ಸಿನಿಮಾ ಸುದ್ದಿ

ಲಾಕ್ ಡೌನ್ ಸಮಯದಲ್ಲಿ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತಿದೆ: ಶ್ರೀಮುರುಳಿ

Nagaraja AB

ಬೆಂಗಳೂರು:ಲಾಕ್ ಡೌನ್ ಅವಧಿಯಲ್ಲಿ ಒಂದೇ ಕಡೆ ಇರುವುದರಿಂದ ಭಿನ್ನ ಪ್ರಪಂಚ ತಿಳಿಯಬಹುದಾಗಿದೆ.ಮನಸ್ಸು ಮತ್ತು ದೇಹದ ನಡುವಿನ ಸವಾಲು ಒಂದೇ ರೀತಿಯಾಗಿ ಕಂಡುಬರಲಿದೆ ಎಂಬುದನ್ನು ನಟ ಶ್ರೀಮುರುಳಿ ಒಪ್ಪಿಕೊಳ್ಳುತ್ತಾರೆ.

ವಾರಣಾಸಿಯಲ್ಲಿ ಮದಗಜ ಚಿತ್ರೀಕರಣವನ್ನು ಶ್ರೀಮುರುಳಿ ಮುಗಿಸಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಎಸ್ ಉಮಾಪತಿ ನಿರ್ಮಿಸುತ್ತಿದ್ದಾರೆ.ಲಾಕ್ ಡೌನ್ ಜಾರಿಗೂ ಮುನ್ನ 25 ದಿನಗಳ ಚಿತ್ರೀಕರಣವನ್ನು ಮುಗಿಸಿ ಚಿತ್ರತಂಡ ನಗರಕ್ಕೆ ವಾಪಸ್ಸಾಗಿತ್ತು

ಮಕ್ಕಳು ಮತ್ತು ಕುಟುಂಬದೊಂದಿಗೆ ಅಮೂಲ್ಯ ಸಮಯ ಕಳೆಯಲು ಲಾಕ್ ಡೌನ್ ಉತ್ತಮ ಅವಕಾಶ ನೀಡಿದೆ. ಆದರೆ, ಇದು ಬೇಸಿಗೆ ಮಜಾ ಮಾಡುವಂತಹದ್ದಲ್ಲ, ಕೋವಿಡ್-19 ಲಾಕ್ ಡೌನ್ ಎಂದು ಅವರು ಹೇಳುತ್ತಾರೆ. 

ಪ್ರಸ್ತುತ ಇಡೀ ಕುಟುಂಬ ಒಟ್ಟಿಗೆ ಕೆಲಸ ಮಾಡುತ್ತಿದೆ. ಮಕ್ಕಳು ಜೊತೆಯಲ್ಲಿ ವ್ಯಾಯಾಮ ಮಾಡುತ್ತಾರೆ. ಮನೆ ಕೆಲಸದಲ್ಲಿ ತಾನೂ ಕೂಡಾ ಕೈ ಜೋಡಿಸಿದ್ದು, ಇದೀಗ ಸಂಪೂರ್ಣ ಮನುಷ್ಯನಾದ ಭಾವನೆ ಉಂಟಾಗಿದೆ ಎಂದು ಮುರುಳಿ ತಿಳಿಸಿದರು. 

ಈ ವರ್ಷ ಮದಗಜದಲ್ಲಿ ಮಾತ್ರ ಶ್ರೀಮುರುಳಿ ಅಭಿನಯಿಸುತ್ತಿದ್ದಾರೆ. ಮುಂದಿನ ವರ್ಷ ಪ್ರಶಾಂತ್ ನಿಲ್ ಚಿತ್ರಕಥೆಗೆ ಡಾ. ಸೂರಿ ಆಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ಚಿತ್ರದಲ್ಲಿ ಶ್ರೀಮುರುಳಿ ನಟಿಸಲಿದ್ದಾರೆ.  ಮೂರ್ನಾಲ್ಕು ನಿರ್ದೇಶಕರೊಂದಿಗೆ  ಚಿತ್ರ ಸಂಬಂಧ ಮಾತುಕತೆ ನಡೆಯುತ್ತಿದೆ. ಎಲ್ಲವೂ ಅಂತಿಮಗೊಂಡ ಬಳಿಕ ಸಮಗ್ರ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ. 

ಕೊರೋನಾವೈರಸ್ ನಿಂದಾಗಿ ಎಲ್ಲವೂ ಸ್ಥಗಿತಗೊಂಡಿದೆ. ಜನರ ಮನಸ್ಸಿನಲ್ಲಿ ಮನರಂಜನೆಯೂ ಕೊನೆಯ ವಿಷಯವಾಗಿದ್ದರೂ ಸಹ, ಅದೇ ಮನರಂಜನೆಯು ಪ್ರೇಕ್ಷಕರನ್ನು ಮನೆಯಲ್ಲಿಯೂ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳುವ ಶ್ರೀಮುರುಳಿ, ನಟರ ಅಭಿನಯದ ಮೇಲೆ ಮನರಂಜನೆ ಉಳಿದಿದ್ದರೆ ಇಡೀ ಜನರು ದೃಶ್ಯದ ಹಿಂದಿರುತ್ತಾರೆ. ಮನರಂಜನೆ ಇಲ್ಲದೆ ಮುಂಚೂಣಿ ಚಾನೆಲ್ ಗಳು, ಇತರರು ಹೇಗೆ ಉಳಿಯಲು ಸಾಧ್ಯ, ಲಾಕ್ ಡೌನ್ ಸಮಯದಲ್ಲಿ ಸಿನಿಮಾ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎನ್ನುತ್ತಾರೆ ಶ್ರೀಮುರುಳಿ.

 ಇಡೀ ವಿಶ್ವ ಕೊರೋನಾವೈರಸ್ ನಿಂದ ನರಳುತ್ತಿದ್ದು, ನಾವು ಕೂಡಾ ಅದೇ ದೋಣಿಯಲ್ಲಿ ಸಾಗುತ್ತಿದ್ದೇವೆ. ಕೆಲ ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಒಟಿಟಿಯಲ್ಲಿ ಅನೇಕ ಸಿನಿಮಾಗಳು, ಧಾರವಾಹಿಗಳು ಬರಲಿದ್ದು, ಅರ್ಧ ಗಂಟೆಗಳ ಕಾಲ ವೀಕ್ಷಿಸುವುದಾಗಿ ಮುರುಳಿ ತಿಳಿಸಿದ್ದಾರೆ

ಚಿತ್ರೀಕರಣ ಮತ್ತು ಚಿತ್ರಮಂದಿರಗಳಿಗೆ ಹೋಗದಿದ್ದರೂ, ಮನರಂಜನೆಯು ನಮ್ಮ ದೈನಂದಿನ ಜೀವನದಲ್ಲಿ ಚರ್ಚೆಯ ಒಂದು ಭಾಗವಾಗಿದೆ ಎಂದು ಶ್ರೀಮುರುಳಿ ಹೇಳುತ್ತಾರೆ.

SCROLL FOR NEXT