ಸಿನಿಮಾ ಸುದ್ದಿ

ಪ್ರಧಾನಿಗೆ ಅಪಹಾಸ್ಯ; ನೆಟ್ಟಿಗರಿಂದ ಮಂಗಳಾರತಿ ಎತ್ತಿಸಿಕೊಂಡ ಬಾಲಿವುಡ್ ನಟಿ!

Shilpa D

ಮುಂಬಯಿ: ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಜನತಾ ಕರ್ಫ್ಯೂ ಚಪ್ಪಾಳೆ ಅಭಿಯಾನ, ಲಾಕ್‌ಡೌನ್‌ನಂತಹ ವಿಶಿಷ್ಟಕ್ರಮಗಳನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದಾರೆ. 

ಏ.5ರ ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು ಆರಿಸಿ, ದೀಪ ಬೆಳಗುವಂತೆ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ, ತಪ್ಪಡ್ ನಟಿ ತಾಪ್ಸಿ ಪನ್ನು, 'ಮತ್ತೊಂದು ಟಾಸ್ಕ್ ಶುರು, ಯ..ಯ..ಯ..! ಎಂದು ಮೋದಿಯನ್ನು ಅಪಹಾಸ್ಯ ಮಾಡಲು ಹೋಗಿ ನೆಟ್ಟಿಗರಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ. 

ಕಿಲ್ಲರ್ ಕೊರೋನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಣ ತೊಟ್ಟಿವೆ. ಈ ವೈರಸ್‌ ಇನ್ನಷ್ಟು ಹರಡಬಾರದೆಂದು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಮಾರ್ಚ್‌ 22 ರಂದು ಜನತಾ ಕರ್ಫ್ಯೂ ಹೇರಿದ್ದರು. ಅಂದು ಸಂಜೆ  ಕೊರೋನಾ ಜೊತೆ ಹಗಲು ರಾತ್ರಿ ಫೈಟ್‌ ಮಾಡುತ್ತಿರುವ ವೈದ್ಯರಿಗೆ, ನರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸಲು  ಮನೆ ಬಾಗಿಲು, ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಕೇಳಿಕೊಂಡಿದ್ದರು. ಅದಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು. 

ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಜನತಾ ಕಫ್ರ್ಯೂ, ಚಪ್ಪಾಳೆ ಅಭಿಯಾನ, ಲಾಕ್‌ಡೌನ್‌ನಂತಹ ವಿಶಿಷ್ಟಕ್ರಮಗಳನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದಾರೆ. ಏ.5ರ ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು ಆರಿಸಿ, ದೀಪ ಬೆಳಗುವಂತೆ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ.

SCROLL FOR NEXT