ಸಿನಿಮಾ ಸುದ್ದಿ

ಹಿರಿಯ ನಟಿ ಪ್ರಮೀಳಾ ಜೋಷಾಯ್‍ಗೆ ಕೊರೋನಾ ಸೋಂಕು, ಆಸ್ಪತ್ರೆಗೆ ದಾಖಲು

Raghavendra Adiga

ಹಿರಿಯ ನಟಿ ಪ್ರಮೀಳಾ ಜೋಷಾಯ್‍ಗೆ ಕೊರೋನಾ ಸೋಂಕು ತಗುಲಿದ್ದು ಭಾನುವಾರ ತಡರಾತ್ರಿ ಬೆಂಗಳೂರಿನ ಜಯನಗರದಲ್ಲಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಪತಿ ಸುಂದರ್ ರಾಜ್ ಹಾಗೂ ಮಗಳು, ನಟಿ ಮೇಘನಾ ರಾಜ್ ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ.

ಸಧ್ಯ ನಟಿ ಪ್ರಮೀಳಾ ಜೋಷಾಯ್‍ ಆರೋಗ್ಯವಾಗಿದ್ದು ವೈದ್ಯರ ಸಲಹೆಯಂತೆ ಐಸೋಲೇಷನ್ ನಲ್ಲಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪ್ರಮೀಳಾ-ಸುಂದರ್ ರಾಜ್ ದಂಪತಿ ಮುದ್ದಾದ ಮೊಮ್ಮಗುವನ್ನು ಬರಮಾಡಿಕೊಂಡಿದ್ದರು. ಜೂ. ಚಿರುಗೆ ತೊಟ್ಟಿಲ ಶಾಸ್ತ್ರ ನಡೆಸಿದ್ದರು.

ಕಳೆದ ಜೂನ್ 7ರಂದು ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ತವರಲ್ಲೇ ಇದ್ದು ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. 

SCROLL FOR NEXT