ಜೋಗಿ 
ಸಿನಿಮಾ ಸುದ್ದಿ

ನನ್ನಿಂದ ಎಂದಿಗೂ ಇನ್ನೊಂದು 'ಜೋಗಿ'  ಚಿತ್ರ ಬರೋಕೆ ಸಾಧ್ಯವಿಲ್ಲ: ನಿರ್ದೇಶಕ ಪ್ರೇಮ್

ಆಗಸ್ಟ್ 19- ಇಂದಿಗೆ ಪ್ರೇಮ್ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ "ಜೋಗಿ" ಚಿತ್ರ ತೆರೆಗೆ ಬಂದು 15 ವರ್ಷವಾಗಿದೆ,  15 ವರ್ಷಗಳ ಹಿಂದೆ ಈ ದಿನ "ಜೋಗಿ" ತೆರೆಕಂಡು ಇತಿಹಾಸ ನಿರ್ಮಿಸಿತ್ತು. ಸೆಂಚುರಿ ಸ್ಟಾರ್ ಅಭಿಮಾನಿಗಳು ಇದಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಲ್ಲರೂ ಕಾಮನ್ ಡಿಪಿ ಹಾಕಿಕೊಂಡಿರುವುದು ಕಾಣಬಹುದು.

ಆಗಸ್ಟ್ 19- ಇಂದಿಗೆ ಪ್ರೇಮ್ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ "ಜೋಗಿ" ಚಿತ್ರ ತೆರೆಗೆ ಬಂದು 15 ವರ್ಷವಾಗಿದೆ,  15 ವರ್ಷಗಳ ಹಿಂದೆ ಈ ದಿನ "ಜೋಗಿ" ತೆರೆಕಂಡು ಇತಿಹಾಸ ನಿರ್ಮಿಸಿತ್ತು. ಸೆಂಚುರಿ ಸ್ಟಾರ್ ಅಭಿಮಾನಿಗಳು ಇದಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಲ್ಲರೂ ಕಾಮನ್ ಡಿಪಿ ಹಾಕಿಕೊಂಡಿರುವುದು ಕಾಣಬಹುದು.

2005 ರಲ್ಲಿ ಬಿಡುಗಡೆಯಾದ ಈ ಚಿತ್ರವು ಶಿವಣ್ಣ ಮತ್ತು ಅರುಂಧತಿ ನಾಗ್ ಅವರನ್ನು ನೈಜ ತಾಯಿ-ಮಗ ಜೋಡಿಯಂತೆ ಬಿಂಬಿಸಿತ್ತು. . ಈ ಚಲನಚಿತ್ರವು ಕನ್ನಡ ಚಲನಚಿತ್ರೋದ್ಯಮದ ಅತಿದೊಡ್ಡ ಬ್ಲಾಕ್ ಬಸ್ಟರ್ಡ್ ಗಳಲ್ಲಿ ಒಂದಾಗಿದ್ದು ಹಾಡುಗಳು ಆಡಿಯೊ ಮಾರುಕಟ್ಟೆಯನ್ನು ಆಳಿವೆ. ಗುರುಕಿರಣ್ ಸಂಗೀತ ಸಂಯೋಜನೆಯ "ಬೇಡುವೆನು ವರವನ್ನು ಕೊಡೆತಾಯಿ ಜನ್ಮವನು..." ಇಂದಿಗೂ ಸಾಕಷ್ಟು ಜನಪ್ರಿಯ.

"61 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನಗಳನ್ನು ಕಂಡಿದ್ದ ಚಿತ್ರ "ಜೋಗಿ"  ಆ ಕಾಲದ ಅನೇಕ ದಾಖಲೆಗಳನ್ನು ಮುರಿದ ಚಿತ್ರ" ಎಂದು ನಿರ್ದೇಶಕ ಪ್ರೇಮ್ ನೆನಪಿಸಿಕೊಳ್ಳುತ್ತಾರೆ, ಇವತ್ತು ಸಹ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಜೋಗಿ ಪ್ರೇಮ್ ಎಂದೇ ಅವರನ್ನು ಪ್ರೀತಿಯಿಂದ ಗುರುತಿಸುತ್ತಾರೆ.  "ಜೋಗಿ ವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ, ಮತ್ತು ಈ ವರ್ಷ ಚಿತ್ರ ಬಿಡುಗಡೆಯಾಗಿ 15 ವರ್ಷ ಪೂರ್ಣವಾಗಿರುವುದು ಇನ್ನಷ್ಟು ವಿಶೇಷವಾಗಿದೆ. ಈ ಚಿತ್ರವೀಗ ನನ್ನ ಪಾಲಿಗೆ ಇನ್ನಷ್ಟು ಹತ್ತಿರವಾಗಿದೆ ಏಕೆಂದರೆ  ನಾನು ಕಳೆದ ತಿಂಗಳು ನನ್ನ ತಾಯಿಯನ್ನು ಕಳೆದುಕೊಂಡೆ" ಎಂದು ಪ್ರೇಮ್ ಹೇಳಿದ್ದಾರೆ. , "ಜೋಗಿ ನನಗೆ ಕೇವಲ ಚಿತ್ರವಲ್ಲ, ಇದು ಬಹಳಷ್ಟು ಜೀವನ ಪಾಠಗಳನ್ನು ಕಲಿಸಿದೆ" ಅವರು ನುಡಿದರು.

ನನ್ನ ತಾಯಿ ಭಾಗ್ಯಮ್ಮ ಅವರಿಂದ ನನಗೆ ಈ ಚಿತ್ರಕ್ಕೆ ಸ್ಪೂರ್ತಿ ಸಿಕ್ಕಿತ್ತು. ಹಿರಿಯ ನಟಿ  ಅರುಂಧತಿ ನಾಗ್ ಅವರ ಪಾತ್ರವ ಮೂಲಕ ತಾಯಿಯ ಜೀವನವನ್ನು ತೆರೆಗೆ ತರಲು ಬಯಸಿದ್ದೆ, ಮಾಸ್ ಕಾನ್ಸೆಪ್ಟ್ ಗಳ ಹೊರತಾಗಿ ಚಲನಚಿತ್ರವಾಗಿ, ಜೋಗಿ ತಾಯಿ ಮತ್ತು ಅವಳ ಮಗನ ನಡುವಿನ ಸಂಬಂಧವನ್ನು ತೋರಿಸಿದೆ. ಇದು ಪೋಷಕರು ಮತ್ತು ಅವರ ಮಕ್ಕಳ ನಡುವಿನ ಸಂಬಂಧದ ಮೇಲೆ ಅದು ಹೇಗೆ ಪ್ರಭಾವ ಬೀರಿತು ಎಂಬುದಕ್ಕೆ ಉದಾಹರಣೆ ನೀಡುವ ನಿರ್ದೇಶಕ  “ನನ್ನ ಚಿತ್ರದಿಂದ ಪ್ರಭಾವಿತನಾಗಿ ಮಗನೊಬ್ಬ ಆರು ವರ್ಷಗಳ ನಂತರ ಮನೆಗೆ ವಾಪಾಸಾಗಿದ್ದ. ಇದನ್ನು ಆತನ ಕಾಲೇಜಿನ ಪ್ರಾಂಶುಪಾಲರು ನನಗೆ ಹೇಳಿದ್ದರು. ಇದನ್ನು ಕೇಳಿದ ನಾನು ಭಾವುಕನಾಗಿದ್ದೆ. ಅಂತೆಯೇ, ಈ ಚಿತ್ರವು ಅನೇಕರು ಅವರ ಹೆತ್ತವರನ್ನು ಮರಳಿ ಮನೆಗೆ ಕರೆದು ತರುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ, ಬಹಳಷ್ಟು ಜನರ ಮನಸ್ಥಿತಿಯನ್ನು ಬದಲಿಸಿದೆ ಎಂದು ನನಗೆ ತಿಳಿದಿದೆ",“ ಆಡಿಯೋ ಮತ್ತುಚಿತ್ರ ಪ್ರದರ್ಶನದ ಜತೆ ಕಮಾಲ್ ಮಾಡಿದ ಚಿತ್ರ ಒಟ್ಟಾರೆ  ಸುಮಾರು 300 ಕೋಟಿ ರೂ. .ಕಲೆಹಾಕಿತ್ತು.

