ಅನು ಪ್ರಭಾಕರ್ 
ಸಿನಿಮಾ ಸುದ್ದಿ

ವಯ್ಯಸು ಆದ್ರೆ ಕೆಲಸ ನಿಲ್ಲಿಸಬೇಕಾ? ಅಭಿಮಾನಿ ವಿರುದ್ಧ ಅನುಪ್ರಭಾಕರ್ ಗರಂ

ಖ್ಯಾತ ನಟಿ ಅನು ಪ್ರಭಾಕರ್ ಅಭಿಮಾನಿ ವಿರುದ್ಧ ಗರಂ ಆಗಿದ್ದಾರೆ.. ಅಷ್ಟೇ ಅಲ್ಲ ಆ ಅಭಿಮಾನಿಗೆ ಇನ್ನು ಸಾಕಪ್ಪ ಎನಿಸುವಂತೆ ಬೆವರಿಳಿಸ್ದ್ದಾರೆ. ಅರೆ ಇದ್ದಕ್ಕಿದ್ದಂತೆ ನಟಿ ಹೀಗೇಕೆ ಮಾಡಿದ್ರು ಅಂತ ಯೋಚಿಸಿದಿರಾ? ಅದಕ್ಕೆ ಉತ್ತರ ಇಲ್ಲಿದೆ...

ಖ್ಯಾತ ನಟಿ ಅನು ಪ್ರಭಾಕರ್ ಅಭಿಮಾನಿ ವಿರುದ್ಧ ಗರಂ ಆಗಿದ್ದಾರೆ.. ಅಷ್ಟೇ ಅಲ್ಲ ಆ ಅಭಿಮಾನಿಗೆ ಇನ್ನು ಸಾಕಪ್ಪ ಎನಿಸುವಂತೆ ಬೆವರಿಳಿಸ್ದ್ದಾರೆ. ಅರೆ ಇದ್ದಕ್ಕಿದ್ದಂತೆ ನಟಿ ಹೀಗೇಕೆ ಮಾಡಿದ್ರು ಅಂತ ಯೋಚಿಸಿದಿರಾ? ಅದಕ್ಕೆ ಉತ್ತರ ಇಲ್ಲಿದೆ...

ಫೆಬ್ರವರಿ 26ಕ್ಕೆ ನಟಿ ಅನು ಪ್ರಭಾಕರ್ ಮತ್ತೆ ಕ್ಯಾಮೆರಾ ಮುಂದೆ” ಎಂದು ಟ್ವೀಟ್ ಹಾಕುವ ಮೂಲಕತಾವು ಮತ್ತೆ ಬಣ್ಣ ಹಚ್ಚುವ ಸೂಚನೆ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಮಧುಸೂಧನ್ ಎಂಬ ಅಭಿಮಾನಿಯೊಬ್ಬ "ಈಗ ಸ್ವಲ್ಪ ವಯಸ್ಸಾಗಿದೆ ಬಿಡಿ ಸಾಕು..." ಎಂದು ಉತ್ತರಿಸಿದ್ದಾರೆ. ಈ ಉತ್ತರ ಕಂಡ ನಟಿ ಗರಂ ಆಗಿದ್ದಾರೆ. ಮತ್ತು ಆ ಅಭಿಮಾನಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

"ವಯ್ಯಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು ...?? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ ...!!! ಕಲಾವಿದರಾಗಿ ನಮ್ಮನ್ನಾ ಇಷ್ಟಾ ಪಡೋರು ನೋಡತಾರೆ!" ಎಂದು ಖಾರವಾಗಿ ಬರೆದು ಟ್ವೀಟ್ ಮಾಡಿದ್ದಾರೆ.

ನಟಿ ಅನು ಪ್ರಭಾಕರ್ ಅವರ ಈ ಟ್ವೀಟ್ ಗೆ ಹಲವು ಚಿತ್ರಪ್ರೇಮಿಗಳು ಬೆಂಬಲ ಸೂಚಿಸಿದ್ದಾರೆ. "ಕಲೆಗೆ ಮತ್ತು ಕಲಾವಿದನಿಗೆ ಸಾವಿಲ್ಲ. ನೀವು ಚಿತ್ರರಂಗಕ್ಕೆ ಬರಬೇಕು ಮೇಡಂ. ಚಿಕ್ಕವನಿದ್ದಾಗ ನಿಮ್ಮ ಶ್ರೀರಸ್ತು ಶುಭಮಸ್ತು ತುಂಬಾ ಇಷ್ಟಪಟ್ಟಿದ್ದೆ. ದೊಡ್ಡವನಾದಾಗ ಸವಾರಿ ಇಷ್ಟಪಟ್ಟೆ. ನೀವು ಮತ್ತೆ ಚಿತ್ರ ಮಾಡಬೇಕು, ಪರದೆ ಮೇಲೆ ಬರಬೇಕು. ಇದೇ ನಮ್ಮ ಹಾರೈಕೆ. ಶುಭವಾಗಲಿ." ಎಂದು ಭರತಶ್ರೀ ಟ್ವೀಟ್ ಮಾಡಿದ್ದರೆ "ಕಾಲೆಳೆಯುವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಅನ್ನಿಸುತ್ತದೆ. ನಿರ್ಲಕ್ಷ್ಯ ಮಾಡಿ ಮೇಡಂ. ಕಲೆಗೂ ವಯಸ್ಸಿಗೂ ಸಂಬಂಧ ಇಲ್ಲ." ಎಂದು ಚಂದ್ರಶೇಖರ್ ಎನ್. ಎನ್ನುವವರು ಹೇಳೀದ್ದಾರೆ.

