ಇಂಗ್ಲೆಂಡ್ ವರ್ಸಸ್ ಇಂಡಿಯಾ ಸ್ಟಿಲ್ 
ಸಿನಿಮಾ ಸುದ್ದಿ

ಅಮೆಜಾನ್ ಪ್ರೈಮ್ ನಲ್ಲಿ 'ಇಂಡಿಯಾ ವರ್ಸಸ್ ಇಂಗ್ಲೆಂಡ್' 

ಜನವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆ.  ಮತ್ತೊಂದು ವಿಶೇಷವೆಂದರೆ ಕನ್ನಡದ ಖಡಕ್ ಮುಖದ, ಕಂಚಿನ ಕಂಠದ ನಟ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಿದ್ದಾರೆ

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ಅಮೆಜಾನ್ ಪ್ರೈಮ್‌ನಲ್ಲಿ ಇರುವ ಎಲ್ಲ ಕನ್ನಡ ಸಿನಿಮಾಗಳನ್ನೂ ನೋಡಿ ಮುಗಿಯಿತೇ? ಇನ್ಯಾವ ಸಿನಿಮಾ ಕೂಡ ಉಳಿದಿಲ್ಲ ಎಂದು ಬೇಸರಪಟ್ಟುಕೊಳ್ಳುವವರಿಗೆ ಖುಷಿಯ ಸುದ್ದಿ ಸಿಕ್ಕಿದೆ. 

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಶುಕ್ರವಾರದಿಂದ ಲಭ್ಯವಾಗುತ್ತಿದೆ. ಸಿನಿಮಾ ಪ್ರೇಮಿಗಳಿಗೆ ಮತ್ತೆರಡು ಹೊಸ ಸಿನಿಮಾದ ಅನುಭವವನ್ನು ಪಡೆದುಕೊಳ್ಳಬಹುದು.

ಜನವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆ.  ಮತ್ತೊಂದು ವಿಶೇಷವೆಂದರೆ ಕನ್ನಡದ ಖಡಕ್ ಮುಖದ, ಕಂಚಿನ ಕಂಠದ ನಟ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಿದ್ದಾರೆ

ಜನವರಿ 24ರಂದ ಬಿಡುಗಡೆಯಾಗಿದ್ದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಅರ್ಧದಷ್ಟು ಭಾಗ ಇಂಗ್ಲೆಂಡ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಕಾಣೆಯಾಗಿ ಇಂಗ್ಲೆಂಡ್‌ಗೆ ಕಳ್ಳಸಾಗಣೆಯಾಗುವ ಅಮೂಲ್ಯ ಆಭರಣದ ಬೆನ್ನತ್ತುವ ನಾಯಕ (ವಸಿಷ್ಠ ಸಿಂಹ) ಮತ್ತು ನಾಯಕಿಯ (ಮಾನ್ವಿತಾ ಹರೀಶ್) ಕಥೆಯಿದು.

ಬಹುಭಾಗ ಇಂಗ್ಲೆಂಡಿನಲ್ಲಿ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಡಗೀತೆಯೂ ರಾಷ್ಟ್ರಗೀತೆಯೂ ಬೇರೆ ಸ್ವರೂಪದಲ್ಲಿವೆ. ಅರ್ಜುನ್ ಜನ್ಯ ಐದು ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ, ಪ್ರಕಾಶ್ ಬೆಳವಾಡಿ, ಅನಂತ ನಾಗ್, ಸಾಧು ಕೋಕಿಲಾ, ಸುಮಲತಾ ಅಂಬರೀಷ್ ಅವರನ್ನೊಳಗೊಂಡ ಅದ್ದೂರಿ ತಾರಾಗಣವಿದೆ. ಮನೆಯಲ್ಲೇ ಮನೆಮಂದಿ ಎಲ್ಲಾ ಕುಳಿತು ಮನರಂಜನೆ ಪಡೆಯಲು ನಿಮ್ಮಮನೆ ಬಾಗಿಲಿಗೇ ಬಂದಿದೆ,
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT