ಗೀತಾ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

'ಗೀತಾ' ಚಿತ್ರದ ಕನ್ನಡವೇ ಸತ್ಯ ಹಾಡಿಗೆ ಭರ್ಜರಿ ರೆಸ್ಪಾನ್ಸ್ 

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದು ಅಂದಿನ ಗೋಕಾಕ್ ಚಳವಳಿಯನ್ನು ನೆನಪಿಸುತ್ತದೆ. 

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದು ಅಂದಿನ ಗೋಕಾಕ್ ಚಳವಳಿಯನ್ನು ನೆನಪಿಸುತ್ತದೆ.


ಹಾಡಿನ ಸಾಹಿತ್ಯ ಮತ್ತು ಸಂಗೀತದಿಂದ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ.ಕನ್ನಡದ ನಟರಾದ ಜಗ್ಗೇಶ್, ರಮೇಶ್ ಅರವಿಂದ್, ಪ್ರೇಮ್, ಶರನ್, ಧೀರನ್ ರಾಜ್ ಕುಮಾರ್, ಆಶಿಕಾ ರಂಗನಾಥ್, ನಿರ್ದೇಶಕರುಗಳಾದ ರಿಶಬ್ ಶೆಟ್ಟಿ, ತರುಣ್ ಸುಧೀರ್, ಪ್ರಶಾಂತ್ ರಾಜ್, ಎಪಿ ಅರ್ಜುನ್, ಪವನ್ ಒಡೆಯರ್, ಎಸ್ ಕೃಷ್ಣ, ಚೇತನ್ ಕುಮಾರ್, ಪ್ರೀತಂ ಗುಬ್ಬಿ, ಯೋಗರಾಜ್ ಭಟ್, ನಾಗಶೇಖರ್, ರಘುರಾಮ್, ಮಂಜು ಮಾಂಡವ್ಯ ಮತ್ತು ಸುನಿ ವಿಡಿಯೊಕ್ಕೆ ಖುಷಿಪಟ್ಟಿದ್ದಾರೆ.


ಗೀತಾ ಚಿತ್ರವನ್ನು ನಿರ್ಮಿಸುತ್ತಿರುವ ಗಣೇಶ್ ಮತ್ತು ಅದಕ್ಕೆ ಬಂಡವಾಳ ಹೂಡಿರುವ ಸೈಯದ್ ಸಲಾಮ್ ಖುಷಿಯಾಗಿದ್ದಾರೆ. 
ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿರುವ ಗೀತಾ ಚಿತ್ರದಲ್ಲಿ ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್, ಶಾನ್ವಿ ಶ್ರೀವಾಸ್ತವ್ ನಟಿಸುತ್ತಿದ್ದಾರೆ.


ಚಿತ್ರತಂಡ ಟೀಸರ್ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದು ಸೆಪ್ಟೆಂಬರ್ 27ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಚಿತ್ರದ ವಿತರಣೆ ಹಕ್ಕನ್ನು ಮಂಜುನಾಥ ಗೌಡ ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT