ಸಿ ಪ್ಲಸ್ ಪ್ಲಸ್ 
ಸಿನಿಮಾ ಸುದ್ದಿ

ಸಿ++ ಸೈಬರ್ ಜಗತ್ತಿನಲ್ಲಿ ನಡೆಯುವ ಅಪಾಯಕಾರಿ ಅಪರಾಧಗಳ ಅನಾವರಣ!

ಬ್ಲೂ ಎಲಿಫ಼ೆಂಟ್ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಸಿ++" ಚಿತ್ರವೂ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬೆಂಗಳೂರು: ಬ್ಲೂ ಎಲಿಫ಼ೆಂಟ್ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಸಿ++" ಚಿತ್ರವೂ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸುರೇಶ್ ಲಿಯೋನ್ ರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸ್ವೀಡನ್‌ನ ಜಾನ್ ಬೋಬರ್ಗ್ ಸಂಗೀತ ನೀಡಿದ್ದಾರೆ.

ಸಂದೀಪ್ ಹಂಚಿನ್ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಅವರ ಸಂಕಲನವಿದ್ದು,  ಸುರೇಶ್ ಲಿಯೋನ್ ರೇ, ನಾಗೇಂದ್ರ ಅರಸ್, ವಿರಾಜ್ ವಿಸ್ಮಿತ್, ವಿಶುವೀರ್, ಆದರ್ಶ ಮುಂತಾದವರ ತಾರಾಬಳಗವಿದೆ.

ಹಾರ್ಡ್ ವೇರ್ ಇಂಜಿನಿಯರ್ ಆಗಿರುವ ಕಥಾ ನಾಯಕನನ್ನು ಅಪಹರಣ ಮಾಡಲಾಗುತ್ತದೆ. ಆತನ ಮುಂದೆಯೇ ಮತ್ತೊರ್ವನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗುತ್ತದೆ. ಅಲ್ಲಿಂದ ನಾಯಕ ತಪ್ಪಿಸಿಕೊಳ್ಳುವುದು ಹೀಗೆ ಚಿತ್ರಕಥೆ ಸಾಗುತ್ತದೆ. 

ಮುಂದೆ ನಾಯಕ ಜನರಿಗೆ ಕ್ರೈಂಗಳ ಬಗ್ಗೆ ಎಚ್ಚರಿಕೆ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಾನೆ. ಹೀಗೆ ಸೈಬರ್ ಭೂಗತ ಜಗತ್ತಿನಲ್ಲಿ ಅಪಾಯಕಾರಿ ಅಪರಾಧಗಳ ಕುರಿತು ಈ ಚಿತ್ರ ಸಂದೇಶ ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!