ಹರಿಪ್ರಿಯಾ 
ಸಿನಿಮಾ ಸುದ್ದಿ

ಲಾಕ್ ಡೌನ್ ದಿನಗಳಲ್ಲಿ 'ನೀರ್ ದೋಸೆ' ಹಾಗೂ ಸಿಗರೇಟ್ ಗಳನ್ನು ನೆನೆದ ಹರಿಪ್ರಿಯಾ!

ನೀರ್ ದೋಸೆ" ಚಿತ್ರದಲ್ಲಿ ಬೆಳ್ಳುಳ್ಳಿ ಅಲಿಯಾಸ್ ಕುಮುದಾ ಪಾತ್ರದ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಲಾಕ್ ಡೌನ್ ದಿನಗಳಲ್ಲಿ ಮತ್ತೊಮ್ಮೆ ಆ ಪಾತ್ರದ ಕುರಿತು ಮಾತನಾಡಿದ್ದಾರೆ.

ನೀರ್ ದೋಸೆ" ಚಿತ್ರದಲ್ಲಿ ಬೆಳ್ಳುಳ್ಳಿ ಅಲಿಯಾಸ್ ಕುಮುದಾ ಪಾತ್ರದ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಲಾಕ್ ಡೌನ್ ದಿನಗಳಲ್ಲಿ ಮತ್ತೊಮ್ಮೆ ಆ ಪಾತ್ರದ ಕುರಿತು ಮಾತನಾಡಿದ್ದಾರೆ.

ತಮ್ಮ ಬ್ಲಾಗಿನಲ್ಲಿ ಈ ಕುರಿತು ಬರೆದುಕೊಂಡ ನಟಿ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಮತ್ತು ಧೂಮಪಾನದ ಪರಿಣಾಮಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ದತ್ತಣ್ಣ ಮತ್ತು ಸುಮಲತಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

"ನಾನು ಧೂಮಪಾನ ಮಾಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ, ಆದರೆ ಇಲ್ಲಿ ನಾನು ನನ್ನ ಬೆರಳುಗಳ ನಡುವೆ ಸಿಗರೇಟ್ ಹಿಡಿದಿರುತ್ತೇನೆ ಮತ್ತು ಅದನ್ನು ಹೇಗೆ ಪಫ್ ಮಾಡುವುದೆಂದು ಕಲಿತೆ" ಹರಿಪ್ರಿಯಾ ಹೇಳುತ್ತಾರೆ, ಇದಕ್ಕೆ ಸಂಬಂಧಿಸಿ ಧೂಮಪಾನಿಗಳಾಗಿದ್ದ ತನ್ನ ಸಹೋದರ ಮತ್ತು ಸ್ನೇಹಿತರಿಂದ ಸಲಹೆಗಳನ್ನು ನಟಿ ಪಡೆದಿದ್ದರಂತೆ.

“ನಾನು ಯಾವಾಗಲೂ ಧೂಮಪಾನವನ್ನು ತ್ಯಜಿಸುವಂತೆ ಹೇಳುತ್ತಿದ್ದೆ. ಆದರೆ ನಾನೇ ಒಂದು ದಿನ ಕೈನಲ್ಲಿ ಸಿಗರೇಟ್ ಹಿಡಿಯಲಿದ್ದೇನೆಂದು ಯಾರು ಭಾವಿಸಿದ್ದರು?"

ಧೂಮಪಾನವು ತುಂಬಾ ಕೆಟ್ಟ ಪರಿಣಾಮ ಬೀರುವುದರಿಂದ ಜನರು ಹೇಗೆ ವ್ಯಸನಿಯಾಗುತ್ತಾರೆ ಎಂದು ಹರಿಪ್ರಿಯಾ ಆಶ್ಚರ್ಯಪಡುತ್ತಾರೆ, ಅಲ್ಲದೆ ಈ ಸಿಗರೇಟ್ ಸೇವನೆ ಆಕೆಯ ಮೇಲೂ ಎಷ್ಟು ಕೆಟ್ಟ ಪರಿಣಾಮ ಬೀರಿದೆ ಎಂದೂ ನೆನಪಿಸಿಕೊಳ್ಳುತ್ತಾರೆ." ಆ ದಿನಗಳಲ್ಲಿ ನನಗೆ ಪ್ರತಿ ಸಾರಿ ಮೈಗ್ರೇನ್ ಪ್ರಾರಂಭವಾಗುತ್ತಿತ್ತು. ಇದು ನಾಲ್ಕು ವರ್ಷಗಳ ನಂತರವೂ ಇಂದಿಗೂ ನನ್ನ ಮೇಲೆ ಪರಿಣಾಮ ಬೀರುತ್ತಲಿದೆ. ಆದರೆ ಚಿತ್ರ ಜನಪ್ರಿಯತೆ ಎಲ್ಲವನ್ನೂ ಇಷ್ಟವಾಗಿಸಿದೆ. "ಅಲ್ಲದೆ ಮುಖೇಶ್ ಅವರ ಸಾಲುಗಳಾದ - ‘Smoking Kills’ ಎನ್ನುವ ಸಾಲನ್ನು ಹೇಳಲು ನಟಿ ಮರೆತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; 127 ರನ್‌ಗಳ ಭರ್ಜರಿ ಜಯ, T20 ಸರಣಿ ಕ್ಲೀನ್ ಸ್ವೀಪ್

'ಮೇಡಂ, ನಿಮ್ಮಂತ ಸುಂದರಿ ಯಾರೂ ಇಲ್ಲ'; ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, CM ಕೋಟಾದಡಿ IAS ಹುದ್ದೆ ಕೊಡಿಸ್ತೇನೆ!

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್

India vs Afghanistan: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; T20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!