ಸಿನಿಮಾ ಸುದ್ದಿ

ಭಜರಂಗಿ 2 ಮೂಲಕ ಯೋಗಿ ಬಾಬು ಕನ್ನಡಕ್ಕೆ ಪಾದಾರ್ಪಣೆ?

Sumana Upadhyaya

ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಕಾಕ್ ಟೇಲ್ ಸಿನೆಮಾದಲ್ಲಿ ಕಾಣಿಸಿಕೊಂಡ ಯೋಗಿ ಬಾಬು ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿದ್ದಾರೆ. ಅವರು ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ನಟ ಯೋಗಿ ಬಾಬು ಕನ್ನಡದಲ್ಲಿ ಎ ಹರ್ಷ ಅವರ ಭಜರಂಗಿ 2 ಚಿತ್ರದ ಮೂಲಕ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಚಿತ್ರದ ಕೊನೆಯ ಭಾಗದ ಶೂಟಿಂಗ್ ನಡೆಯುತ್ತಿದ್ದು ಕಳೆದ ಆಗಸ್ಟ್ 12ರಂದು  ಶೂಟಿಂಗ್ ಪ್ರಾರಂಭವಾಗಿದೆ.

ಯೋಗಿ ಬಾಬು ಚಿತ್ರೀಕರಣಕ್ಕಾಗಿ ಅಲಸೂರಿನಿಂದ ಮೋಹನ್ ಬಿ ಕೆರೆ ಸ್ಟುಡಿಯೊಕ್ಕೆ ಪ್ರತಿದಿನ ಪ್ರಯಾಣಿಸುತ್ತಿದ್ದಾರೆ.ಜಯಣ್ಣ ಫಿಲ್ಮ್ಸ್ ನಡಿ ತಯಾರಾಗುತ್ತಿರುವ ಭಜರಂಗಿ2 ಚಿತ್ರ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರವಾಗಿದ್ದು ಭಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಯೋಗಿ ಬಾಬುರವರ ಪಾತ್ರವೇನು ಎಂದು ಬಹಿರಂಗವಾಗಿಲ್ಲ.

SCROLL FOR NEXT