ವಿಜಯ್ 
ಸಿನಿಮಾ ಸುದ್ದಿ

ತಮಿಳು ನಟ ವಿಜಯ್ ಗೆ ಐಟಿ ಶಾಕ್; ಫೈನಾನ್ಶಿಯರ್ ಬಳಿ ಬರೋಬ್ಬರಿ 65 ಕೋಟಿ ನಗದು ವಶ!

ತಮಿಳು ನಟ ವಿಜಯ್ ಅವರ ಫೈನಾನ್ಶಿಯರ್ ಮನೆ, ಕಚೇರಿ ಸೇರಿ 38 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ಬರೋಬ್ಬರಿ 65 ಕೋಟಿ ರೂ. ನಗದು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. 

ಚೆನ್ನೈ: ತಮಿಳು ನಟ ವಿಜಯ್ ಅವರ ಫೈನಾನ್ಶಿಯರ್ ಮನೆ, ಕಚೇರಿ ಸೇರಿ 38 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ಬರೋಬ್ಬರಿ 65 ಕೋಟಿ ರೂ. ನಗದು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. 

ಕಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಫೈನಾನ್ಶಿಯರ್ ಎನಿಸಿಕೊಂಡಿರುವ ಅನ್ಬು ಚೆರಿಯಾಸ್ ಕಛೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಬರೋಬ್ಬರಿ 65 ಕೋಟಿ ರುಪಾಯಿ ಪತ್ತೆಯಾಗಿದೆ. ಇದಕ್ಕೆ ಸರಿಯಾದ ಲೆಕ್ಕ ಸಿಕ್ಕಿಲ್ಲ. ಈ ಹಣಕ್ಕೆ ಸಂಬಂಧಿಸಿದಂತೆ ತಮಿಳು ನಟ ವಿಜಯ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.

ಎಜಿಎಸ್ ಸಿನಿಮಾಸ್  ಸಂಸ್ಥೆ ಕಚೇರಿ ಆಸ್ತಿಗಳ ಜತೆಗೆ ಸಿನಿಮಾ ಫೈನಾನ್ಷಿಯರ್ ಅನ್ಬು ಚೆಲಿಯನ್ ಅವರ ಮಧುರೈ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಜಯ್ ನಾಯಕರಾಗಿ ನಟಿಸಿದ್ದ ಬಿಜಿಲ್ ಸಿನಿಮಾವನ್ನು ಕಳೆದ ವರ್ಷ ಎಜಿಎಸ್ ಸಿನೆಮಾಸ್ ನಿರ್ಮಿಸಿತ್ತು.

ಸದ್ಯ ವಿಜಯ್ ಮಾಸ್ಟರ್ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಜೇವಿಯರ್ ಬ್ರಿಟ್ಟೊ ನಿರ್ಮಿಸುತ್ತಿರುವ ದೊಡ್ಡ ಬಜೆಟ್ ಚಿತ್ರ ಇದಾಗಿದೆ. ಸದ್ಯಕ್ಕೆ ತಮಿಳಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ವಿಜಯ್ ಎಂಬಾ ಮಾತು ಕೂಡ ಇದೆ. 

ಇನ್ನು ಅನ್ಬು ಚೆಲಿಯಾನ್ ಮತ್ತು ನಟ ವಿಜಯ್ ನಡುವೆ ಹಣದ ವಹಿವಾಟು ನಡೆದಿದೆ. ಅದಕ್ಕೆ ಸರಿಯಾದ ಲೆಕ್ಕ ಸಿಕ್ಕಿಲ್ಲ. ಹೀಗಾಗಿ ನಟ ವಿಜಯ್ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್