ನಿಧಿ ಸುಬ್ಬಯ್ಯ 
ಸಿನಿಮಾ ಸುದ್ದಿ

ವಿವಾಹದ ನಂತರ ಮೊಟ್ಟ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ

ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಕನ್ನಡದ ಹಾರರ್​ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ.

ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರಇದೇ ಮೊದಲ ಬಾರಿಗೆ ಕನ್ನಡದ ಹಾರರ್​ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ. 

ಇಬ್ಬರು ನಿರ್ದೇಶಕರು ನಿರ್ದೇಶನ ಮಾಡುತ್ತಿರುವ ಹಾರರ್​ ಸಿನಿಮಾದಲ್ಲಿ ನಿಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಾದ್​ ಹಾಗೂ ಪವನ್​ ಎಂಬುವರು ಈ ಹಾರರ್​ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ತಮ್ಮ ಮೊದಲ ಹಾರರ್​ ಸಿನಿಮಾ ಬಗ್ಗೆ ಮಾತನಾಡಿರುವ ನಿಧಿ, ಇದೇ ಮೊದಲ ಸಲ ಈ ರೀತಿಯ ಚಿತ್ರಕ್ಕೆ ಕೈ ಹಾಕಿದ್ದೇನೆ ಎಂದಿದ್ದಾರೆ.  ನಿಧಿ ಸುಬ್ಬಯ್ಯ ಅವರಿಗೆ ನಿತ್ಯ ಹಾರರ್​ ಸಿನಿಮಾ ನೋಡುವ ಅಭ್ಯಾಸ ಇದೆಯಂತೆ. ಆದರೆ, ಈಗ ಅವರೇ ಇಂತಹ ಸಿನಿಮಾದ ಭಾಗವಾಗಲಿದ್ದಾರೆ. ಈ ಬಗ್ಗೆ ನಟಿಗೆ ಕಾತರ ಹಾಗೂ ಖುಷಿ ಇದೆ. 

ಈಗಾಗಲೇ ಬಾಲಿವುಡ್​ನಲ್ಲೂ ನಟಿಸಿರುವ ನಿಧಿ ಕಡೆಯದಾಗಿ ಶಿವಣ್ಣ ಹಾಗೂ ರಚಿತಾ ರಾಮ್​ ಅಭಿನಯದ ಆಯುಷ್ಮಾನ್​ ಭವ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ನಿಧಿ ಸುಬ್ಬಯ್ಯ ಹಾರರ್​ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. 

ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ತಡವಾಯಿತು, ಅಣ್ಣಾ ಬಾಂಡ್, ಕೃಷ್ಣನ ಮ್ಯಾರೇಜ್ ಸ್ಟೋರಿ, ಮತ್ತು ಅಜಬ್ ಗಜಾಬ್ ಲವ್ ನಿಧಿ ನಟಿಸಿರುವ ಸಿನಿಮಾಗಳಾಗಿವೆ.

ಪಂಚರಂಗಿ ನಂತರ ನನಗೆ ಹಲವು ಅದೇ ರೀತಿಯ ಪಾತ್ರಗಳು ಸಿಕ್ಕವು, ಆದರೆ ಪಾತ್ರಗಳಲ್ಲಿ ಏಕತಾನತೆ ಕಂಡು ಬರುತ್ತದೆ ಎಂಬ ಕಾರಣಕ್ಕಾಗಿ ನಾನು ಆ ಸಿನಿಮಾಗಳಲ್ಲಿ ನಟಿಸಲಿಲ್ಲ,  ನಾನು ಉತ್ತಮ ಸಿನಿಮಾಗಳಿಗಾಗಿ ಕಾಯುತ್ತಿದ್ದೆ, ಅಂತಿಮವಾಗಿ ಹಾರರ್ ಸಿನಿಮಾ ನನಗೆ ಇಷ್ಟವಾಯಿತು, ಜನವರಿ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ನಿಧಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT