ಸಿನಿಮಾ ಸುದ್ದಿ

ಬಿಗ್ ಬಾಸ್ ಸೀಸನ್ 7 ಗೆ ಕ್ಷಣಗಣನೆ: ಭಾನುವಾರ ಅದ್ಧೂರಿ ಆರಂಭ

Srinivasamurthy VN

ಬೆಂಗಳೂರು: ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಇದೇ ತಿಂಗಳ ೧೩ರಿಂದ ಬಿಗ್ ಬಾಸ್ ೭ನೇ ಆವೃತ್ತಿ ಆರಂಭವಾಗಲಿದೆ ಪ್ರತಿದಿನ ರಾತ್ರಿ ೯ಕ್ಕೆ ಕಿರುತೆರೆಯ ಮುಂದೆ ಪ್ರೇಕ್ಷಕರು ಕುತೂಹಲದಿಂದ ಕುಳಿತುಕೊಳ್ಳುವಂತೆ ಮಾಡುವ ಈ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ 6ಕ್ಕೆ ಅದ್ದೂರಿ ಆರಂಭ ಪಡೆದುಕೊಳ್ಳಲಿದೆ. 

ಬಿಗ್ ಬಾಸ್ ೭ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದ್ದರೂ ಸ್ಪರ್ಧಿಗಳ ಅಧಿಕೃತ ಪಟ್ಟಿ ಹೊರಬಿದ್ದಿಲ್ಲವಾದರೂ ಒಂದಿಷ್ಟು ಸೆಲೆಬ್ರಿಟಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸಂಭಾವ್ಯ ಪಟ್ಟಿಯ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಅಂದಹಾಗೆ 7ನೇ ಆವೃತ್ತಿಗೂ ಖ್ಯಾತ ನಟ ಕಿಚ್ಚ ಸುದೀಪ್ ಅವರೇ ನಿರೂಪಕರಾಗಲಿದ್ದು, ಕಳೆದೆರಡು ವರ್ಷಗಳ ಕಾಲ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಿದ್ದ ಬೃಹತ್ ರಿಯಾಲಿಟಿ ಶೋ ಮತ್ತೆ ಕಲರ್ಸ್ ಕನ್ನಡಕ್ಕೆ ಮರಳಿದೆ 17 ಸ್ಪರ್ಧಿಗಳು 100 ದಿನಗಳ ಕಾಲ ದೊಡ್ಡ ಮನೆಯಲ್ಲಿ ಹೊರಪ್ರಪಂಚದ ಸಂಪರ್ಕವಿಲ್ಲದೆ ಕಾಲ ಕಳೆಯಲಿದ್ದಾರೆ.

ಕಲರ್ಸ್ ವಾಹಿನಿಯ ಕನ್ನಡ ಕ್ಲಸ್ಟರ್ ನ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್, ಎಂದಿನಂತೆ ಬಿಗ್ ಬಾಸ್ ಒಂದು ಅವಿಭಕ್ತ ಕುಟುಂಬದಂತೆ ಇರಲಿದೆ. ತಂದೆ, ಮಗ, ಸೋದರ, ಸೋದರಿ ಮೊದಲಾದ ಭಾವನೆಗಳನ್ನು ಉಂಟು ಮಾಡುವಂತಹ ಎಲ್ಲ ವಯೋಮಾನದ ವ್ಯಕ್ತಿಗಳಿರುತ್ತಾರೆ. ಈ ಬಾರಿ ಕೇವಲ ಸೆಲೆಬ್ರಿಟಿಗಳನ್ನಷ್ಟೇ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಮನರಂಜನೆ ಹಾಗೂ ಭಾವನೆಗಳ ಹದವಾದ ಮಿಶ್ರಣವೇ ಬಿಗ್ ಬಾಸ್. ಆದರೆ ಹದ ಕಾಪಾಡಿಕೊಳ್ಳುವುದ ಸುಲಭದ ವಿಷಯವಲ್ಲ. ಜನಪ್ರಿಯತೆ, ಜೀವನಾನುಭವ ಇರುವ ವ್ಯಕ್ತಿ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದರು. 

