ರವಿ ಚಂದ್ರನ್ 
ಸಿನಿಮಾ ಸುದ್ದಿ

ರವಿಚಂದ್ರನ್ ನಟನೆಯ ರವಿ ಬೋಪಣ್ಣ ಫಸ್ಟ್ ಲುಕ್ ರಿಲೀಸ್

‘ಅಪೂರ್ವ’ ನಂತರ ‘ಕ್ರೇಜಿ ಸ್ಟಾರ್’ ರವಿಚಂದ್ರನ್, ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ನಿರ್ದೇಶನಕ್ಕೆ ಕೈಹಾಕಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದರೊಳಗೆ ‘ರವಿ ಬೋಪಣ್ಣ’ ಬಿರುಸಿನ ಚಿತ್ರೀಕರಣ ಆರಂಭಿಸಿದ್ದಾರೆ. ಸದ್ಯ ಅದರ ಫಸ್ಟ್​ಲುಕ್ ರಿಲೀಸ್ ಆಗಿದೆ.

‘ಅಪೂರ್ವ’ ನಂತರ ‘ಕ್ರೇಜಿ ಸ್ಟಾರ್’ ರವಿಚಂದ್ರನ್, ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ನಿರ್ದೇಶನಕ್ಕೆ ಕೈಹಾಕಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದರೊಳಗೆ ‘ರವಿ ಬೋಪಣ್ಣ’ ಬಿರುಸಿನ ಚಿತ್ರೀಕರಣ ಆರಂಭಿಸಿದ್ದಾರೆ. ಸದ್ಯ ಅದರ ಫಸ್ಟ್​ಲುಕ್ ರಿಲೀಸ್ ಆಗಿದೆ.

 ರವಿ ಬೋಪಣ್ಣ ಶೀರ್ಷಿಕೆ ಕೆಳಗೆ  ‘ದೃಶ್ಯ 2’ ಎಂಬ ಅಡಿಬರಹ ಗಮನಸೆಳೆಯುತ್ತಿದೆ. ರವಿಚಂದ್ರನ್ ನಟನೆಯ ‘ದೃಶ್ಯ’ 2014ರಲ್ಲಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ಈಗ ‘ರವಿ ಬೋಪಣ್ಣ ಸಿನಿಮಾದಲ್ಲೂ ಅದು ಕಾಣಿಸಿಕೊಂಡಿದೆ. ಅಲ್ಲಿಗೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಎಂಬುದು ಖಾತ್ರಿಯಾಗಿದೆ. ಇನ್ನು, ಫಸ್ಟ್​ಲುಕ್ ಮೇಲೆ ಮೀಸೆ ಮೇಲೆ ಕೈ, ಸವಾಲಿಗೆ ಸೈ , ಸಿಡಿಯೋಕಿಡಿಗಳು ಎಷ್ಟೇ ಇದ್ರು, ಬೆಂಕಿ ಬೆಂಕಿನೇ ಎಂಬ ಡೈಲಾಗ್​ಗಳು ಕುತೂಹಲ ಮೂಡಿಸಿವೆ.

ರವಿ ಬೋಪಣ್ಣಗೆ ನಿರ್ದೇಶನ ಮಾಡುವುದರ ಜತೆಗೆ ಸಂಗೀತ, ಸಾಹಿತ್ಯ, ಚಿತ್ರಕಥೆ, ಸಂಕಲನ ಎಲ್ಲವನ್ನೂ ರವಿಚಂದ್ರನ್ ಅವರೇ ನಿಭಾಯಿಸುತ್ತಿದ್ದಾರೆ. ಅಜಿತ್ ಈ ಚಿತ್ರದ ನಿರ್ವಪಕರು. ಬಹುಮುಖ್ಯವಾದ ಅತಿಥಿ ಪಾತ್ರದಲ್ಲಿ ‘ಕಿಚ್ಚ’ ಸುದೀಪ್ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್ ಮುಂತಾದವರು ಕಾಣಿಸಿಕೊಂಡಿದ್ದು, ನಾಯಕಿಯಾಗಿ ಕಾವ್ಯಾ ಶೆಟ್ಟಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು