ಸಿನಿಮಾ ಸುದ್ದಿ

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ: ಕನ್ನಡಿಗರನ್ನ 45ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ?- ನಟ ಜಗ್ಗಶ್ ಪ್ರಶ್ನೆ

Manjula VN

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಮಾಡಿರುವ ಕುರಿತಾಗಿ ಕಿಡಿಗೇಡಿಗಳ ಮನಸ್ಥಿತಿ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ಕನ್ನಡಿಗರನ್ನ 45ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ?...ಆತನ ಆತ್ಮ ಈ ರಾಕ್ಷಸಿ ಕೃತ್ಯ ಗಮನಿಸದೆ ಇರಬಹುದು!ಆದರೆ ನೆನಪಿಡಿ ರಕ್ಕಸರೆ ನೀವು ಅಪಮಾನಿಸಿದ್ದು ನಿಮ್ಮ ರಂಜಿಸಿ ನಿರ್ಗಮಿಸಿದ ನಟನ ಅಲ್ಲಾ! ಬದಲಾಗಿ ನಿಮ್ಮ ಕನ್ನಡನೆಲದ ಮೆಚ್ಚಿನ ಮಗನನ್ನ! ನಿಮ್ಮ ತಂದೆತಾಯಿವಂಶ ಮೆಚ್ಚಿದ ಆತ್ಮ ಅದು! ನಿಮ್ಮಕೃತ್ಯ ಯಾವದೇವರು ಕ್ಷಮಿಸನು! ನತದೃಷ್ಟರೆ.! ಎಂದು ಹೇಳಿದ್ದಾರೆ. 

ಯಾವುದೋ ಭಾಷೆನಟನ  ವೈಭವಿಕರಿಸಿ ವಿಶಾಲಹೃದಯ ಎನ್ನುವವರೆ!ನಿಮ್ಮರಂಜಿಸಿ ಖುಷಿಪಡಿಸಿ ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತಮೇಲು ಕೊಂದು ಅಪಮಾನಿಸಿದ ಪಾಪಿಗಳಿಗೆ ತಕ್ಕ ಪಾಠಕಲಿಸಿ!ಕಲಾಬಂಧು ಶಿಲೆಯನ್ನ ಮರುಸ್ಥಾಪಿಸಿ ಗೌರವಿಸಿ ಕನ್ನಡತನದ ವಿಶಾಲಹೃದಯ ಪ್ರದರ್ಶಿಸಿ! ರಂಜಿಸಿ ಕಣ್ಮರೆಯಾದ ಕಲಾವಿದರಿಗೆ ಹೃದಯದಲ್ಲಿ ಜಾಗನೀಡಿ!ಅದು ಕನ್ನಡದ ಧರ್ಮ!

ಇಷ್ಟೇನಾ ಕನ್ನಡಕ್ಕೆ ದುಡಿದು ಕಣ್ಮರೆಯಾದ ಕಲಾವಿದರ ಹಣೆಬರಹ!ತುಂಬ ದುಃಖವಾಯಿತು! ಎಲ್ಲಿ ಹೋಯಿತು ಚಪ್ಪಾಳೆ ಸದ್ದು? ಎಲ್ಲಿ ಹೋಯಿತು ಬದುಕಿದ್ದಾಗ ನೋಡಲು ನಿಂತ ಅಭಿಮಾನ? ಎಲ್ಲಿ ಹೋಯಿತು ಇವನಮ್ಮವ ಇವನಮ್ಮವ ಎಂದ ಮನಗಳು? ಇದು ಕನ್ನಡಕ್ಕೆ ಮಾಡಿದ ಅವಮಾನ! ಒಳ್ಳೆಯ ಲಕ್ಷಣ ಅಲ್ಲ! ಬದಲಾಗಿ! ಎಂದು ದುಃಖದಿಂದ ಹೇಳಿದ್ದಾರೆ. 

SCROLL FOR NEXT