ಬಳಿಕ ಮಾತನಾಡಿದ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಕಿಚ್ಚ ಸುದೀಪ್, ಕಳೆದ 6 ವರ್ಷಗಳಲ್ಲಿ ಬಿಗ್ ಬಾಸ್ ಜೊತೆಗಿದ್ದೆ. ಇದೀಗ ಏಳನೇ ಆವೃತ್ತಿ ಶುರುವಾಗುತ್ತಿದೆ. ಎಲ್ಲರಂತೆ ನಾನೂ ಕೂಡ ಬಹಳ ಕಾತರದಿಂದ ಇದ್ದೇನೆ ಸೆಲೆಬ್ರಿಟಿಗಳೇ ಬರುವುದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ ಎಂದು ಹೇಳಿದರು. ಬಿಗ್ ಬಾಸ್ ಮನೆಯನ್ನು ಟಿವಿಯಲ್ಲಿ ನೋಡುವುದಕ್ಕಿಂತ ನೇರವಾಗಿ ಹೋಗಿ ಪರಿಚಯ ಮಾಡಿಕೊಳ್ಳಬೇಕು ಸಣ್ಣ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಸ್ಪರ್ಧಿಗಳ ಪ್ರತಿ ಕ್ಷಣದ ನಡೆಯನ್ನೂ ಸೆರೆ ಹಿಡಿಯುವ ಕ್ಯಾಮರಾಗಳು ಒಂದೊಂದು ಹೆಜ್ಜೆ ಇಡುವಾಗಲೂ ಯೋಚಿಸುವಂತೆ ಮಾಡುತ್ತದೆ ಎಂದರು ಸುದೀಪ್.

ರೆಬೆಲ್ ಸ್ಟಾರ್ ನೆನಪು:- ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಾರಕ್ಕೊಮ್ಮೆ ಎಂಟ್ರಿ ಕೊಡುವ ಸುದೀಪ್ ಅವರನ್ನು ನೋಡಲೆಂದೇ ಬಹುತೇಕ ಜನ ಕಾದಿರುತ್ತಾರೆ 6 ಆವೃತ್ತಿಗಳಲ್ಲಿ ಒಂದು ವಾರವೂ ಸಹ ಅವರ ಕಾರ್ಯಕ್ರಮ ನಿಂತಿಲ್ಲ ಆದರೆ ಕಳೆದ ವರ್ಷ ಒಂದು ವಾರ ಮಾತ್ರ ನಿಂತಿದ್ದಾಗಿ ಸ್ವತಃ ಸುದೀಪ್ ಹೇಳಿಕೊಂಡರು. ಅಂಬರೀಷ್ ಮಾಮ ಇಹಲೋಕ ತ್ಯಜಿಸಿರುವ ಸುದ್ದಿ ನನ್ನನ್ನು ಕಂಗೆಡಿಸಿತ್ತು ಬೇರಾವುದರ ಬಗ್ಗೆ ಯೋಚಿಸಲು ಸಾಧ್ಯವೇ ಆಗಲಿಲ್ಲ ಹೀಗಾಗಿ ಒಂದು ವಾರ ಮಾತ್ರ ಹಾಜರಾಗಲಿಲ್ಲ ಎಂದರು. ಮನೆಯೊಳಗೆ ಬರುವ ಎಲ್ಲ ಸ್ಪರ್ಧಿಗಳೂ ತಮ್ಮತನವನ್ನು ಕಾಪಾಡಿಕೊಳ್ಳುವುದೇ ರಿಯಾಲಿಟಿ ಶೋ. ಒಂದು ವೇಳೆ ಈ 6 ಸೀಸನ್ ಗಳನ್ನು ವೀಕ್ಷಿಸಿ ಅನುಕರಣೆ ಮಾಡಿದರೆ ಯಾವುದೇ ಕಾರಣಕ್ಕೂ ಅವರಂದುಕೊಂಡಂತೆ ಗೆಲ್ಲಲು ಸಾಧ್ಯವಿಲ್ಲ ಎಂದು ಸುದೀಪ್ ಎಚ್ಚರಿಸಿದರು.

SCROLL FOR NEXT