ಸಿನಿಮಾ ಸುದ್ದಿ

ಕೊಚ್ಚಿ ಚಲನಚಿತ್ರೋತ್ಸವದಲ್ಲಿ ಕನ್ನಡ ಮೂಲದ ನಿರ್ದೇಶಕರ ಚಿತ್ರಕ್ಕೆ 4 ಪ್ರಶಸ್ತಿ

Raghavendra Adiga

ಕೊಚ್ಚಿಯಲ್ಲಿ ನಡೆದ ವಿಪ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಂಗಳೂರು ಮೂಲದ ಚಲನಚಿತ್ರ ನಿರ್ದೇಶಕ ಪ್ರತಾಯ ಸಹಾ ಅವರ "ದಿ ಗುಡ್ ವೈಫ್" ಎಂಬ ಕಿರುಚಿತ್ರ ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಧ್ವನಿ ವಿನ್ಯಾಸ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಎಡಿಟಿಂಗ್  ಮತ್ತು ಎರಡನೇ ಅತ್ಯುತ್ತಮ ಚಿತ್ರಕ್ಕಾಗಿ ಬಹುಮಾನಗಳನ್ನು ಗೆದ್ದಿದೆ. 

ರಂಗಭೂಮಿ ನಿರ್ದೇಶಕ ಹಾಗೂ ಟೆಡ್ಎಕ್ಸ್ ನಲ್ಲಿ ಭಾಗವಹಿಸಿರುವವರಾದ ಪ್ರತಾಯಾ ಈಗಾಗಲೇ ಚಿಕಾಗೊ ಮತ್ತು ಟೊರೊಂಟೊ ಸೇರಿ ವಿಶ್ವದಾದ್ಯಂತ ಹಲವೆಡೆ ನಡೆದ ಚಿತ್ರೋತ್ಸವಗಳಲ್ಲಿ ತಮ್ಮ ಚಿತ್ರಕ್ಕೆ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. 

1992ರ ಕಾಲಮಾನದ ದಿ ಗುಡ್ ವೈಫ್ ಒಂದೇ ದಿನದ ಅವಧಿಯಲ್ಲಿ ಗೃಹಿಣಿಯ ಗರಿಷ್ಠ, ಕನಿಷ್ಠ, ಸಂತೋಷ, ಸೋಲು ಮತ್ತು ಗೆಲುವನ್ನು ತೋರಿಸುತ್ತದೆ.ವಿವಾಹ ವಾರ್ಷಿಕೋತ್ಸವ ಸಮಯದಲ್ಲಿ ತನ್ನ ಪತಿಗೆ ಇಷ್ಟವಾದ  ತಿನಿಸನ್ನು ತರಲು ಗೃಹಿಣಿಯೊಬ್ಬಳು  ಕರ್ಫ್ಯೂ ಪೀಡಿತ ನಗರದ ಬೀದಿಗಳಲ್ಲಿ ಸುತ್ತಾಡುವ ಕಥೆಯನ್ನಿದು ಹೊಂದಿದೆ.

ಹಿರಿಯ ರಂಗಭೂಮಿ ಕಲಾವಿದೆ ಅಂಶುಲಿಕಾ ಕಪೂರ್  ನಟಿಸಿದ ದಿ ಗುಡ್ ವೈಫ್ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ಆಯ್ಕೆಗಳಲ್ಲಿ ಒಂದಾಗಿದೆ.ಅಂಶುಲಿಕಾ ಅವರ ರೆಡ್ ಪೋಲ್ಕಾ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗಿದೆ.

SCROLL FOR NEXT