ಇನ್ನು ವಿದ್ಯಾ ಎನ್ನುವ ಅಭಿಮಾನಿಯೊಬ್ಬರು "ಸರಿಯಾಗಿ ಹೇಳಿದ್ದೀರಿ ಮೇಡಂ... ನಮ್ಮ ಜನಕ್ಕೆ ಹೀರೋ ಮುಖದ ಮೇಲೆ ನೆರಿಗೆ ಬಂದ್ರೂ, ತಲೆ ಕೂದಲು ಬೆಳ್ಳಗಾದ್ರೂ, ಮಗಳ ವಯಸ್ಸಿನ ನಾಯಕಿ ಜೊತೆ ನಟಿಸಿದ್ರು ಇಷ್ಟ...ಅದೇ ನಾಯಕಿಯರು ಮದುವೆ ಆದಕೂಡಲೇ ವಯಸ್ಸಾಯ್ತು ಅಂತಾರೆ... ನಾಯಕಿಯ ವಯಸ್ಸಿಗೆ ಮಾತ್ರ ಬೆಲೆನಾ.. ಕಲೆಗೆ ಬೆಲೆಯೇ ಇಲ್ವಾ... ಏನ್ ಜನಾನೋ...ನೀವು ನಟಿಸಿ,all the best.." ಎಂದಿದ್ದಾರೆ. "ಕಾಗೆಗಳು ಕಾ ಕಾ ಅನ್ನೋದು ಸಹಜ ನೀವು ತಲೆ ಕೆಡಿಸಿಕೊಳ್ಳಬೇಡಿ ಅನು ಮೇಡಂ... ಕತ್ತೆ ಏನ್ ಗೊತು ಕಸ್ತೂರಿ ವಾಸ್ನೆ. ನೀವು ಯಾವಾಗಲೂ ನಮಗೆ ನೆಚ್ಚಿನ ನಟಿ..." ಎಂದು ಇನ್ನೋರ್ವರು ಟ್ವೀಟ್ ಮಾಡಿದ್ದಾರೆ. ಒಷ್ಟೇ ಅಲ್ಲದೆ ಇನ್ನೋರ್ವ ಟ್ವೀಟ್ ಮಾಡಿ "ಮಧು ಅವ್ರೆ, ಮುಂದೊಂದಿನ ನೀವು ಇಷ್ಟ ಪಡುವ ನಟನಿಗೂ ವಯಸ್ಸಾಗುತ್ತೆ.ಆವಾಗ್ಲೂ ಇದೇ ಮಾತು ಹೇಳ್ತಿರ.ಇನ್ನೊಬ್ರನ್ನು ಟೀಕಿಸೋದು ಅದು ನಮಗೆ ನಾವು ಮಾಡಿಕೊಳ್ಳುವ ಅವಮಾನ." ಎಂದು ಮಧುಸೂಧನ್ ಅವರಿಗೆ ಸರಿಯಾಗಿ ಜಾಡಿಸಿದ್ದಾನೆ.

ಇನ್ನು ನಟಿ ಅನು ಪ್ರಭಾಕರ್ ಹಲವು ವರ್ಷಗಳ ಬಳಿಕ ಲೇಖಕಿ, ಕಾದಂಬರಿಗಾರ್ತಿ ಸಾರಾ ಅಬುಬಕರ್ ಅವರ ವಜ್ರಗಳು’ ಕಾದಂಬರಿ ಆಧಾರಿತವಾಗಿರುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಂ ಬ್ಯಾಕ್ ಆಗುತ್ತಿದ್ದಾರೆ. ಕಳೆದ ವರ್ಷ `ಅನುಕ್ತಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಈ ಚಿತ್ರದ ಮೂಲಕ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಅಭಿನಯಕ್ಕೆ ಹಿಂತಿರುಗುತ್ತಿದ್ದಾರೆ. ಚಿತ್ರದ ಜೀವಾಳವಾಗಿರುವ `ನಫಿಜಾ’ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದು ಸಧ್ಯ ಚಿತ್ರದ ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT