ಚಿತ್ರೀಕರಣ ವೇಳೆ ತೆಗೆದ ಫೋಟೋ 
ಸಿನಿಮಾ ಸುದ್ದಿ

ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್ ಬದಲಾವಣೆ ಅಲ್ಲ:ನಿರ್ದೇಶಕ ಪ್ರಶಾಂತ್ ನೀಲ್

ಯಶ್ ನಾಯಕ ನಟನಾಗಿರುವ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಮತ್ತೆ ಸುದ್ದಿಯಲ್ಲಿದೆ. ಕೆಜಿಎಫ್ 1ರಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿರುವ ಪಾತ್ರಕ್ಕೆ ಕೆಜಿಎಫ್ 2ನಲ್ಲಿ ಅವರ ಬದಲಾಗಿ ಪ್ರಕಾಶ್ ರಾಜ್ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು.

ಬೆಂಗಳೂರು: ಯಶ್ ನಾಯಕ ನಟನಾಗಿರುವ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಮತ್ತೆ ಸುದ್ದಿಯಲ್ಲಿದೆ. ಕೆಜಿಎಫ್ 1ರಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿರುವ ಪಾತ್ರಕ್ಕೆ ಕೆಜಿಎಫ್ 2ನಲ್ಲಿ ಅವರ ಬದಲಾಗಿ ಪ್ರಕಾಶ್ ರಾಜ್ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು.

ಇದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರಿಸಿದ್ದು, ಪ್ರಕಾಶ್ ರಾಜ್ ಅವರು ಅನಂತ್ ನಾಗ್ ಅವರ ಪಾತ್ರಕ್ಕೆ ಬದಲಲ್ಲ. ಅವರು ಹೊಸದಾಗಿ ಪ್ರವೇಶವಾಗಿದ್ದು ಚಿತ್ರದಲ್ಲಿ ಅವರಿಗೆ ಹೊಸ ಪಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಲಾಕ್ ಡೌನ್ ನಂತರ ನಿನ್ನೆ ಮತ್ತೆ ಕೆಜಿಎಫ್ 2 ಶೂಟಿಂಗ್ ಆರಂಭಗೊಂಡಿದ್ದು ಇನ್ನು 25 ದಿನಗಳ ಶೂಟಿಂಗ್ ಆಗಬೇಕಿದೆ. ಮೊದಲ ಹತ್ತು ದಿನಗಳ ಶೂಟಿಂಗ್ ನಲ್ಲಿ ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ನಾಗಾಭರಣ ಮೊದಲಾದವರಿರುತ್ತಾರೆ. ಕಂಠೀರವ ಸ್ಟುಡಿಯೊದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಯಶ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ತಯಾರಿ ಹಂತದಲ್ಲಿದ್ದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ಅಕ್ಟೋಬರ್ 23ರಂದು ಬಿಡುಗಡೆ ಮಾಡುವುದೆಂದು ಈ ಹಿಂದೆ ಹೇಳಿತ್ತು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!