ಸಿನಿಮಾ ಸುದ್ದಿ

ಭುವನ್ ಪೊನ್ನಣ್ಣ 'ಪ್ರಣಯ ರಾಜ' ಚಿತ್ರದಲ್ಲಿ 21 ನಾಯಕಿಯರು!

"ರಾಂಧವ" ನಾಯಕ ನಟ ಮತ್ತು ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಈಗ ತಮ್ಮ ಮುಂದಿನ ರೊಮ್ಯಾಂಟಿಕ್ ಡ್ರಾಮಾಗಾಗಿ ತಯಾರಾಗಿದ್ದಾರೆ. ಈ ಚಿತ್ರಕ್ಕೆ "ಪ್ರಣಯ ರಾಜ" ಎಂದು ಶೀರ್ಷಿಕೆ ಇಟ್ಟಿರುವುದು ಗಮನಾರ್ಹ.

"ರಾಂಧವ" ನಾಯಕ ನಟ ಮತ್ತು ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಈಗ ತಮ್ಮ ಮುಂದಿನ ರೊಮ್ಯಾಂಟಿಕ್ ಡ್ರಾಮಾಗಾಗಿ ತಯಾರಾಗಿದ್ದಾರೆ. ಈ ಚಿತ್ರಕ್ಕೆ "ಪ್ರಣಯ ರಾಜ" ಎಂದು ಶೀರ್ಷಿಕೆ ಇಟ್ಟಿರುವುದು ಗಮನಾರ್ಹ. ಇದು ಸ್ಯಾಂಡಲ್ ವುಡ್ ಹಿರಿಯ ನಟ ಶ್ರೀನಾಥ್ ಅವರ ನಿಕ್ ನೇಮ್ ಆಗಿದ್ದು ಅವರು 1970 ರ ದಶಕದಲ್ಲಿ ಪ್ರೇಮ, ಪ್ರಣಯದ ಕಥಾನಕಗಳಲ್ಲಿ ಅದ್ಭುತ ಯಶಸ್ಸನ್ನು ಕಂಡಿದ್ದರು. 

"ಪ್ರಣಯ ರಾಜ" ಚಿತ್ರವನ್ನು  ಟಿ ಸುದರ್ಶನ್ ಚಕ್ರ ನಿರ್ದೇಶಿಸಲಿದ್ದು, ನಟನ ಜನ್ಮದಿನವಾದ ಡಿಸೆಂಬರ್ 30 ರಂದು ಈ ಯೋಜನೆಯನ್ನು ಲಾಂಚ್ ಮಾಡಲು ಯೋಜಿಸಲಾಗಿದೆ.

ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಅನಾವರಣಗೊಳಿಸಲು ಶ್ರೀನಾಥ್ ಅವರೊಂದಿಗೆ ಚರ್ಚೆಗಳು ನಡೆಯುತ್ತಿವೆ. ಈ ಚಿತ್ರದಲ್ಲಿ ಮೂರು ಮಹಿಳಾ ಪಾತ್ರಗಳು ಸೇರಿದಂತೆ 21 ನಾಯಕಿಯರು ನಟಿಸುವ ನಿರೀಕ್ಷೆಯಿದೆ. ಅವರಲ್ಲಿ 18 ಮಂದಿ ಸೈನ್ಅಪ್ ಮಾಡಿದ್ದಾರೆ. ಅಲ್ಲದೆ ಇವರಲ್ಲಿ ರಾಜ್ಯದವರು ಮಾತ್ರವಲ್ಲದೆ ಮುಂಬೈ, ಬಂಗಾಳ ಮತ್ತು ಇತರ ಚಲನಚಿತ್ರೋದ್ಯಮದ ನಾಯಕಿಯರೂ ಇದ್ದಾರೆ.

ಕೊಲ್ಲೂರು ಮೂಕಂಬಿಕಾ ಹೌಸ್ ಸಹಯೋಗದೊಂದಿಗೆ ಲಿಕ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿಚಿತ್ರ ನಿರ್ಮಿಸಲಾಗುವುದು. ಇದಕ್ಕೆ ವಿಕಾಸ್ ರಾಜ್ ವಸಿಷ್ಠ ಸಂಗೀತ ಮತ್ತು ರಾಜಾ ಶಿವಶಂಕರ್ ಅವರ ಛಾಯಾಗ್ರಹಣ ಇರಲಿದೆ.  ವಿಕ್ರಮ್ ಮೊರ್ ಸಾಹಸಗ ನಿರ್ದೇಶನ ಮಾಡಿದ್ದರೆ ಓಂ ಪ್ರಕಾಶ್ ರಾವ್ ಅವರಿಗೆ ಸಹಾಕರಾಗಿದ್ದ ಸುದರ್ಶನ್ ಚಕ್ರ ಅವರ ಚಿತ್ರದ ಶೂಟಿಂಗ್ ಜನವರಿಯಲ್ಲಿ ಪ್ರಾರಂಭವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT