ರಾಜವರ್ಧನ್ 
ಸಿನಿಮಾ ಸುದ್ದಿ

ಮುಂದಿನ ಕಮರ್ಷಿಯಲ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ ರಾಜವರ್ಧನ್

ಬಿಚ್ಚುಗತ್ತಿ:ಚಾಪ್ಟರ್ 1 ದಲವಾಯಿ ದಂಗೆ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಈ ಬಾರಿ ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಕುಮರೇಶ್ ಎಂ ನಿರ್ದೇಶನದ ಚಿತ್ರ. ನೂರೊಂದು ನೆನಪು ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಕುಮರೇಶ್ ಗೆ ಇದು ಎರಡನೇ ಚಿತ್ರ.

ಬಿಚ್ಚುಗತ್ತಿ:ಚಾಪ್ಟರ್ 1 ದಲವಾಯಿ ದಂಗೆ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಈ ಬಾರಿ ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಕುಮರೇಶ್ ಎಂ ನಿರ್ದೇಶನದ ಚಿತ್ರ. ನೂರೊಂದು ನೆನಪು ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಕುಮರೇಶ್ ಗೆ ಇದು ಎರಡನೇ ಚಿತ್ರ.

ಇನ್ನೂ ಹೆಸರಿಡದ ಈ ಚಿತ್ರ ಒಂದು ನೈಜ ಘಟನೆಯ ದೊಡ್ಡ ಹಗರಣಕ್ಕೆ ಸಂಬಂಧಿಸಿದ ಚಿತ್ರವಾಗಿದ್ದು ಇದಕ್ಕಾಗಿ ರಾಜವರ್ಧನ್ ತಮ್ಮ ದೇಹದ ಆಕಾರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.

ಪ್ರತಿ ಚಿತ್ರದಲ್ಲಿ ನಾನು ಏನಾದರೊಂದು ಹೊಸದನ್ನು ಮಾಡುತ್ತೇನೆ. ಮಾಸ್ ಆಗಿ ನಾನು ಮುಂದಿನ ಚಿತ್ರದಲ್ಲಿ ಬರಲಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು ಕುಮರೇಶ್ ಅವರು ಕಥೆ ಬರೆದ ರೀತಿ ಇಷ್ಟವಾಗಿದೆ. ಇದರಿಂದ ನನ್ನ ವೃತ್ತಿಗೆ ಬ್ರೇಕ್ ಸಿಗಬಹುದು ಎಂದು ಭಾವಿಸಿದ್ದೇನೆ ಎಂದು ರಾಜವರ್ಧನ್ ಹೇಳುತ್ತಾರೆ.

ಈ ಚಿತ್ರಕ್ಕಾಗಿ ನಾನು ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದೇನೆ, ಅದಕ್ಕಾಗಿ ಬಾಕ್ಸಿಂಗ್ ಅಭ್ಯಾಸ ಮಾಡಿದೆ ಎನ್ನುತ್ತಾರೆ ರಾಜವರ್ಧನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!