ಕನ್ನಡ ಚಿತ್ರದ ಅಧಿಕೃತ ರೂಪಾಂತರದಲ್ಲಿ ಅಕ್ಷಯ್ ಕುಮಾರ್ ಕಾಣಿಸ್ಕೊಳ್ಳಲಿದ್ದಾರೆ. ಕನ್ನಡದಲ್ಲಿ ಈ ವರ್ಷಾರಂಭದಲ್ಲಿ ತೆರೆ ಕಂಡಿದ್ದ ಬೆಲ್ ಬಾಟಮ್ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದರು.  ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಇದು 2019 ರ ಅತಿದೊಡ್ಡ ಕನ್ನಡ ಹಿಟ್‌ಗಳಲ್ಲಿ ಒಂದಾಗಿದೆ ಮತ್ತು ಅದರ ಮನರಂಜನಾ ಅಂಶದಿಂದಾಗಿ ಇಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

"ನಿಖಿಲ್ ಅಡ್ವಾಣಿ ಈ ಚಿತ್ರವನ್ನು ನೋಡಿದ್ದಾರೆ ಮತ್ತು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಹಾಗಾಗಿ ಅದರ ರಿಮೇಕ್ ಹಕ್ಕುಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ. ರಂಜಿತ್ ತಿವಾರಿ ಅದನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ. ಇವರ ಮೊದಲ ಚಿತ್ರ ಲಕ್ನೋ ಸೆಂಟ್ರಲ್ ವಿಫಲವಾದರೂ,  ಅವರ ಸಾಮರ್ಥ್ಯಗಳ ಬಗೆಗೆ ನಂಬಿಕೆ ಇಟ್ಟು ನಿಖಿಲ್ ಅವರಿಗೆ ಈ ಜವಾಬ್ದಾರಿ ವಹಿಸಿದ್ದಾರೆ.ಸಧ್ಯ ಚಿತ್ರಕಥೆ ಕ್ರಚನೆ ನಡೆಯುತ್ತಿದ್ದು 2019 ರ ಅಂತ್ಯದ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿ

"ಅಕ್ಷಯ್ ಕುಮಾರ್, ನಿಖಿಲ್ ಅಡ್ವಾಣಿ ಮತ್ತು ವಶು ಭಗ್ನಾನಿ ಅವರೊಂದಿಗೆ ಟಿ-ಸೀರೀಸ್‌ನ ಭೂಷಣ್ ಕುಮಾರ್ ಕೂಡ ನಿರ್ಮಾಪಕರಾಗಿ  ಕೆಲಸ ಮಾಡಲಿದ್ದಾರೆ.ಎನ್ನಲಾಗಿದೆ. ಇನ್ನು ರೀಮೇಕ್ ಚಿತ್ರಕ್ಕೆ "ಬೆಲ್ ಬಾಟಮ್" ಎಂಬ ಶೀರ್ಷಿಕೆಯನ್ನೇ ಇಡಬೇಕೆ ಅಥವಾ ಬೇರೆ ಶೀರ್ಷಿಕೆ ಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ." ಅಕ್ಷಯ್ ಕುಮಾರ್ ಅವರ ಗುಡ್ ನ್ಯೂವ್ಜ್ 2020 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT