ಸಿನಿಮಾ ಸುದ್ದಿ

ಇಂಡಿಯನ್ ೨’ ಚಿತ್ರೀಕರಣ ವೇಳೆ ದುರಂತ; ಮೃತಪಟ್ಟ ಮೂವರು ತಂತ್ರಜ್ಞರಿಗೆ ೩ ಕೋಟಿ ನೆರವು ಪ್ರಕಟಿಸಿದ ಕಮಲ್ ಹಾಸನ್

Nagaraja AB

ಚೆನ್ನೈ: ‘ಇಂಡಿಯನ್  ೨’  ಸಿನಿಮಾ   ಚಿತ್ರೀಕರಣದ  ವೇಳೆ   ಬುಧವಾರ   ರಾತ್ರಿ    ಭಾರಿ  ದುರಂತ  ಸಂಭವಿಸಿದೆ.   ಚಿತ್ರದ   ಚಿತ್ರೀಕರಣಕ್ಕೆ  ಬಳಸುತ್ತಿದ್ದ   ಭಾರಿ  ಗಾತ್ರದ   ಕ್ರೇನ್  ಕುಸಿದು ಬಿದ್ದು  ಮೂವರು ತಂತ್ರಜ್ಞರು   ಸ್ಥಳದಲ್ಲೇ  ಮೃತ ಪಟ್ಟು, ೧೨   ಮಂದಿ  ಕಾರ್ಮಿಕರು  ಗಾಯಗೊಂಡಿದ್ದರು

ಈ  ದುರಂತದಲ್ಲಿ  ನಟ  ಕಮಲ್ ಹಾಸನ್  ಸ್ವಲ್ಪದರಲ್ಲೇ  ಪಾರಾಗಿದ್ದರು.ದುರಂತ  ನಡೆದ ಕೂಡಲೇ  ಸ್ಪಂದಿಸಿರುವ   ಕಮಲಹಾಸನ್  ಗಾಯಗೊಂಡವರನ್ನು  ಕೂಡಲೇ  ಹತ್ತಿರದ ಆಸ್ಪತ್ರೆಗೆ  ದಾಖಲಿಸಿದ್ದಾರೆ. ಮೃತ ತಂತ್ರಜ್ಞರ  ಕುಟುಂಬಗಳಿಗೆ ತಲಾ ಒಂದೊಂದು ಕೋಟಿಯಂತೆ  ಮೂರು ಕೋಟಿ ರೂಪಾಯಿ   ನೆರವು   ನೀಡುವುದಾಗಿ   ಹೇಳಿದ್ದಾರೆ.  

ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿರುವ  ಗಾಯಾಳುಗಳ  ಯೋಗ ಕ್ಷೇಮ  ವಿಚಾರಿಸಿದ  ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ  ಕಮಲ ಹಾಸನ್  ಮೃತಪಟ್ಟವರ ಪ್ರಾಣವನ್ನು  ಮತ್ತೆ  ತರಲು  ಸಾಧ್ಯವಿಲ್ಲ. ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇನೆ. ಈ ದುರ್ಘಟನೆ  ಪರಿಣಾಮ  ಚಿತ್ರರಂಗದಲ್ಲಿ  ದುಡಿಯುವ  ಜೀವಗಳ  ಭದ್ರತೆ  ಪ್ರಶ್ನಾರ್ಹವಾಗಿದೆ. ಭವಿಷ್ಯದಲ್ಲಿ ಇಂತಹ ಅಪಘಾತಗಳು ಸಂಭವಿಸದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ನಾವು ನೂರಾರು ಕೋಟಿ ರೂ  ವೆಚ್ಚದ   ಸಿನಿಮಾ ನಿರ್ಮಿಸುತ್ತಿದ್ದೇವೆ  ಎಂದು ಹೇಳಿಕೊಳ್ಳಲು  ಹೆಮ್ಮೆಪಡುತ್ತೇವೆ. ಆದರೆ ಚಿತ್ರ ನಿರ್ಮಾಣದ  ಕೆಲಸ  ಮಾಡುವ  ತಂತ್ರಜ್ಞರು, ಕಾರ್ಮಿಕರಿಗೆ ಸೂಕ್ತ  ಭದ್ರತೆ ಒದಗಿಸಲು ಸಾಧ್ಯವಾಗದಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಹೇಳಿದರು.

ಚಿತ್ರ ನಿರ್ಮಾಣದಲ್ಲಿ ದುಡಿಯುವ  ಹೆಚ್ಚು ಮಂದಿ  ಬಡವರಾಗಿದ್ದರು. ಇವರು ಆಸ್ಪತ್ರೆಯ  ತಮ್ಮ  ಚಿಕಿತ್ಸಾ  ವೆಚ್ಚವನ್ನೂ   ಸಹ ಭರಿಸಲಾರರು. ನಾನೂ  ಮೂರು ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದೆ ಆದ್ದರಿಂದ ಚೇತರಿಸಿಕೊಳ್ಳುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ  ಎಂದು ಅವರು ಹೇಳಿದ್ದಾರೆ.

SCROLL FOR NEXT