ಕಿಟ್ ವಿತರಣೆ 
ಸಿನಿಮಾ ಸುದ್ದಿ

ಚಲನಚಿತ್ರ ಪೋಷಕ ಕಲಾವಿದರು, ಕಾರ್ಮಿಕರಿಗೆ ಇನ್ಫೋಸಿಸ್‌ ಪ್ರತಿಷ್ಠಾನದಿಂದ ನೆರವು

ಕೊರೋನಾ ಸೋಂಕಿನಿಂದ ನಲುಗಿಹೋಗಿರುವ ಚಲನಚಿತ್ರ ಪೋಷಕ ಕಲಾವಿದರು ಹಾಗೂ ಕಾರ್ಮಿಕರಿಗೆ ಇನ್ಫೋಸಿಸ್‌ ಪ್ರತಿಷ್ಠಾನ ಆಹಾರ ಕಿಟ್‌ಗಳ ವಿತರಣೆ ಮಾಡುವ ಮೂಲಕ ಕಲಾವಿದರ ನೆರವಿಗೆ ಧಾವಿಸಿದೆ.

ಬೆಂಗಳೂರು: ಕೊರೋನಾ ಸೋಂಕಿನಿಂದ ನಲುಗಿಹೋಗಿರುವ ಚಲನಚಿತ್ರ ಪೋಷಕ ಕಲಾವಿದರು ಹಾಗೂ ಕಾರ್ಮಿಕರಿಗೆ ಇನ್ಫೋಸಿಸ್‌ ಪ್ರತಿಷ್ಠಾನ ಆಹಾರ ಕಿಟ್‌ಗಳ ವಿತರಣೆ ಮಾಡುವ ಮೂಲಕ ಕಲಾವಿದರ ನೆರವಿಗೆ ಧಾವಿಸಿದೆ.

ಇನ್ಪೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ಕಷ್ಟದಲ್ಲಿರುವವರಿಗೆ ಮನಮಿಡಿಯುವ ರೀತಿ ಹಾಗೂ ಬಡವರ ಬಗ್ಗೆ ಅವರಿಗಿರುವ ಕಾಳಜಿ ಅನುಕರಣೀಯ ಎಂದು ನಟಿ ಪ್ರೇಮಾ ಅವರು ಹೇಳಿದ್ದಾರೆ.

ನಗರದ ಸುಚಿತ್ರಾ ಫಿಲಂ ಸೊಸೈಟಿಯ ಆವರಣದಲ್ಲಿ ಚಲನಚಿತ್ರ ಪೋಷಕ ಕಲಾವಿದರು ಮತ್ತು ಕಾರ್ಮಿಕರುಗಳಿಗೆ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ಆಯೋಜಿಸಲಾಗಿದ್ದ ಜೀವನಾವಶ್ಯಕ ವಸ್ತುಗಳ ಕಿಟ್‌ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಕಷ್ಟಕ್ಕೆ ಮನಮಿಡಿಯುವ ಹಾಗೂ ಅಗತ್ಯವಿರವವರಿಗೆ ವಿಶೇಷ ಕಾಳಜಿ ತೋರಿಸುವ ಸುಧಾಮೂರ್ತಿಯವರ ಸಂಸ್ಥೆಯಿಂದ ಕೊಡಲಾಗುತ್ತಿರುವ ಜೀವನಾವ್ಯವಕ ವಸ್ತುಗಳ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಪ್ರೇಮಾ ಹೇಳಿದರು.

ಸಿನಿಮಾ ಕಾರ್ಮಿಕರು ಚಿತ್ರೀಕರಣ ನಿಲುಗಡೆಯಾದ ಪರಿಣಾಮ ಬಹಳಷ್ಟು ತೊಂದರೆಗೀಡಾಗಿದ್ದರು. ಇವರಿಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ ವಿತರಿಸಲಾಗುತ್ತಿದ್ದು, ಅವರ ಕುಟುಂಬ ಪೋಷಣೆಗೆ ಇದು ಅಗತ್ಯವಾಗಿದೆ ಎಂದರು.

ಕರ್ನಾಟಕ ಚಲನ ಚಿತ್ರ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್‌ ಮಾತನಾಡಿ, ''ನನಗೆ ಅಮ್ಮ ಸುಧಾಮೂರ್ತಿ ಅವರ ಸಂಪರ್ಕ ಇರಲಿಲ್ಲ. ಎರಡನೇ ಬಾರಿ ನಾನು ಮಾಡಿದ ಎಸ್‌ ಎಂ ಎಸ್‌ ನೋಡಿ ಸುಧಾಮೂರ್ತಿ ಅವರೇ ಫೋನ್‌ ಮಾಡಿದ್ದರು. ಎಷ್ಟು ಜನರು ಸಂಕಷ್ಟದಲ್ಲಿದ್ದಾರೆ ಹಾಗೂ ಎಷ್ಟು ಕಿಟ್‌ ಗಳ ಅವಶ್ಯಕತೆ ಇದೆ ಎನ್ನುವುದನ್ನ ಸ್ವತಃ ಅವರೇ ವಿಚಾರಿಸಿಕೊಂಡರು. 

ಲಾಕ್‌ಡೌನ್‌ ಸಂಧರ್ಬದಲ್ಲಿ 2 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ, ಕಾರ್ಮಿಕರಿಗೆ ಪ್ರತಿಷ್ಠಾನದ ವತಿಯಿಂದ ಕಿಟ್‌ ವಿತರಿಸಲಾಗಿತ್ತು. ಆ ವೇಳೆ ಅರ್ಹ ಕಲಾವಿದರಿಗೆ ಸಿಕ್ಕಿಲ್ಲ ಎನ್ನುವ ಮನವಿಯ ಹಿನ್ನಲೆಯಲ್ಲಿ ಇಂದು ಮತ್ತೆ ಒಂದು ಸಾವಿರ ಮಂದಿಗೆ ನೆರವು ನೀಡಲಾಗಿದೆ'' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT