ಸಿನಿಮಾ ಸುದ್ದಿ

ಕೇರಳದಲ್ಲೂ ರಾಕಿಭಾಯ್ ಹವಾ: ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ರಾಕಿಂಗ್ ಸ್ಟಾರ್! ವಿಡಿಯೋ

Nagaraja AB

ಬೆಂಗಳೂರು: ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಂತರ ರಾಕಿಭಾಯ್ ಯಶ್  ಅಭಿಮಾನಿ ಬಳಗ ದೇಶಾದ್ಯಂತ ವಿಸ್ತರಣೆಯಾಗಿದೆ. ಅದರಲ್ಲೂ ದಕ್ಷಿಣ ಭಾರತೀಯ ಚಿತ್ರಪ್ರೇಮಿಗಳು ರಾಕಿ ಭಾಯ್ ಭೇಟಿ ಮಾಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ಇತ್ತೀಚಿಗಷ್ಟೇ ತಮಿಳು ಹಾಗೂ ತೆಲುಗಿನ ಅಭಿಮಾನಿಗಳನ್ನು ಬೆಂಗಳೂರಿನಲ್ಲಿರುವ ತಮ್ಮ ಮನೆಯ ಮುಂದೆ ಭೇಟಿಯಾಗಿ ಮಾತುಕತೆ ನಡೆಸಿದ್ದ ಯಶ್, ಇದೀಗ ಕೇರಳದ ಅಭಿಮಾನಿಗಳ ಜೊತೆಗೂ ಕೆಲ ಸಮಯ ಕಳೆದಿದ್ದಾರೆ. ಅಭಿಮಾನಿಗಳು ರಾಕಿ ಭಾಯ್ ಪೋಟೋ ಹಾಗೂ ಯಶ್ ಹೆಸರಿರುವ ಟೀ ಶರ್ಟ್ ಗಳನ್ನು ನೀಡಿ ಸಂತಸಪಟ್ಟಿದ್ದಾರೆ. ಕೆಜಿಎಫ್ ಚಿತ್ರದ ಡೈಲಾಗ್ ಹೊಡೆದು ಖುಷಿಪಟ್ಟಿದ್ದಾರೆ.

ಕೇರಳ ಅಭಿಮಾನಿಗಳ ಅಭಿಮಾನ ಕಂಡು ಯಶ್ ಮನಸೋತಿದ್ದಾರೆ. ಈ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

SCROLL FOR NEXT