ಸೃಜನ್ ಲೋಕೇಶ್ 
ಸಿನಿಮಾ ಸುದ್ದಿ

ತಂದೆಗೆ ಸಿಕ್ಕ ಚಿತ್ರಕಥೆಗಳಿಗಾಗಿ ಕಾಯುತ್ತಿದ್ದೇನೆ: ಸೃಜನ್ ಲೋಕೇಶ್

ಮಜಾ ಟಾಕೀಸ್ ಶೋ ಮೂಲಕ ಟಾಕಿಂಗ್ ಸ್ಟಾರೇ ಎಂದೇ ಬಿರುದು ಪಡೆದಿರುವ ಸೃಜನ್ ಲೋಕೇಶ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಎಲ್ಲಿದ್ದೆ ಇಲ್ಲಿ ತನಕ' ಈ ವಾರ ತೆರೆ ಕಾಣಲಿದ್ದು, ಚಿತ್ರದ ಬಗ್ಗೆ ಸೃಜನ್ ಅವಲು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. 

ಮಜಾ ಟಾಕೀಸ್ ಶೋ ಮೂಲಕ ಟಾಕಿಂಗ್ ಸ್ಟಾರೇ ಎಂದೇ ಬಿರುದು ಪಡೆದಿರುವ ಸೃಜನ್ ಲೋಕೇಶ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಎಲ್ಲಿದ್ದೆ ಇಲ್ಲಿ ತನಕ' ಈ ವಾರ ತೆರೆ ಕಾಣಲಿದ್ದು, ಚಿತ್ರದ ಬಗ್ಗೆ ಸೃಜನ್ ಅವಲು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. 

ಕನ್ನಡ ಹಾಗೂ ಇತರೆ ಭಾಷೆಗಳ ಸಾಕಷ್ಟು ಚಿತ್ರಗಳು ಚಿತ್ರಮಂದಿರಗಳಲ್ಲಿದ್ದು, ಈ ಚಿತ್ರಗಳ ನಡುವಲ್ಲೇ ನಮ್ಮ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಮಂದಿರ ಪಡೆಯಲು ಪ್ರಯತ್ನ ನಡೆಸುತ್ತಿರುವುದು ಇದೀಗ ಕಾಲ್ಬೆರಳ ಮೇಲೆ ನಿಂತಿರುವಂತಿದೆ ಎಂದು ಸೃಜನ್ ಲೋಕೇಶ್ ಅವರು ಹೇಳಿದ್ದಾರೆ. 

 ಹಿರಿಯರ ಹೆಜ್ಜೆಯನ್ನೇ ನಾನು ಇಡುತ್ತಿರುವುದು ಕಾಕತಾಳೀಯ. ರಿಯಾಲಿಟಿ ಶೋಗಳನ್ನು ಮಾಡುವ ಮೂಲಕ ಅನುಭವವನ್ನು ಪಡೆದುಕೊಂಡೆ. ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮೂಲಕ ನಿರ್ದೇಶಕನಾದೆ. ಕ್ಯಾಮೆರಾದ ಹಿಂದೆ ನನ್ನ ಕೌಶಲ್ಯವನ್ನು ತೋರಿಸಿದ್ದೇನೆ. ನಿರ್ದೇಶನದಿಂದ ಪಡೆದ ಎಲ್ಲಾ ಅನುಭವಗಳನ್ನು ಚಿತ್ರದಲ್ಲಿ ಪ್ರಯೋಗಿಸಿದ್ದೇನೆ. ತಂದೆಗೆ ಸಿಕ್ಕಂತಹ ಚಿತ್ರಕಥೆಗಳಿಗಾಗಿ ಈಗಲೂ ಕಾಯುತ್ತಿದ್ದೇನೆ. ಮನರಂಜನಾ ಕ್ಷೇತ್ರ ಬದಲಾಗಿದ್ದು, ಪ್ರೇಕ್ಷಕರು ನನ್ನಿಂದ ಬಯಸುತ್ತಿರುವುದನ್ನು ನಾನು ಮಾಡುತ್ತಿದ್ದೇನೆ. ಕಾಮಿಡಿ ಬಯಸಿದ್ದರು. ಅದನ್ನು ಮಾಡಿದ್ದೆ. ಹಾಸ್ಯ ಅಂಶ ನನ್ನ ತಾಯಿಯಿಂದ ಬಂದಿದೆ. ಅತ್ಯಂತ ಉಲ್ಲಾಸ ವ್ಯಕ್ತಿ ಎಂದರೆ ನನ್ನ ತಾಯಿ. ನನ್ನಲ್ಲಿರುವ ಹಾಸ್ಯಪ್ರಜ್ಞೆಗಿಂತಲೂ ಅವರಲ್ಲಿ 10 ಪಟ್ಟು ಹೆಚ್ಚಾಗಿದೆ. ಸಾಕಷ್ಟು ಸಿದ್ಧತೆಗಳ ಬಳಿಕ ಸಿನಿಮಾವಾಗುತ್ತದೆ. ಸೃಜನಶೀಲತೆ ವ್ಯವಹಾರದೊಂದಿಗೆ ನಂಟು ಹೊಂದಿದರೆ, ಅದು ಬೇರೆಯದೇ ಚೆಂಡಾಗುತ್ತದೆ. 

ತಂದೆ ನಟಿಸಿದ್ದ ಚಿತ್ರವೊಂದರ ಹಾಡಿನ ಮೂಲಕ ಚಿತ್ರಕ್ಕೆ ಟೈಟಲ್ ನಿರ್ಧರಿಸಲಾಗಿತ್ತು. ಎಲ್ಲಿದ್ದೆ ಇಲ್ಲಿ ತನಕ ದುಃಖಕರವಾದದ್ದು ಎಂದೆನಿಸುತ್ತದೆ. ಆದರೆ, ನಮ್ಮ ಚಿತ್ರದಲ್ಲಿ ಇದೇ ಸಾಲನ್ನು ರೊಮ್ಯಾಂಟಿಕ್ ಆಗಿ ಪರಿವರ್ತಿಸಲಾಗಿದೆ. ನನ್ನ ಪ್ರೊಡಕ್ಷನ್ ಹೌಸ್'ಗೆ ಪ್ರಸ್ತುತವಾದ ಹೆಸರನ್ನು ನಾನು ಹುಡುಕುತ್ತಿದ್ದೆ. ಟೈಟಲ್ ನಿರ್ಧರಿಸಿದ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಓಲ್ಡ್ ಫ್ಯಾಷನ್ ಎಂದು ಸಾಕಷ್ಟು ಜನರು ಹೇಳಿದರು. ಆದರೆ, ಇದು ವರ್ಕ್ ಆಗುತ್ತದೆ ಎಂದು ನನಗೆ ವಿಶ್ವಾಸವಿತ್ತು. ನಾವು ಉತ್ತಮ ಕೆಲಸವನ್ನೇ ಮಾಡಿದ್ದೇವೆ. ಚಿತ್ರನೋಡಿ ಹೊರ ಬರುವ ಜನರ ಮುಖದಲ್ಲಿ ಖಂಡಿತವಾಗಿಯೂ ನಗು ಕಂಡು ಬರುತ್ತದೆ. ಆ ಬಗ್ಗೆ ನನಗೆ ವಿಶ್ವಾಸವಿದೆ. ಇದೇ ಶುಕ್ರವಾರ ಚಿತ್ರ ಬಿಡುಗಡೆ ಕಾಣಲಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT