ಪುನೀತ್ ರಾಜ್ಕುಮಾರ್ ಅವರು ತಮ್ಮ ಮುಂಬರುವ ಚಿತ್ರ ಯುವರತ್ನ ದ ಮುಂದಿನ ಭಾಗಗಳ ಚಿತ್ರೀಕರಣದಲ್ಲಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರ ಇದಾಗಲೇ ಮಾತಿನ ಭಾಗಗಳ ಚಿತ್ರೀಕರಣದ ಕಡೇ ಹಂತಕ್ಕೆ ತಲುಪಿದೆ.
ಪ್ರಸ್ತುತ ಯುವರತ್ನ ಚಿತ್ರತಂಡ ನಂದಿ ಬೆಟ್ಟದ ಸುತ್ತಮುತ್ತ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಅಲ್ಲಿ ಅವರು ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ. ಉದ್ಯಾನ ನಗರಿಯ ವಿವಿಧ ಸ್ಥಳಗಳಲ್ಲಿ ಕೆಲ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗುತ್ತಿದೆ.
ಪವರ್ ಸ್ಟಾರ್ ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ನಟರಲ್ಲಿ ಪ್ರಕಾಶ್ ರಾಜ್, ದಿಗಂತ್ ಮತ್ತು ಸೋನು ಗೌಡ ಸೇರಿದ್ದಾರೆ.ಈಗ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ಈ ತಂಡವು ಮುಂದೆ ಹಾಡಿನ ಚಿತ್ರೀಕರಣ ಕೈಗೆತ್ತಿಕೊಳ್ಲಲಿದೆ.2020ರಲ್ಲಿ ಬಿಡುಗಡೆಯಾಗಲಿರುವ ಚಿತ್ರ "ರಾಜಕುಮಾರರ " ಚಿತ್ರದ ಯಶಸ್ವಿ ಜೋಡಿಯ ಎರಡನೇ ಚಿತ್ರವಾಗಿರಲಿದೆ.
ಚಿತ್ರದಲ್ಲಿ ಬಹುತಾರಾಂಗಣವಿರಲಿದ್ದು ಕನ್ನಡ ಚಿತ್ರರಂಗದಲ್ಲಿ ಸಯೇಶಾ ಅವರ ಚೊಚ್ಚಲ ಚಿತ್ರವಾಗಿದೆ. ಧನಂಜಯ್ ವಸಿಷ್ಠ ಸಿಂಹ ಮತ್ತು ರಾಧಿಕಾ ಶರತ್ಕುಮಾರ್ ಸಹ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಎಸ್ ತಮನ್ ಸಂಗೀತ ಮತ್ತು ವೆಂಕಟೇಶ್ ಅಂಗುರಾ ಅವರ ಛಾಯಾಗ್ರಹಣವಿದೆ.