"ನಾನು ನನ್ನ ಯಾವುದೇ ಚಲನಚಿತ್ರಗಳನ್ನು ತಮ್ಮ ವೃತ್ತಿಜೀವನದ ಮಹತ್ವದ ತಿರುವು ಎಂದು ಪರಿಗಣಿಸುವುದಿಲ್ಲ ಏಕೆಂದರೆ ಪ್ರತಿ ಚಲನಚಿತ್ರವು ವಾಸ್ತವಕ್ಕೆ ಹತ್ತಿರದಲ್ಲಿರುತ್ತದೆ, ನನ್ನ ಜೀವನ ಅನುಭವದಿಂದ ಬಂದಿದ್ದಾಗಿರುತ್ತದೆ. ಅದನ್ನು  ಸಿನಿಮೀಯ ಉದ್ದೇಶಗಳಿಗಾಗಿ ರೂಪಿಸಲಾಗಿದ್ದರೂ ನಾನು ಎಂದಿಗೂ ಇನ್ನೊಂದು ಜೋಗಿ ಚಿತ್ರ ಮಾಡಲು ಸಾಧ್ಯವಿಲ್ಲ. ದನ್ನೇ ನನ್ನ ಅಭಿಮಾನಿಗಳಿಗೆ ಮತ್ತು ಶಿವಣ್ಣನಿಗೆ ಹೇಳಲು ಬಯಸುತ್ತೇನೆ. ಜೋಗಿಯ ಬಗೆಗಿನ ನನ್ನ ನುಭವವನ್ನು ನನಗೆ ಪುನರಾವರ್ತಿಸಲು ಸಾಧ್ಯವಿಲ್ಲ. ನನ್ನ ಹಿಂದಿನ ಚಿತ್ರದಿಂದ ನಾನು ಪ್ರಭಾವಿತನಾಗಬಹುದು, ಆದರೆ ನಾನು ನಿಖರವಾಗಿ ಅದೇ  ಚಿತ್ರವನ್ನು ಮತ್ತೆ ಮಾಡಲು ಬರುವುದಿಲ್ಲ. " ಪ್ರೇಮ್ ಹೇಳುತ್ತಾರೆ, ಈ ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್ ಮತ್ತು ನಯನತಾರಾ ಅವರನ್ನೊಳಗೊಂಡು "ಯೋಗಿ" ಎಂಬ ಶೀರ್ಷಿಕೆಯಲ್ಲಿ ರೀಮೇಕ್ ಮಾಡಲಾಗಿದೆ. ತಮಿಳಿನಲ್ಲಿಯೂ ಈ ಚಿತ್ರದ ರೀಮೇಕ್ ಬಂದಿದೆ ಆದರೂ ಪ್ರೇಮ್ ಆ ಭಾಷೆಗಳಲ್ಲಿ ಚಿತ್ರ ನಿರ್ದೇಶನ ಮಾಡಿಲ್ಲ. 

