ಸಿನಿಮಾ ಸುದ್ದಿ

'ಕೆಜಿಎಫ್' ತಯಾರಕರಿಂದ ಮತ್ತೊಂದು ಹೊಸ ಪ್ಯಾನ್-ಇಂಡಿಯಾ ಚಿತ್ರ!

Raghavendra Adiga

ಈ ಹಿಂದೆ "ರಾಜಕುಮಾರ" "ಕೆಜಿಎಫ್ ಚಾಪ್ಟರ್ 1" ನಂತಹಾ ಅದ್ಭುತ ಚಲನಚಿತ್ರಗಳನ್ನು ನೀಡಿದ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಪ್ಯಾನ್-ಇಂಡಿಯಾ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಐದು ಭಾಷೆಗಳಲ್ಲಿ ನಿರ್ಮಿಸಲಾಗುವ ಈ ಚಿತ್ರ ದೇಶವ್ಯಾಪಿ ಲಕ್ಷಾಂತರ ಪ್ರೇಕ್ಷಕರನ್ನು ತಲುಪಲಿದೆ. , ಚಿತ್ರದ ನಿರ್ಮಾಪಕ ವಿಜಯ್ ಕಿರಗಂಡೂರ್ ಈ ಬಗ್ಗೆ ಮಾತನಾಡಿ “ಕೆಜಿಎಫ್ ಚಾಪ್ಟರ್ 1 ರ ನಮ್ಮ ಪ್ರಯತ್ನಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ನಮ್ಮ ಇಡೀ ತಂಡವನ್ನು ಬಹಳವಾಗಿ ಪ್ರೋತ್ಸಾಹಿಸಿತು. ನಮ್ಮ ಹೊಸ ಸಾಹಸದ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಮತ್ತು ನೀವು ಇಲ್ಲಿಯವರೆಗೆ ನಮಗೆ ತೋರಿಸಿದ ಅದೇ ಪ್ರೀತಿಯಿಂದಮ್ಮನ್ನು ಸ್ವಾಗತಿಸುತ್ತೀರಿ ಎಂದು ಭಾವಿಸುತ್ತೇನೆ! ” ಎಂದರು. 

ಚಿತ್ರದ ಶೀರ್ಷಿಕೆ ಹಾಗೂ ಪಾತ್ರವರ್ಗದ ಬಗ್ಗೆ ಇನ್ನೂ ಯಾವ ಮಾಹಿತಿ ಬಹುರಂಗಪಡಿಸಲಿಲ್ಲವಾದರೂ ಡಿಸೆಂಬರ್ 2ರಂದು ಈ ಬಗ್ಗೆ ಸರ್ ಪ್ರೈಸ್ಜ್ ಪ್ರಕಟಣೆ ಹೊರಬೀಳಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಈ ಹಿಂದೆ ಸೂಪರ್-ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್ "ನಿನ್ನಿಂದಲೆ" ಹಾಗೂ ಯಶ್ ಅವರ "ಮಾಸ್ಟರ್ ಪೀಸ್" ನಿರ್ಮಿಸಿದ್ದ ಪ್ರೊಡಕ್ಷನ್ ಹೌಸ್, 2018 ರಲ್ಲಿ ದೇಶಾದ್ಯಂತ ಪ್ರಚಾರಕ್ಕೆ ಬಂದಿದೆ. ಈ ಸಂಸ್ಥೆಯ "ಕೆಜಿಎಫ್ ಚಾಪ್ಟರ್ 1"ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂಡೂರ್ ಮೂವರನ್ನು ಒಟ್ಟುಗೂಡಿಸಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ, ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ನ್ನಡ ಚಿತ್ರ ಎಂಬ ದಾಖಲೆಯನ್ನು ಮುರಿಯಿತು.

ಇದಲ್ಲದೆ ಇದೇ ನಿರ್ಮಾಣ ಸಂಸ್ಥೆ ಪುನೀತ್ ಅಭಿನಯದ "ಯುವರತ್ನ" ಹಾಗೂ "ಕೆಜಿಎಫ್ ಚಾಪ್ಟರ್ 2" ಚಿತ್ರವನ್ನೂ ನಿರ್ಮಾಣ ಮಾಡಿದ್ದು ಅದೀಗ ಅಂತಿಮ ಹಂತದಲ್ಲಿದೆ. 

SCROLL FOR NEXT