ಸಿನಿಮಾ ಸುದ್ದಿ

ವಾರಸ್ದಾರ ಧಾರಾವಾಹಿ ವಿವಾದ: ಕಿಚ್ಚ ಸುದೀಪ್ ವಿರುದ್ಧ ಪ್ರಕರಣ ವಜಾ

Raghavendra Adiga

ಚಿಕ್ಕಮಗಳುರು: ನಟ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ಬಿಗ್ ರಿಲೀಫ್ ನೀಡಿದೆ. ನಟ, ನಿರ್ಮಾಪಕ ಸುದೀಪ್ ಅವರ ವಾರಸ್ದಾರ ಧಾರಾವಾಹಿಯ ಚಿತ್ರೀಕರಣ ವಿವಾದದ ಕುರಿತು ದಾಖಲಾಗಿದ್ದಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.

ಚಿತ್ರೀಕರಣಕ್ಕಾಗಿ ಪಡೆದ ಮನೆಯ ಮಾಲೀಕರಿಗೆ ಬಾಡಿಗೆ ಹಣ ಪಾವತಿಸದೆ ವಂಚಿಸಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಇಂದು ಹೈಕೋರ್ಟ್ ಈ ಪ್ರಕರಣ ವಜಾಗೊಳಿಸಿ ಆದೇಶಿಸ್ದ್ದು ಸುದೀಪ್ ನಿರಾಳರಾಗಿದ್ದಾರೆ.

ವಾರಸ್ದಾರ ಧಾರಾವಾಹಿ ಚಿತ್ರೀಕರಣದ ಸಮಯ ಕಾಫಿ ತೋಟಕ್ಕೆ ಹಾನಿ ಮಾಡಿದ್ದಲ್ಲದೆ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾಗಿ ಚಿಕ್ಕಮಗಳೂರಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪ್ರಕರಣ ದಾಖಲಿಸಿದ್ದರು. ಸುಮಾರು ಒಂದು ವರ್ಷದಿಂದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ 'ಕಿಚ್ಚ ಕ್ರಿಯೇಷನ್ಸ್​'ನಿಂದ 'ವಾರಸ್ದಾರ' ಧಾರಾವಾಹಿ  ನಿರ್ಮಾಣವಾಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಗಾಗಿ ಹಳ್ಳಿ ಮನೆಯ ಶೂಟಿಂಗ್ ಅನ್ನು  ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿದೆ.ಅದಕ್ಕೆ ದೀಪಕ್ ಮಯೂರ್ ಅವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಧಾರಾವಾಹಿ ಶೂತಿಂಗ್ ವೇಳೆ ತಮ್ಮ ಕಾಫಿ ತೋಟಕ್ಕೆ ಹಾನಿಉಆಗಿದೆ,  ತೋಟದಲ್ಲಿದ್ದ ಮರ, ಗಿಡಗಳನ್ನು ಕಡಿಯಲಾಗಿ ಅರವತ್ತರಿಂದ ಎಪ್ಪತ್ತು ಲಕ್ಷ ರು. ನಷ್ಟವಾಗಿದೆ ಅಲ್ಲದೆ ಮನೆಗೆ ಬಾಡಿಗೆ ನೀಡುವುದಾಗಿ ಹೇಳಿದ್ದ ಸುದೀಪ್ ಬಾಡಿಗೆ ಹಣದಲ್ಲಿ ಸಹ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆ ಮಾಲೀಕರು , 2019ರ ಜನವರಿಯಲ್ಲಿ ನಟನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ವಿಚಾರಣೆ ಮುಗಿದಿದ್ದು ಸುದೀಪ್ ಹಾಗೂ ಅವರ ನಿರ್ಮಾಣ ಸಂಸ್ಥೆಯ ವಿರುದ್ಧ ಪ್ರಕರಣ ವಜಾ ಆಗಿದೆ.ನಟನ ಪರ ವಕೀಲರಾದ ಗೋಪಿನಾಥ್ಮಾತನಾಡಿ ಸುದೀಪ್ ಅವರ ಹೆಸರಿಗೆ ಮಸಿ ಬಳಿಯಲು ಮನೆ ಮಾಲೀಕರು ಈ ಬಗೆಯ ನಿರಾಧಾರ ಪ್ರಕರಣ ದಾಖಲಿಸಿದ್ದರು. ಅವರಿಗೆ ಬೇರೆ ಬೇರೆ ಮೂಲಗಳಲ್ಲಿ ಆದ ನಷ್ಟವನ್ನು ಸುದೀಪ್ ಮೇಲೆ ಹೊರಿಸಿ ಹಣ್ ಅಕೇಳಲು ಮುಂಡಾಗಿದ್ದರು. ಆದರೆ ಕೋರ್ಟ್ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ಸುದೀಪ್ ಅವರ ವಿರುದ್ಧ ಕೇಸ್ ವಜಾ ಮಾಡಿದೆ ಎಂದರು.

ಇನ್ನು ವಾರಸ್ದಾರ ಧಾರಾವಾಹಿಯನ್ನು ಗಡ್ಡ ವಿಜಿ ನಿರ್ದೇಶನ ಮಾಡಿದ್ದರೆ ಯಜ್ಞ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

SCROLL FOR NEXT