“ಆಗ, ಈ ಚಿತ್ರವನ್ನು ವಿವಿಧ ಭಾಷೆಗಳಲ್ಲಿ ರೀಮೇಕ್ ಮಾಡಲು ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಮತ್ತು ಪ್ರಭಾಸ್ ಮುಂತಾದ ತಾರೆಯರು ನನ್ನನ್ನು ಸಂಪರ್ಕಿಸಿದರು. ಆದರೆ ಈ ಚಿತ್ರವನ್ನು ಬೇರೆ ಭಾಷೆಗೆ ಹೊಂದಿಸಲು ನನಗೆ ಸಾಧ್ಯವಾಗಲಿಲ್ಲ ಅಥವಾ ಜೋಗಿಯಲ್ಲಿ ಶಿವಣ್ಣ ನಿರ್ವಹಿಸಿದ ಪಾತ್ರಕ್ಕೆ ಬೇರೆ ಯಾವ ನಟನೂ ಹೊಂದಿಕೊಳ್ಳುವುದನ್ನು ನಾನು ನೋಡಲಿಲ್ಲ. ಈ ಚಿತ್ರದ ನಿರ್ಮಾಣದ ಸಮಯದಲ್ಲಿ, ಶಿವಣ್ಣ ಕೇವಲ ಕಲಾವಿದನಾಗಿ ಅಥವಾ ಡಾ. ರಾಜ್‌ಕುಮಾರ್ ಅವರ ಮಗನಾಗಿ ಕಾಣಲಿಲ್ಲ. ಬದಲಿಗೆ ಆತ ಮನೆಯವನಾಗಿ, ಸಹೋದರ, ಸಂಬಂಧಿ ಅಥವಾ ಪಕ್ಕದ ಮನೆ ವ್ಯಕ್ತಿಯಂತೆಯೂ ಇದ್ದರು. ಅವರು ತಮ್ಮ ಹೃದಯ , ಆತ್ಮವನ್ನೇ ಚಿತ್ರದಲ್ಲಿ ಇರಿಸಿದ್ದರು. ಎಷ್ಟರಮಟ್ಟಿಗೆಂದರೆ, ಶಿವಣ್ಣನನ್ನು ಬೇರೆ ಯಾವುದೇ ನಟನೊಂದಿಗೆ ಬದಲಾಯಿಸುವ ಬಗ್ಗೆ ಯೋಚಿಸಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ರಿಮೇಕ್ ಅನ್ನು ನಿರ್ದೇಶಿಸದಿರಲು ನಾನು ನಿರ್ಧರಿಸಿದ್ದೆ. " ಅವರು ವಿವರಿಸಿದರು.

ಒಂದು ತಿಂಗಳ ಕಾಲ ವಿರಾಮ ತೆಗೆದುಕೊಂಡಿದ್ದ ಪ್ರೇಮ್ ತಮ್ಮ ಮುಂದಿನ ಚಿತ್ರ ಏಕ್ ಲವ್ ಯಾ ಚಿತ್ರದ ಕೆಲಸ ಮುಂದುವರಿಸಲು ಸಜ್ಜಾಗಿದ್ದಾರೆ.  “ನನ್ನ ಬಳಿ ಎರಡು ಹಾಡುಗಳು ಬಾಕಿ ಉಳಿದಿವೆ, ಇದಕ್ಕಾಗಿ ನಾನು ಪ್ರಸ್ತುತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಮುಂದಿನ ತಿಂಗಳಿನಿಂದ ಹಾಡುಗಳ ಚಿತ್ರೀಕರಣ ಪ್ರಾರಂಭಿಸುತ್ತೇನೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ನಿರ್ಮಿಸಿರುವ ಈ ಚಿತ್ರದಲ್ಲಿ  ರಾಣಾ, ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಏತನ್ಮಧ್ಯೆ, ನಾನು ಮತ್ತೊಂದು ಕಥೆಯನ್ನು ಡೆವಲಪ್ ಮಾಡುತ್ತಿದ್ದೇನೆ. ನಾನು ಸ್ಕ್ರಿಪ್ಟ್ ಅನ್ನು ಪೂರ್ಣಗೊಳಿಸಿದಾಗ ಆ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಬಯಸುತ್ತೇನೆ," ಪ್ರೇಮ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT