ಸಿನಿಮಾ ಸುದ್ದಿ

ಹೊಸ ಚಿತ್ರಕ್ಕೆ ಹಳೇ ರಂಗು: ವೈಶಿಷ್ಟ್ಯತೆಗಳ ನಡುವೆ 'ವಿಷ್ಣುಪ್ರಿಯ'

Manjula VN

ಸಿಂಧು ಶ್ರೀ ಚಿತ್ರಕಥೆ ಬರೆದಿರುವ, ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ವಿಷ್ಣುಪ್ರಿಯ ಚಿತ್ರ ನೈಜ ಕಥೆ ಆಧಾರಿತವಾಗಿದ್ದು, ಚಿತ್ರ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. 

ಚಿತ್ರಕ್ಕೆ ನಿರ್ದೇಶಕ ವಿಕೆ. ಪ್ರಕಾಶ್ ಅವರು ಹಳೇ ರಂಗನ್ನು ನೀಡುತ್ತಿದ್ದು, ಚಿತ್ರತಂಡ ಶೇ.45ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. 

ನಟ ಶ್ರೇಯಸ್ ಮಂಜು ಹಾಗೂ ಕೇರಳದ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಚಿತ್ರದ ಗೀತೆಯೊಂದಕ್ಕೆ ಹೆಜ್ಜೆ ಹಾಕುತ್ತಿರುವ ಚಿತ್ರೀಕರಣ ಮುಂದುವರೆದಿದೆ. ಚಿತ್ರತಂಡ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಬೇಲೂರಿನ ಇತರೆ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. 

ಸಿನಿಮೀಯ ದೃಶ್ಯಗಳಿಗಾಗಿ ಚಿತ್ರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಚಿತ್ರಕ್ಕೆ 1990ರ ಹಳೇ ರಂಗನ್ನು ನೀಡಲಾಗಿದೆ. 

ನಟ ಹಾಗೂ ನಟಿಗೆ ಹಳೇ ಕಾಲದ ವಸ್ತ್ರ ವಿನ್ಯಾಸಗಳನ್ನು ಮಾಡಲಾಗಿದೆ. ವಸ್ತ್ರ ವಿನ್ಯಾಸ, ಕೇಶ ವಿನ್ಯಾಸಗಳನ್ನು ಹಳೇ ಕಾಲಕ್ಕೆ ಹೊಂದಿಕೆಯಾಗುವಂತೆ ಮಾಡಲಾಗಿದೆ. ಈ ಬಗ್ಗೆ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಮುಂದಿನ ಚಿತ್ರೀಕರಣ ಬೆಂಗಳೂರಿನಲ್ಲಿಯೇ ಅಕ್ಟೋಬರ್ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಶ್ರೇಯಸ್ ಹೇಳಿದ್ದಾರೆ.

1990ರ ವಿಷಯದೊಂದಿಗೆ ಚಿತ್ರವನ್ನು ಕೊಂಡೊಯ್ಯಲು ಚಿತ್ರೀಕರಣಕ್ಕಾಗಿ ಕಾಲೇಜು ಹಾಗೂ ರಸ್ತೆಗಳನ್ನು ನೋಡಲಾಗುತ್ತಿದೆ. ಚಿತ್ರೀಕರಣದ ಸ್ಥಳ ಖಚಿತವಾಗುತ್ತಿದ್ದಂತೆಯೇ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. 

ಚಿತ್ರವನ್ನು ಕೆ. ಮಂಜು ನಿರ್ಮಾಣ ಮಾಡುತ್ತಿದ್ದು, ಗೋಪಿ ಸುಂದರ್ ಅವರು ಸಂಗೀತ ನೀಡಿದ್ದಾರೆ. 

SCROLL FOR NEXT