ನಟ ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಬ್ಯಾಕ್‍ ಟು ಬ್ಯಾಕ್ ಚಿತ್ರಗಳು: ಹೊಸ ವರ್ಷದಲ್ಲಿ ಶ್ರೇಯಸ್ ಮಂಜು ಫುಲ್ ಬ್ಯುಸಿ

ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್​ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ. 

ಬೆಂಗಳೂರು: ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್​ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ. 

ಈಗಾಗಲೇ ‘ವಿಷ್ಣುಪ್ರಿಯಾ’ ಸಿನಿಮಾ ಮುಗಿಸಿದ್ದು 2021ಕ್ಕೆ ಚಿತ್ರ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಹೀಗಿರುವಾಗಲೇ ಬ್ಯಾಕ್​ ಟು ಬ್ಯಾಕ್​ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರೇಯಸ್, ಮುಂದಿನ ವರ್ಷ ಪೂರ್ತಿ ಬ್ಯುಸಿಯೋ ಬ್ಯುಸಿ!

ಹೌದು, ಜನವರಿ ಅಂತ್ಯಕ್ಕೆ ಶ್ರೇಯಸ್​ ಮಾಸ್​ ಎಂಟರ್​ಟೈನರ್​ ಕಥಾಹಂದರವುಳ್ಳ ಸಿನಿಮಾವೊಂದು ಸೆಟ್ಟೇರಲಿದೆ. ಸ್ನೇಹ, ಪ್ರೀತಿಯ ಎಳೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶ್ರೇಯಸ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಡ್ಡೆಹುಲಿ ಸಿನಿಮಾ ನೋಡಿ ಇಷ್ಟಪಟ್ಟು ಈ ಚಿತ್ರ ಮಾಡಲು ಮುಂದೆ ಬಂದಿದ್ದಾರೆ.  ತಮಿಳು ಮತ್ತು ಮಲಯಾಳಿ ನಿರ್ಮಾಪಕ ರವಿಕುಮಾರ್ ಈ ಚಿತ್ರದ ನಿಮಾರ್ಪಕರು. ಅದರ ನಾಯಕಿ ಮತ್ತು ತಾಂತ್ರಿಕ ವರ್ಗದ ಆಯ್ಕೆ ಆಗಬೇಕಿದೆ.

ಇನ್ನು ಇದರ ಜತೆಗೆ ತಮಿಳಿನ ಕಥೆಗಾರರೊಬ್ಬರು ಹೇಳಿದ ಕಥೆಯನ್ನೂ ಶ್ರೇಯಸ್​ ಕೇಳಿದ್ದು, ಆ ಕಥೆ ಕೇಳಿಯೇ ಫಿದಾ ಆಗಿದ್ದಾರೆ. ಎಲ್ಲ ಭಾಷೆಗಳಿಗೆ ಸಲ್ಲುವ ಕಥೆ ಇದಾಗಿರುವುದರಿಂದ ಕೆ. ಮಂಜು ಅವರೇ ತಮ್ಮ ಬ್ಯಾನರ್​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು,  ಮಲಯಾಳಂನಲ್ಲಿ ಈ ಸಿನಿಮಾ ಮಾಡುವ ಯೋಜನೆ ನಡೆಯುತ್ತಿದೆ. ಹುಡುಗ ಹುಡುಗಿ ಮದುವೆ ಆಗುವುದಕ್ಕೂ ಮುಂಚೆ ಹೇಗಿರಬೇಕು, ಮದುವೆ ಆದ ಬಳಿಕ ಹೇಗಿರಬೇಕು ಎಂಬ ಎಳೆ ಈ ಚಿತ್ರದ್ದು. 10 ರಿಂದ12 ಕೋಟಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿರುವುದರಿಂದ ಮಾರ್ಚ್​ ಅಂತ್ಯದ ವೇಳೆಗೆ ಈ  ಸಿನಿಮಾ ಶುರುವಾಗಲಿದೆ. 

ಈ ಎರಡು ಸಿನಿಮಾ ಒಂದು ಹಂತಕ್ಕೆ ಬರುತ್ತಿದ್ದಂತೆ ಮಲಯಾಳಂ ನಿರ್ದೇಶಕರ ಚಿತ್ರದಲ್ಲಿಯೂ ಶ್ರೇಯಸ್ ನಟಿಸಲಿದ್ದಾರೆ. ಈ ಸಿನಿಮಾ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದ್ದು, ಅಂಡರ್‌ವರ್ಲ್ಡ್‌ ಕಥಾಹಂದರ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ. ಮಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗುತ್ತದೆ. ಈ ಮೂರು  ಸಿನಿಮಾಗಳ ಮಾಹಿತಿ ಒಂದೆಡೆಯಾದರೆ, ಈಗಾಗಲೇ ವಿಷ್ಣುಪ್ರಿಯಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ಜತೆಗೆ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆ. ಮಂಜು ‘ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ, ಚಿತ್ರಮಂದಿರಗಳು ಮೊದಲಿನಂತೆ ಕಾರ್ಯ  ನಿರ್ವಹಿಸುತ್ತಿಲ್ಲ. ಈಗಾಗಲೇ ನಾನೇ ಹಲವು ಬಾರಿ ಸಿನಿಮಾ ವೀಕ್ಷಣೆ ಮಾಡಿದ್ದೇನೆ. ತುಂಬ ಚೆನ್ನಾಗಿ ಮೂಡಿ ಬಂದಿದೆ. ಹಾಗಾಗಿ ಮುಂದಿನ ವರ್ಷಕ್ಕೆ ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಇತ್ತ ಇನ್ನೂ ಮೂರು ಸಿನಿಮಾಗಳು ಶ್ರೇಯಸ್ ಬಳಿ ಇದ್ದು, ಒಂದೊಂದಾಗಿಯೇ ಘೋಷಣೆ  ಆಗಲಿವೆ’ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್