ಧನಂಜಯ್ 
ಸಿನಿಮಾ ಸುದ್ದಿ

‘ಪಾಪ್​ ಕಾರ್ನ್​ ಮಂಕಿ ಟೈಗರ್':  ನೂರು ಅರ್ಥ ಹೇಳುತ್ತಿದೆ ಸೂರಿ ಟೀಸರ್ 

ಟಗರು ಚಿತ್ರದ ಮೂಲಕ ತನ್ನ ದಿಸೆಯನ್ನೇ ಬದಲಾಯಿಸಿಕೊಂಡ ಧನಂಜಯ್​ ‘ಪಾಪ್​ ಕಾರ್ನ್​ ಮಂಕಿ ಟೈಗರ್‘​ ಚಿತ್ರದಲ್ಲಿ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. 

ಟಗರು ಚಿತ್ರದ ಮೂಲಕ ತನ್ನ ದಿಸೆಯನ್ನೇ ಬದಲಾಯಿಸಿಕೊಂಡ ಧನಂಜಯ್​ ‘ಪಾಪ್​ ಕಾರ್ನ್​ ಮಂಕಿ ಟೈಗರ್‘​ ಚಿತ್ರದಲ್ಲಿ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. 

ಪೋಸ್ಟರ್​ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ‘ಪಾಪ್​ಕಾರ್ನ್​ ಮಂಕಿ ಟೈಗರ್’​ ಸಿನಿಮಾದ ಟೀಸರ್​ ರಿಲೀಸ್​ ಆಗಿದ್ದು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಲ್ಲದೆ, ಸಿನಿಮಾ ಏನನ್ನು ಹೇಳಲಿದೆ ಎನ್ನುವ ಚಿಕ್ಕ ಹಿಂಟ್​ ಸಿಕ್ಕಿದೆ. 

ಈ ಮೊದಲು ‘ಟಗರು’ ಮೂಲಕ ಪ್ರೇಕ್ಷಕರ ತಲೆಗೆ ಒಂದಷ್ಟು ಕೆಲಸಕೊಟ್ಟಿದ್ದರು ನಿರ್ದೇಶಕ ಸೂರಿ. ಈಗ ‘ಪಾಪ್​ಕಾರ್ನ್​ ಮಂಕಿ ಟೈಗರ್’ ಮೂಲಕ ಸೂರಿ ಪ್ರೇಕ್ಷಕರ ತಲೆಗೆ ಮತ್ತಷ್ಟು ಕೆಲಸ ಕೊಡುವ ಸೂಚನೆ ಟೀಸರ್​ನಲ್ಲಿ ಸಿಕ್ಕಿದೆ.

ಹಳೆಯ ಕಟ್ಟಡ, ನಲ್ಲಿಯಲ್ಲಿ ತೊಟ್ಟಿಕ್ಕುವ ನೀರು, ನೆಲಕ್ಕೆ ಬಿದ್ದ ರಕ್ತದ ಹೊಳೆ, ನದಿಯ ನೀರಲ್ಲಿ ಬರೆತ ರಕ್ತ, ಒಂದು ಕೊಲೆ, ಮುಗ್ಧ ಮಗುವಿನ ಮುಖ, ಈ ಮಧ್ಯೆ ಬಂದು ಹೋಗುವ ಅನೇಕ ಮುಖಗಳು. ಹೀಗೆ ಟೀಸರ್​ನಲ್ಲಿ ಸಾಕಷ್ಟು ವಿಚಾರಗಳನ್ನು ಎಷ್ಟು ಬೇಕೋ ಅಷ್ಟೇ ಹೇಳಿದ್ದಾರೆ ಸೂರಿ. ಈ ಮೂಲಕ ಕುತೂಹಲ ಹೆಚ್ಚಿಸುವ ಕೆಲಸ ಮಾಡಿದ್ದಾರೆ.

ಇನ್ನು, ಡಾಲಿ ಧನಂಜಯ್ ಟೀಸರ್​ನಲ್ಲಿ​ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದರೆ, ಸಿನಿಮಾದಲ್ಲೂ ಧನಂಜಯ್​ಗೆ ಹಲವು ಶೇಡ್​ಗಳಿವೆ ಎನ್ನುವ ವಿಚಾರ ಪಕ್ಕಾ ಆಗಿದೆ. ಚರಣ್​ ರಾಜ್​ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.

ಈ ಸಿನಿಮಾದ ಟೀಸರ್​ ಇಂದು​ ಬಿಡುಗಡೆಯಾಗಿದ್ದು, ಯ್ಯೂಟೂಬ್​ನಲ್ಲಿ ಹವಾ ಎಬ್ಬಿಸುತ್ತಿದೆ. ಮಾತ್ರವಲ್ಲದೆ, ಟ್ವಿಟ್ಟರ್​ನಲ್ಲೂ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಹೊಸ ಗೆಟಪ್​, ಖಡಕ್​ ಡೈಲಾಗ್​​ನಲ್ಲಿ​ ಕಾಣಿಸಿಕೊಂಡ ಧನಂಜಯ್​ ಟಗರು ಡಾಲಿಯಂತೆ ಮತ್ತೊಮ್ಮೆ ಹವಾ ಎಬ್ಬಿಸುವುದು ಪಕ್ಕಾ.

ಈ ಚಿತ್ರವನ್ನು ಸುಧೀರ್ ಕೆ.ಎಂ ನಿರ್ಮಿಸುತ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್​ ಸಂಕಲನ ಚಿತ್ರಕ್ಕಿದೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್, ನವೀನ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

SCROLL FOR NEXT