ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಒಮರ್ ಲುಲು ನಿರ್ದೇಶನದ 'ಪವರ್ ಸ್ಟಾರ್' ಚಿತ್ರದಲ್ಲಿ ಶ್ರೇಯಸ್ ಮಂಜು!

ನಿರ್ದೇಶಕ ಒಮರ್ ಲುಲು ಇದೀಗ 'ಪವರ್ ಸ್ಟಾರ್' ಅನ್ನೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು,ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯ ಸಾಗಿದೆ. ನಟ ಶ್ರೇಯಸ್ ಮಂಜು ಈ ಸಿನಿಮಾದಲ್ಲಿ ಅಭಿನಯಿಸುವ ಮಾಹಿತಿಯನ್ನು ಚಿತ್ರತಂಡ ತಿಳಿಸಿದೆ.

ಬೆಂಗಳೂರು: ನಿರ್ದೇಶಕ ಒಮರ್ ಲುಲು ಇದೀಗ 'ಪವರ್ ಸ್ಟಾರ್' ಅನ್ನೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು,ಈ 
ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯ ಸಾಗಿದೆ. ನಟ ಶ್ರೇಯಸ್ ಮಂಜು ಈ ಸಿನಿಮಾದಲ್ಲಿ ಅಭಿನಯಿಸುವ ಮಾಹಿತಿಯನ್ನು ಚಿತ್ರತಂಡ ತಿಳಿಸಿದೆ.

ಶ್ರೇಯಸ್ ಮಂಜು ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರನಾಗಿದ್ದು, ಪಡ್ಡೆ ಹುಲಿ ಅವರು ಅಭಿನಯಿಸಿದ ಮೊದಲ ಚಿತ್ರ. ಪವರ್ ಸ್ಟಾರ್ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಇನ್ನೂ ಹಲವು ಮಂದಿ ಕನ್ನಡ ಕಲಾವಿದರನ್ನು ಸೇರಿಸಿಕೊಳ್ಳುವ ಬಗ್ಗೆ ಚಿತ್ರತಂಡ ಯೋಚಿಸಿದೆ.

ಮಲಯಾಳಂ ನಿರ್ದೇಶಕ ವಿ. ಕೆ ಪ್ರಕಾಶ್ ಮತ್ತು ನಟಿ ಪ್ರಿಯಾ ವಾರಿಯರ್ ಜೊತೆಗೆ ಈಗಾಗಲೇ ವಿಷ್ಣುಪ್ರಿಯ ಎಂಬ ಚಿತ್ರವನ್ನು ಶ್ರೇಯಸ್ ಮಂಜು ಮಾಡಿದ್ದು, ಅದರ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಬಾಬು ಆಂಟನಿ ಜೊತೆಗೆ ಕೆಲವು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು  ಪವರ್ ಸ್ಟಾರ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಹಿರಿಯ ಕಥೆಗಾರ ಡೆನ್ನೀಸ್ ಜೋಸೆಪ್ ಅವರು ಚಿತ್ರಕಥೆ ಬರೆದಿದ್ದು, ಒಮರ್ ಲುಲು ಅವರ ಹಿಂದಿನ ಚಿತ್ರಗಳಿಗಿಂತ ಇದು ಭಿನ್ನವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದ್ದು, ವರ್ಚುವಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಾತೀಸ್ ಅನೆದಾತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT