ಸಿನಿಮಾ ಸುದ್ದಿ

ಆಸ್ಪತ್ರೆಯಿಂದಲೇ 'ಹಲೋ' ಎಂದ ಎಸ್‌ಪಿಬಿ, ಆರೋಗ್ಯದಲ್ಲಿ ಚೇತರಿಕೆ ಇದೆ ಎಂದ ಕುಟುಂಬ

ಪ್ರಖ್ಯಾತ  ಹಿನ್ನೆಲೆ ಗಾಯಕ  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕೆಲವು ದಿನಗಳ ಹಿಂದೆ ಕೊರೋನಾವೈರಸ್ ಸೋಂಕಿಗೆ ತಿತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು  ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೆ ಒಳಗಾಗಿದೆ, ಆದರೆ ಇದೀಗ ಸ್ವತಃ ಬಾಲಸುಬ್ರಹ್ಮಣ್ಯಂ ಅವರೇ ಫೇಸ್‌ಬುಕ್ ಪ್ರೊಫ

ಪ್ರಖ್ಯಾತ  ಹಿನ್ನೆಲೆ ಗಾಯಕ  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕೆಲವು ದಿನಗಳ ಹಿಂದೆ ಕೊರೋನಾವೈರಸ್ ಸೋಂಕಿಗೆ ತಿತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು  ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೆ ಒಳಗಾಗಿದೆ, ಆದರೆ ಇದೀಗ ಸ್ವತಃ ಬಾಲಸುಬ್ರಹ್ಮಣ್ಯಂ ಅವರೇ ಫೇಸ್‌ಬುಕ್ ಪ್ರೊಫೈಲ್ ಮೂಲಕ ವಿಡಿಯೋ ಸಂದೇಶ ಹಾಕಿದ್ದು ತಾವು ಆರೋಗ್ಯವಾಗಿರುವುದಾಗಿ ಸಂಜ್ಞೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

"ತಮ್ಮ ಕುಟುಂಬ ಸದಸ್ಯರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲು ಇಚ್ಚಿಸದೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲು ಬಯಸಿದ್ದೇನೆ "ಎಸ್‌ಪಿಬಿ ಹೇಳಿದ್ದಾರೆ.

ಇನ್ನು ಗಾಯಕರ ಪುತ್ರರಾದ ಎಸ್‌ಪಿ ಚರಣ್ ಪತ್ರಿಕಾಗೋಷ್ಠಿಯನ್ನು ನಡೆಸಿ "ತಂದೆಯವರ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎಂದಿದ್ದು ಇದು ಎಲ್ಲಾ ತಮಿಳು ಸುದ್ದಿ ಮಾದ್ಯಮಗಳಲ್ಲಿ ವರದಿಯಾಗಿದೆ,

ಇದೀಗ ಗಾಯಕನ ಅಭಿಮಾನಿಗಳಲ್ಲಿ ಆಶಾವಾದ ತುಂಬಲು ಆಸ್ಪತ್ರೆ ಯಿಂದ ಎಸ್‌ಪಿಬಿಯ ಹೆಬ್ಬೆರಳು ತೋರಿಸುವ ಚಿತ್ರದೊಂದಿಗೆ ಸೌಂಡ್ ನೋಟ್ ಸಹ ಬಿಡುಗಡೆಯಾಗಿದೆ,  ಅವರ ಅನಾರೋಗ್ಯದ ಸುದ್ದಿ ಹೊರಬಂದಾಗಿನಿಂದಲೂ ಅವರ ಅಪಾರ ಭಿಮಾನಿಗಳಿಗೆ ಇದು ಸಮಾಧಾನ ತಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT